ಮಲೆನಾಡು ಚಾರಿಟೇಬಲ್ ಟ್ರಸ್ಟ್, ಜನತಾ ಗ್ರೂಫ್ಸ್ & ಕಟ್ಟೆಕ್ಕಾರ್ ಗ್ರೂಪ್ಸ್ ವತಿಯಿಂದ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್‌ರವರಿಗೆ ಸನ್ಮಾನ

Advt_Headding_Middle
Advt_Headding_Middle

ಸುಳ್ಯ ತಾಲೂಕಿನಲ್ಲಿ 5 ತಿಂಗಳಿನಿಂದ ಜನಸಾಮಾನ್ಯರ ಮನಗೆದ್ದಿದ್ದ ಸುಳ್ಯದ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಅವರ ಸೇವೆಯನ್ನು ಗುರುತಿಸಿ ಸುಳ್ಯ ಮಲೆನಾಡು ಚಾರಿಟೇಬಲ್ ಟ್ರಸ್ಟ್, ಜನತಾ ಗ್ರೂಫ್ಸ್ & ಕಟ್ಟೆಕ್ಕಾರ್ ಗ್ರೂಪ್ಸ್ ವತಿಯಿಂದ ಜು.24ರಂದು ಸನ್ಮಾನಿಸಲಾಯಿತು.ಜನತಾ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್.ಕುಂಞಿ ಅಹಮ್ಮದ್ ಅವರಿಗೆ ಹಿರಿಯ ಉದ್ಯಮಿ ಹಾಜಿ ಅಬ್ಬಾಸ್ ಕಟ್ಟೆಕ್ಕಾರ್‍ಸ್ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಹಮೀದ್ ಜನತಾ, ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಎಂ.ಮುಸ್ತಫ, ಅನ್ಸಾರಿಯಾ ಯತೀಂಖಾನ ಅಧ್ಯಕ್ಷ ಮಜೀದ್ ಜನತಾ, ನಗರ ಪಂಚಾಯತ್ ಸದಸ್ಯ ಹಾಗೂ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್, ಅನ್ಸಾರುಲ್ ಮುಸ್ಲಿಮೀನ್ ಅಧ್ಯಕ್ಷ ಶುಕೂರ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಉದ್ಯಮಿಗಳಾದ ರಿಫಾಯಿ ಜನತಾ, ರಿಝ್‌ವಾನ್ ಜನತಾ, ಸೆಮೀರ್ ಕುಂಬ್ಲೆಕ್ಕಾರ್‍ಸ್, ರಜ್ಜು ಬಯ್ಯ, ಕಯ್ಯೂಮ್ ಕಟ್ಟೆಕ್ಕಾರ್‍ಸ್, ಅಬ್ದುಲ್ ಖಾದರ್, ರಫೀಕ್ ಚೆಂಗಳ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.