Breaking News

ಆ. 1: ಎಣ್ಮೂರು ಗ್ರಾಮಸಭೆ

Advt_Headding_Middle
Advt_Headding_Middle

ಎಣ್ಮೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮುರುಳ್ಯ ಮತ್ತು ಎಣ್ಮೂರು ಗ್ರಾಮದ 2019-20  ನೇ ಸಾಲಿನ ಪ್ರಥಮ ಹಂತದ ವಾರ್ಡ್ ಸಭೆಗಳನ್ನು ಮತ್ತು ಗ್ರಾಮಸಭೆಗಳನ್ನು ನಡೆಸಲಾಗುವುದು.
ಮಾನ್ಯಡ್ಕ ಸ.ಕಿ.ಪ್ರಾ.ಶಾಲೆಯಲ್ಲಿ ಜು. 3೦ರಂದು ಪೂ. 11 ಗಂಟೆಗೆ ಮುರುಳ್ಯ ವಾರ್ಡ್ ನಂ 1 ರ ವಾರ್ಡ್ ಸಭೆ ನಡೆಯಲಿದೆ. ಮುರುಳ್ಯ 2ನೇ ವಾರ್ಡ್‌ನ ವಾರ್ಡ್ ಸಭೆಯು ಸ.ಕಿ.ಪ್ರಾ. ಕಾಯರ್ತಡ್ಕ ಶಾಲೆಯಲ್ಲಿ ಮಧ್ಯಾಹ್ನ 12-3೦ಕ್ಕೆ ನಡೆಯಲಿದೆ. ಎಣ್ಮೂರು 1ನೇ ವಾರ್ಡ್‌ನ ವಾರ್ಡ್ ಸಭೆಯು ಅಪರಾಹ್ನ ಗಂಟೆ 2ಕ್ಕೆ ಹೇಮಳ ಶಾಲೆಯಲ್ಲಿ ಹಾಗೂ ಎಣ್ಮೂರು 2 ನೇ ವಾರ್ಡ್‌ನ ವಾರ್ಡ್‌ಸಭೆಯು ಅಪರಾಹ್ನ ಗಂಟೆ 4 ಕ್ಕೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.
ಆಗಸ್ಟ್ 1 ರಂದು ಮುರುಳ್ಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಲೆಕ್ಕಾಡಿಯಲ್ಲಿ ಗ್ರಾಮಸಭೆ ನಡೆಯಲಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಅಭಿಯಂತರರಾದ ಮಣಿಕಂಠನ್ ಅವರು ನೋಡೆಲ್ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ ಎಂದು ಪಂಚಾಯತ್ ಅಧ್ಯಕ್ಷರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.