ಬೊಳುಬೈಲು: ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಲಾರಿ

Advt_Headding_Middle
Advt_Headding_Middle


ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು (ಕೆ.ಎ.45.. 0416) ರಸ್ತೆ ಬದಿಯ ತೋಟಕ್ಕೆ ನುಗ್ಗಿದ ಘಟನೆ ಜಾಲ್ಸೂರು ಗ್ರಾಮದ ಬೊಳುಬೈಲಿನಲ್ಲಿ ಜು.25ರಂದು ಮುಂಜಾನೆ ಸಂಭವಿಸಿದೆ.

ಕುಶಾಲನಗರದಿಂದ ಮಂಗಳೂರಿಗೆ ಕಾಫಿ ಲೋಡ್ ಕೊಂಡೊಯ್ಯುತ್ತಿದ್ದ ಲಾರಿ ಮುಂಜಾನೆ 3 ಗಂಟೆ ಸುಮಾರಿಗೆ ಚಾಲಕನಿಗೆ ನಿದ್ರೆ ಆವರಿಸಿದ ಪರಿಣಾಮ ನಿಯಂತ್ರಣ ತಪ್ಪಿ ಬೊಳುಬೈಲಿನಲ್ಲಿ ರಸ್ತೆ ಪಕ್ಕದ ತೋಟಕ್ಕೆ ಉರುಳಿದೆ. ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕನ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.