Breaking News

ಚಲನಶೀಲತೆ ಇರುವಲ್ಲಿ ಕ್ರಿಯಾಶೀಲತೆ ವೃದ್ಧಿ : ಶಿವಳ್ಳಿ ಸಂಪನ್ನ ಮಹಾಸಭೆಯಲ್ಲಿ ಹರಿಣಿ ಪುತ್ತೂರಾಯ

Advt_Headding_Middle
Advt_Headding_Middle

ನೀರು ನಿಂತಲ್ಲೇ ನಿಂತರೆ ಅದು ಕಲ್ಮಶಗೊಳ್ಳುತ್ತದೆ. ಇದು ಬದುಕಿಗೂ ಅನ್ವಯಿಸುತ್ತದೆ. ಚಲನಶೀಲತೆ ಇರುವಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ. ಆ ಮೂಲಕ ಬದುಕಿಗೊಂದು ಅರ್ಥ ಬರುತ್ತದೆ. ಸಂಘಟನೆಗಳಲ್ಲಿ ಚಲನಶೀಲತೆ ಇದ್ದರೆ ಅದು ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಶಿವಳ್ಳಿ ಸಂಪನ್ನ ಇದಕ್ಕೆ ಉದಾಹರಣೆಯಾಗಿದೆ ಎಂದು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿಪುತ್ತೂರಾಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಶ್ರೀಗುರುರಾಘವೇಂದ್ರ ಮಠದಲ್ಲಿ ಜರಗಿದ ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕುಟುಂಬ ಸಾಧಕಿಯರಿಗೆ ಸಮ್ಮಾನ :
ಕುಟುಂಬದ ಯಜಮಾನ ಅಕಾಲಿಕವಾಗಿ ನಿಧನಹೊಂದಿದಾಗ ಧೃತಿಗೆಡದೆ, ಆತ್ಮಸ್ಥೈರ್ಯದಿಂದ ಮಕ್ಕಳನ್ನು ಉತ್ತಮ ಸಾಧಕರಾಗಿ ಬೆಳೆಸಿದ ರತ್ನಾವತಿ ಸೋಮಯಾಗಿ, ಅಜ್ಜಾವರ ಸರಸ್ವತಿ ಬೈಪಾಡಿತ್ತಾಯ ಮತ್ತು ಕಮಲಮ್ಮ ಕಾಯಂಬಾಡಿ ಇವರೆಲ್ಲರನ್ನು ಬೃಂದಾವನ ಸೇವಾ ಸಮಿತಿ ಟ್ರಸ್ಟಿ ಸುಮಾ ಸುಬ್ಬಾರಾವ್ ಸಮ್ಮಾನಿಸಿದರು.
ಸಭಾಧ್ಯಕ್ಷತೆಯನ್ನು ಮುರಳೀಕೃಷ್ಣ ಕಣ್ಣರಾಯ ವಹಿಸಿದ್ದರು.

ಪ್ರತಿಭಾ ಪುರಸ್ಕಾರ :
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಕೃಪಾ ಅಮ್ಮಣ್ಣಾಯ ಹಾಗೂ ಸಿಇಟಿ ನೀಟ್ ಪರೀಕ್ಷೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ರ‍್ಯಾಂಕ್ ಪಡೆದ ಅಮಿಷಾ ಸೋಮಯಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಬೃಂದಾವನ ಸೇವಾಟ್ರಸ್ಟ್ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಉಪಸ್ಥಿತರಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಮೂಡಿತ್ತಾಯ ವೇದಿಕೆಯಲ್ಲಿದ್ದರು.
ಕಾರ್ಯದರ್ಶಿ ರಾಮಕುಮಾರ್ ಹೆಬ್ಬಾರ್ ಸ್ವಾಗತಿಸಿ, ಮಹಿಳಾ ಘಟಕದ ಕಾರ್ಯದರ್ಶಿ ಸೌಮ್ಯ ಸೋಮಯಾಗಿ ವರದಿ ವಾಚಿಸಿದರು. ಯುವ ಘಟಕದ ಅಧ್ಯಕ್ಷ ಪ್ರಥಮ ಮೂಡಿತ್ತಾಯ ವಂದಿಸಿದರು. ಶರಣ್ಯ ಮತ್ತು ಅರ್ಜುನ್ ಆಚಾರ್ ನಿರೂಪಿಸಿದರು. ಪೂರ್ವಾಧ್ಯಕ್ಷ ಪ್ರಕಾಶ್ ಮೂಡಿತ್ತಾಯ ಅಭಿನಂದನಾ ಮಾತುಗಳನ್ನಾಡಿದರು.
ಮಹಾಸಭೆಯಲ್ಲಿ ಮುಂದಿನ ಸಾಲಿನ ಅಧ್ಯಕ್ಷರಾಗಿ ರಾಮಕೃಷ್ಣ ಮಾಳತ್ತಾಯ ಅದಿಕಾರ ಸ್ವೀಕರಿಸಿದರು.
ಪ್ರವೀಣಾ ಸೋಮಯಾಗಿ, ಸಂಜನಾ ಸೋಮಯಾಗಿ, ಪ್ರಣವ್ ಮೂಡಿತ್ತಾಯ, ರೂಪಾ ಕಣ್ಣರಾಯ, ಹೇಮ ವೈಲಾಯ ಸಹಕರಿಸಿದರು. ಬಳಿಕ ದುರ್ಗಾಪೂಜೆ ವೇ|ಮೂ|ಶ್ರೀಹರಿ ಎಳಚಿತ್ತಾಯ ಅವರ ನೇತೃತ್ವದಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.