Breaking News

ದೇಶದೆಲ್ಲೆಡೆ ಖಾಸಗೀಕರಣದ ಜಪದಿಂದಾಗಿ ಆರ್ಥಿಕತೆ ವಿನಾಶದತ್ತ : ವಸಂತ ಆಚಾರ್

Advt_Headding_Middle

1990 ರ ದಶಕದ ನಂತರ ದೇಶದೆಲ್ಲೆಡೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳು ಹೆಚ್ಚೆಚ್ಚು ಜಾರಿಗೊಳ್ಳುತ್ತಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ತೀವ್ರ ವೇಗವನ್ನು ಪಡೆಯುತ್ತಿದೆ. ಅಮೇರಿಕನ್ ಸಾಮ್ಯಾಜ್ಯಶಾಹಿಗಳು ಭಾರತವನ್ನು ಕಿರಿಯ ಪಾಲುದಾರರನ್ನಾಗಿಸುವ ಮೂಲಕ ಜಾಗತಿಕ ಬಂಡವಾಳಶಾಹಿಗಳು ಭಾರತವನ್ನು ತನ್ನ ಮಾರುಕಟ್ಟೆಯನ್ನಾಗಿ ನಿರೂಪಿಸಿ, ದೇಶದ ಸಾರ್ವಜನಿಕ ಉದ್ದಿಮೆಗಳನ್ನೇ ನಾಶಗೊಳಿಸಿ ಕೋಟ್ಯಾಂತರ ಸಂಖ್ಯೆಯ ದುಡಿಯುವ ವರ್ಗದ ಬದುಕಿಗೆ ಕೊಡಲಿಪೆಟ್ಟನ್ನು ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಕೇಂದ್ರದ ನರೇಂದ್ರಮೋದಿ ಸರಕಾರದ ನೋಟು ರದ್ದತಿ,ಉSಖಿಯಂತಹ ಕ್ರಮಗಳಿಂದಾಗಿ ಲಕ್ಷಾಂತರ ಕೈಗಾರಿಕೆಗಳು ಮುಚ್ಚಿದ್ದು, ಕಾರ್ಮಿಕ ವರ್ಗ ಉದ್ಯೋಗಗಳನ್ನು ಕಳೆದುಕೊಂಡು ನಿರುದ್ಯೋಗದ ಕೂಪಕ್ಕೆ ಬಿದ್ದಿದೆ.ಕಳೆದ ೪೫ ವರ್ಷಗಳಲ್ಲೇ ನಿರುದ್ಯೋಗ ಸಮಸ್ಯೆಯು ಇಂದು ಭೀಕರವಾಗಿ ಕಾಡುತ್ತಿದೆ. ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದೆ. ಶಿಕ್ಷಣ, ಆರೋಗ್ಯ, ರೈಲ್ವೇ, ರಕ್ಷಣೆ ಸೇರಿದಂತೆ ಎಲ್ಲಾ ರಂಗಗಳನ್ನು ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಖಾಗೀಕರಣಗೊಳಿಸುವ ಮೂಲಕ ದೇಶದ ಅರ್ಥಿಕತೆಯನ್ನೇ ವಿನಾಶದತ್ತ ಕೊಂಡೊಯ್ಯುತ್ತಿದೆ ಎಂದು CITU ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಅಭಿಪ್ರಾಯ ಪಟ್ಟರು.

