ಜು.31 : ಜಯನಗರ ಶಾಲಾ ಮುಖ್ಯೋಪಾಧ್ಯಾಯ ಶಾಂತಾರಾಮ ಕೆ.ಎಸ್.ನಿವೃತ್ತಿ

Advt_Headding_Middle
Advt_Headding_Middle

ಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಶಾಂತಾರಾಮ ಕೆ.ಎಸ್.ರವರು ಜು.31 ರಂದು ಸೇವೆಯಿಂದ ನಿವೃತ್ತಿಗೊಳ್ಳಲಿದ್ದಾರೆ.


ಶಿಕ್ಷಣ ಇಲಾಖೆಯಲ್ಲಿ ವಿವಿಧ ಶಾಲೆಗಳಲ್ಲಿ ಸುಮಾರು 39 ವರ್ಷಗಳ ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದ ಇವರು 1980 ರಿಂದ ಮಂಡೆಕೋಲು ಸ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದ ಇವರು ಅಲ್ಲಿ ಸುಮಾರು 10 ವರ್ಷ ಸೇವೆ ಸಲ್ಲಿಸಿ ನಂತರ 1990 ರಿಂದ 92 ರವರೆಗೆ ಉಬರಡ್ಕ ಮಿತ್ತೂರು ಸ.ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿ,1992 ರಿಂದ 1994 ರವರೆಗೆ ಮೈತಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿ ,1994 ರಿಂದ 2001 ರವರೆಗೆ ಐವರ್ನಾಡು ಸ.ಹಿ.ಪ್ರಾ.ಶಾಲೆಯಲ್ಲಿ ,2001 ರಿಂದ 2005 ರವರೆಗೆ ದೇರಾಜೆ ಸ.ಹಿ.ಪ್ರಾ.ಶಾಲೆಯಲ್ಲಿ,2005 ರಿಂದ 2008 ರವರೆಗೆ ಕೋಟೆಮುಂಡುಗಾರು ಸ.ಹಿ.ಪ್ರಾ.ಶಾಲೆಯಲ್ಲಿ 2008 ರಿಂದ 2013 ರವರೆಗೆ ತಂಟೆಪ್ಪಾಡಿ ಸ.ಕಿ.ಪ್ರಾ.ಶಾಲೆಯಲ್ಲಿ 2013 ರಿಂದ 2019 ರವರೆಗೆ ದರ್ಖಾಸ್ತು ಸ.ಹಿ.ಪ್ರಾ.ಶಾಲೆಯಲ್ಲಿ ಮುಖ್ಯೋಪಾಧ್ಯಾರಾಗಿ ಸೇವೆ ಸಲ್ಲಿಸಿ ಅಲ್ಲಿಂದ ಸುಳ್ಯ ಜಯನಗರ ಶಾಲೆಗೆ ವರ್ಗಾವಣೆಗೊಂಡು ಬಂದು ಜು.31 ರಂದು ಸೇವೆಯಿಂದ ನಿವೃತ್ತಿಗೊಳ್ಳಲಿದ್ದಾರೆ.

ಇವರು ಐವರ್ನಾಡು ಗ್ರಾಮದ ನಿಡುಬೆ ಹರಿರಾಮ ನಿಲಯದವರಾಗಿದ್ದು ಇವರ ಪತ್ನಿ ಶ್ರೀಮತಿ ಹರಿಣಾಕ್ಷಿಯವರು ಐವರ್ನಾಡು ಸ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
ಪುತ್ರ ಸಂದೇಶ್ ಇಂಜಿನಿಯರ್ ಆಗಿದ್ದು ಈಗ ಬಾಂಬೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಪುತ್ರಿ ಹರ್ಷಿತಾರವರು ವಿವಾಹವಾಗಿ ಪತಿ ರತ್ನಾಕರರವರೊಂದಿಗೆ ಸ್ವಂತ ಉದ್ಯೋಗ ಮಾಡುತ್ತಿದ್ದಾರೆ.

ಶಾಲೆಗಳಿಗೆ ಕೊಡುಗೆ 

ಬೆಳ್ಳಾರೆ ಸಮೂಹ ಸಂಪನ್ಮೂಲ‌ ಕೇಂದ್ರಕ್ಕೆ ಪ್ರಿಂಟರ್, ದರ್ಖಾಸ್ತು ಸ.ಹಿ.ಪ್ರಾ.ಶಾಲೆಗೆ ಬಟ್ಟಲು ಇಡುವ ಸ್ಟಾಂಡ್, ಮಂಡೆಕೋಲು ಸ.ಹಿ.ಪ್ರಾ.ಶಾಲೆಗೆ ಅನ್ನಬಡಿಸುವ ಚಕ್ರದ ಟ್ರಾಲಿ, ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ  ಜೋಕಾಲಿ ಸಹಿತ ಮಕ್ಕಳ‌ ಜಾರುಬಂಡಿ , ಮತ್ತು ಜಯನಗರ ಶಾಲೆಗೆ ಬಟ್ಟಲು ಇಡುವ ಸ್ಟಾಂಡನ್ನು ತಾವು ಸೇವೆ ಸಲ್ಲಿಸಿದ ಶಾಲೆಗಳಿಗೆ ಕೊಡುಗೆಯಾಗಿ ನೀಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.