ಎನ್ನೆಂಸಿ: ನೇಚರ್ ಕ್ಲಬ್ ವತಿಯಿಂದ ಭತ್ತದ ಬದುಕು ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle

ನೆಹರೂ ಮೆಮೋರಿಯಲ್‌ಕಾಲೇಜು, ಸುಳ್ಯ ಇದರ ನೇಚರ್ ಕ್ಲಬ್ ನವತಿಯಿಂದ “ಭತ್ತದ ಬದುಕು” ನೇಜಿ ನೆಡುವ ಕಾರ್ಯಕ್ರಮವನ್ನು ಇತ್ತೀಚೆಗೆ ಮುಳಿಯಾದ ಸುಕುಮಾರನ್ ಎಂಬವರ ಗದ್ದೆಯಲ್ಲಿ ಹಮ್ಮಿಕೊಳ್ಳಲಾಯಿತು.

 

ಗ್ರಾಮ ಪಂಚಾಯತ್ ಮುಳಿಯಾರಿನ ಮಾಧವನ್ ನಾಯರ್, ನೇಜಿಯನ್ನು ನೇಚರ್‌ಕ್ಲಬ್ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರಸ್ತುತಕಾಲಘಟ್ಟದಲ್ಲಿ ಭತ್ತದ ನಾಟಿಕಡಿಮೆಯಾಗುತ್ತಾ ಹೋಗುತ್ತಿದೆ. ಇದನ್ನು ತಡೆಗಟ್ಟಲು ಇಂತಹ ಕಾರ್ಯಕ್ರಮಗಳ ಅಗತ್ಯ ಬಹಳಷ್ಟಿದೆ. ಆ ನಿಟ್ಟಿನಲ್ಲಿ ಉಳುಮೆ ಮಾಡದ ಭೂಮಿಯನ್ನು ಉತ್ತು ಬೆಳೆ ಬೆಳೆಯಲು ಪ್ರೇರೇಪಿಸಿದ ನೇಚರ್ ಕ್ಲಬ್‌ನ ಪ್ರಯತ್ನ ಶ್ಲಾಘನೀಯ ಎಂದರು. ಫಾರ್‌ಮರ್ ಕ್ಲಬ್‌ನ ಅಧ್ಯಕ್ಷ ಕೃಷ್ಣನ್ ನಾಯರ್ ಮಾತನಾಡಿ, ನೇಜಿ ನೆಟ್ಟು ಕೃಷಿ ಮಾಡಲು ಬೇಕಾದಎಲ್ಲಾರೀತಿಯ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು. ಕೋ ಆಪರೇಟಿವ್ ಬ್ಯಾಂಕ್ ಮುಳಿಯಾರಿನ ಸದಸ್ಯರಾದ ಬಾಲಕೃಷ್ಣನ್ ನಾಯರ್ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಭತ್ತದಕೃಷಿಯಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದ ಸುಕುಮಾರನ್ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ವಿಷ್ಣುಪ್ರಶಾಂತ್ ನೇಚರ್‌ಕ್ಲಬ್ ಕಾರ್ಯದರ್ಶಿ ವರ್ಷಾ ಎಂ ಎನ್‌ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೇಚರ್ ಕ್ಲಬ್‌ನ ಸಂಯೋಜಕ ಕುಲದೀಪ್ ಪೆಲ್ತಡ್ಕ, ಸ್ವಾಗತಿಸಿ, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕಿ ನಿಮಿಷಾ ಸುಕುಮಾರನ್ ವಂದಿಸಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಜಯರಾಮ್ ಬೆಲ್ಲುರಾಯ ಕಾರ್ಯಕ್ರಮ ನಿರೂಪಿಸಿದರು.
ಕ್ಲಬ್‌ನ ಸ್ಪರ್ಧಾ ಆಯೋಜನಾ ಸಂಚಾಲಕರಾದ ಶ್ರಾವ್ಯ ಒ ಎಸ್ ಮತ್ತು ಮಧುಶ್ರೀ ಬಿ ಎಸ್‌ಗದ್ದೆಯಲ್ಲಿ ನಿಧಿ ಶೋಧ, ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಿದರು. ಅಧ್ಯಾಪಕರಾದಕೃತಿಕಾ, ಶರ್ಮಿಳಾ, ಕೌಶಿಕ್ ಸಹಕರಿಸಿದರು. ನೇಚರ್‌ಕ್ಲಬ್‌ನಎಲ್ಲಾ ವಿದ್ಯಾರ್ಥಿಗಳು ಊರವರ ಜತೆಗೂಡಿ ನೇಜಿನೆಟ್ಟು ಸಂಭ್ರಮಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.