ನಾರ್ಣಕಜೆ ಒಕ್ಕೂಟ ಸಂಘಗಳ ಉದ್ಘಾಟನೆ

Advt_Headding_Middle
Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ನಾರ್ಣಕಜೆ ಒಕ್ಕೂಟಕ್ಕೆ ೩ ಹೊಸ ಸಂಘ ಆರಂಭಗೊಂಡು ಸೇರ್ಪಡೆ ಮಾಡಲಾಯಿತು. ದೊಡ್ಡತೋಟದಲ್ಲಿ ಶ್ರೀ ಗುರೂಜಿ ಪ್ರಗತಿ ಬಂದು ಸಂಘ, ನಾರ್ಣಕಜೆಯಲ್ಲಿ ನಿಸರ್ಗ ಮತ್ತು ಸಿಂಚನ ಎಂಬ ೨ಸಂಘ ರಚನೆ ಮಾಡಲಾಯಿತು. ವಲಯದ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆಯವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಸಂಘದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟ ಅಧ್ಯಕ್ಷರು ಭಾಸ್ಕರ್ ರಾವ್ ಚೆನ್ನಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭನಿಕಟ ಪೂರ್ವಾಧ್ಯಕ್ಷರು ಸೀತಾರಾಮ್ ಚೆನ್ನಡ್ಕ, ಒಕ್ಕೂಟ ಉಪಾಧ್ಯಕ್ಷರು ಗೀತಾ,ಸದಸ್ಯರು ಉಮೇಶ್ ಉಪಸ್ಥಿತರಿದ್ದರು. ಸಿಂಚನ ಸಂಘಕ್ಕೆ ಪುರುಷೋತ್ತಮ್, ಹರೀಶ್ ಚಿದಾನಂದ್, ರಘುರಾಮ್, ಸುಂದರ, ಲೋಕೇಶ್, ಶ್ರೀ ಗುರೂಜೀ ಸಂಘಕ್ಕೆ ರವಿ, ಉಮೇಶ್, ಸುಂದರ, ಜಯರಾಮ್, ನಿಂಗಪ್ಪ, ಹಾಗು ನಿಸರ್ಗ ಸಂಘಕ್ಕೆ ಸವಿತಾ, ಜಾನಕೀ, ಸುಶೀಲ, ಶ್ರೀಲತಾ,ರೂಪ, ಹರಿಣಾಕ್ಷಿ ಸದಸ್ಯರುಗಳಾಗಿ ಸೇರ್ಪಡೆಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.