ಅವರು ಸುಳ್ಯ ನಗರದ ಅಂ ಬ್ಯಾಂಕ್ ಸಭಾಂಗಣದ ಕಾಂ.ಬಿ.ಮಾಧವ ವೇದಿಕೆಯಲ್ಲಿ ಜರುಗಿದ CITU 3ನೇ ಸುಳ್ಯ ತಾಲೂಕು ಸಮ್ಮೇಳನವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ದೇಶದ ಸ್ವಾತಂತ್ರ್ಯ, ಸಮಗ್ರತೆ, ಸೌಹಾರ್ದತೆಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಇಡೀ ದೇಶವನ್ನು ಒಂದಾಗಿ ನಿಲ್ಲುವಂತೆ ಮಾಡುವಲ್ಲಿ ಕಾರ್ಮಿಕ ವರ್ಗದ ಪಾತ್ರವೇ ಪ್ರಧಾನವಾಗಿದೆ. ಅಂತಹ ಕಾರ್ಮಿಕ ವರ್ಗದ ಮಧ್ಯೆ ಕೋಮುವಾದದ ವಿಷಬೀಜವನ್ನು ಬಿತ್ತಿ ಅನೈಕ್ಯತೆಯನ್ನು ಸ್ರಷ್ಠಿಸುವ ಮೂಲಕ ದೇಶವನ್ನೇ ಒಡೆಯಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಧಾರ್ಮಿಕ ಘೋಷಣೆಗಳನ್ನು ಕೂಗುವ ಮೂಲಕ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ದೇಶಪ್ರೇಮದ ಸರ್ಟಿಫಿಕೇಟ್ ನೀಡಲಾಗುತ್ತಿದೆ.ಹೀಗಾಗಿ ಇಡೀ ದೇಶವೇ ಬಲಪಂಥೀಯ ಫ್ಯಾಸಿಸ್ಟ್ ವಿಚಾರಧಾರೆಯತ್ತ ವಾಲುವ ಮುಖಾಂತರ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದ ಅಂಚಿನಲ್ಲಿದೆ. ಇಂತಹ ಸಂಧರ್ಭದಲ್ಲಿ ದೇಶವನ್ನು ಉಳಿಸಲು ಇಡೀ ಕಾರ್ಮಿಕ ವರ್ಗ ಒಂದಾಗಿ ನಿಲ್ಲಬೇಕಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ CITU ದ.ಕ.ಜಿಲ್ಲಾ ಸಮಿತಿ ಸದಸ್ಯರಾದ ರಾಬರ್ಟ್ ಡಿಸೋಜರವರು ಮಾತನಾಡುತ್ತಾ, ಸುಳ್ಯ ತಾಲೂಕಿನಲ್ಲಿ ವಿವಿಧ ವಿಭಾಗದ ಕಾರ್ಮಿಕರನ್ನು ಸಂಘಟಿಸುವ ಮೂಲಕ ಬಲಿಷ್ಠವಾದ ಕಾರ್ಮಿಕ ಚಳುವಳಿಯನ್ನು ಕಟ್ಟಲು ಮುಂದಾಗಬೇಕೆಂದು ಹೇಳಿದರು.

ವೇದಿಕೆಯಲ್ಲಿ ಅIಖಿU ಸುಳ್ಯ ತಾಲೂಕು ಕಾರ್ಯದರ್ಶಿ ಶಿವರಾಮ ಗೌಡ,ಉಪಾಧ್ಯಕ್ಷರಾದ ಕೆ.ಪಿ.ಜಾನಿ, ಅIಖಿU ಉಪಾಧ್ಯಕ್ಷರಾದ ಸುಂದರ ಆಚಾರಿ, ಕಟ್ಟಡ ಕಾರ್ಮಿಕ ಸಂಘದ ನಾಗರಾಜ್ ಹೆಚ್.ಕೆ., ಕಷ್ಣ ಕೇರ್ಪಳ , ಬೀಡಿ ಕೆಲಸಗಾರರ ಸಂಘದ ವಿಶಾಲಾಕ್ಷಿ ಅಜ್ಜಾವರ, ರಿಕ್ಷಾ ಚಾಲಕರ ಸಂಘದ ಅಬೂಬಕ್ಕರ್ ಅಜ್ಜಾವರ, ಸಮ್ಮೇಳನದ ಅಧ್ಯಕ್ಷತೆಯನ್ನು ಬಿಜು ಅಗಸ್ಟಿನ್ ವಹಿಸಿದ್ದರು. ಪಿ.ಆರ್. ನಾಗರಾಜ್ ಕಲ್ಲುಮುಟ್ಲು ಸ್ವಾಗತಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.