HomePage_Banner
HomePage_Banner
HomePage_Banner
HomePage_Banner

ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಕೇಂದ್ರ ಕಲ್ಯಾಣ ಸಂಘಟನೆಯು ಮಂಜೂರು ಮಾಡುವ ಎಲ್ಲಾ ತರಗತಿಗಳ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆನ್ ಲೈನ್ ಮೂಲಕ ಆಹ್ವಾನಿಸಲಾಗಿದೆ.
1 ನೇ ತರಗತಿಯಿಂದ 1೦ ನೇ ತರಗತಿವರೆಗಿನ ಅರ್ಜಿಗಳನ್ನು ಅಕ್ಟೋಬರ್ ೧೫ ರೊಳಗಾಗಿ ಹಾಗೂ ಪದವಿ ಪೂರ್ವದಿಂದ ಉನ್ನತ ಶಿಕ್ಷಣದ ಅರ್ಜಿಗಳನ್ನು ಅಕ್ಟೋಬರ್ 31  ರ ವರೆಗೆ ಸಲ್ಲಿಸಬಹುದು.

ಅರ್ಜಿಗಳನ್ನು ಸುಳ್ಯದ ಬೀಡಿ ಕೆಲಸಗಾರರ ಸಂಘದ ಕಛೇರಿಯಲ್ಲಿ ಆನ್ ಲೈನ್ ಮೂಲಕ ಭರ್ತಿ ಮಾಡಿ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ರಾಷ್ಟ್ರೀಕೃತ ಬ್ಯಾಂಕ್ ಪಾಸು ಪುಸ್ತಕ, ಆಧಾರ್ ಕಾರ್ಡು, ಬೀಡಿ ಐಡಿ ಕಾರ್ಡು, ರೇಷನ್ ಕಾರ್ಡು, ಶಾಲಾ-ಕಾಲೇಜುಗಳ ಪೂರ್ಣ ಹೆಸರು, ಮಾರ್ಕ್ಸ್ ಕಾರ್ಡು, ಆದಾಯ ಸರ್ಟಿಫಿಕೇಟ್, ಚಾಲ್ತಿಯಲ್ಲಿರುವ ಫೋನ್ ನಂಬರ್ ಮತ್ತು ಫೋನ್, ಈ-ಮೇಲ್ ಐಡಿ ಯೊಂದಿಗೆ ಕಛೇರಿಯನ್ನು ಸಂಪರ್ಕಿಸಲು ಸುಳ್ಯ ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರ.ಕಾರ್ಯದರ್ಶಿ ಕೆ.ಪಿ.ರಾಬರ್ಟ್ ಡಿಸೋಜಾ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸುಳ್ಯದ ಜಟ್ಟಿಪಳ್ಳ ರಸ್ತೆಯಲ್ಲಿರುವ ಬೀಡಿ ಕೆಲಸಗಾರರ ಸಂಘ ಸುಳ್ಯದ ಕಛೇರಿ ಅಥವಾ 9448858805 ಅಥವಾ 230162 ಫೋನ್ ನಂಬ್ರವನ್ನು ಸಂಪರ್ಕಿಸಲು ಹೇಳಿಕೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.