ಕಾರ್ಯಕರ್ತರಲ್ಲಿ ನವ ಚೈತನ್ಯ ಮೂಡಿಸಿದ ಕೆ.ಸಿ.ಎಫ್. ದುಬೈ ಸೌತ್ ಝೋನ್ ಖವಾಇದ್ – 19 

Advt_Headding_Middle
Advt_Headding_Middle

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್.ದುಬೈ ಸೌತ್ ಝೋನ್ ವತಿಯಿಂದ ಸೆಕ್ಟರ್ ಮತ್ತು ಯುನಿಟ್ ಗಳ ಆಯ್ದ ಪ್ರತಿ ನಿಧಿಗಳಿಗೆ ಆಯೊಜಿಸಿದ ಖಾವಾಇದ್ -೧೯ ಎಂಬ ವಿಶೇಷ ಕಾರ್ಯಕ್ರಮ ದಿನಾಂಕ ೧೯ -೦೭ -೨೦೧೯ ಶುಕ್ರವಾರ ಜುಮುಅ ನಮಾಝ್ ನಂತರ ಬರ್ ದುಬೈ ಕೆ.ಸಿ.ಎಫ್ .ಸೆಂಟರನಲ್ಲಿ ದುಬೈ ಸೌತ್ ಝೋನ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ ಅಧ್ಯಕ್ಷತೆಯಲ್ಲಿ ನಡೆಯಿತು. ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ಶಾಹುಲ್ ಹಮೀದ್ ಸಖಾಫಿ ಮಾದಾಪುರ ಕಾರ್ಯ ಕ್ರಮ ಉದ್ಘಾಟಿಸಿದರು. ಐ.ಎನ್.ಸಿ. ಪ್ರಧಾನಕಾರ್ಯದರ್ಶಿ ಅಬ್ದುಲ್ ಹಮೀದ್ ಈಶ್ವರಮಂಗಿಲ ರವರಿಂದ ಶಿಲ್ಪಶಾಲೆ (ವಿವಿಧ ವಿಭಾಗಗಳ ಜವಬ್ದಾರಿ) ಯನ್ನು ಹ್ರಸ್ವವಾಗಿ ಮಂಡಿಸಿದರು. ಹಕೀಮ್ ಹಸನಿಯವರಿಂದ “ಸಂಘಟನೆ “ಎಂಬ ವಿಷಯದಲ್ಲಿ ತರಗತಿ ನಡೆಸಿದರು. ರಾಷ್ಟ್ರೀಯ ಸಮಿತಿ ಐ.ಎನ್.ಸಿ. ಕಂಟ್ರೊಲರ್ ಹಮೀದ್ ಸಅದಿ ಈಶ್ವರಮಂಗಲ, ರಾಷ್ಟ್ರೀಯ ಸಮೀತಿ ಆಡಳಿತ ಮತ್ತು ಕಛೇರಿ ಇಲಾಖೆ ಕಾರ್ಯದರ್ಶಿ ರಫೀಕ್ ಕಲ್ಲಡ್ಕ, ನಝೀರ್ ಹಾಜಿ ಕೆಮ್ಮಾರ ಮುಂತಾದ ವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಝೋನ್ ಸಂಘಟನಾ ಇಲಾಖೆ ಅಧ್ಯಕ್ಷರಾದ ರಫೀಕ್ ಜೆಪ್ಪು ಸ್ವಾಗತಿಸಿ ಸಂಘಟನಾ ಇಲಾಖೆ ಕಾರ್ಯದರ್ಶಿ ಆಸೀಫ್ ಇಂದ್ರಾಜೆ ವಂದಿಸಿದರು.ಝೋನ್ ಪ್ರಧಾನ ಕಾರ್ಯದರ್ಶಿ ಶರೀಫ್ ಹೊಸ್ಮಾರ್ ಕಾರ್ಯ ಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.