ನಡುಗಲ್ಲು : ವನಮಹೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ

Advt_Headding_Middle
Advt_Headding_Middle

ಗ್ರಾಮ ಅರಣ್ಯ ಸಮಿತಿ ನಾಲ್ಕೂರು ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡುಗಲ್ಲು ಶಾಲೆಯಲ್ಲಿ ವನಮಹೋತ್ಸವ ಆಚರಣೆ ಮತ್ತು ನಿವೃತ್ತ ಫಾರೆಸ್ಟರ್ ಶಿವಶಂಕರ ಬಳ್ಪರವರಿಗೆ ಬೀಳ್ಕೊಡುವ ಸಮಾರಂಭವು ನಡೆಯಿತು.

ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿಜಯಕುಮಾರ್ ಚಾರ್ಮತ, ಶಾಲಾ ಮುಖ್ಯ ಗುರುಗಳಾದ ವಸಂತಿ, ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಡಿ., ಪ್ರಗತಿಪರ ಕೃಷಿಕ ರವೀಂದ್ರ ಕೊರಂಬಟ, ಭಜನಾ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ಪಾಲ್ತಾಡು, ಎಪಿಎಂಸಿ ಸದಸ್ಯ ಬಾಲಕೃಷ್ಣ ಉಜಿರಡ್ಕ, ಯುವಕ ಮಂಡಲದ ಅಧ್ಯಕ್ಷ ಕೇಶರಾಜ, ಒಕ್ಕೂಟದ ಅಧ್ಯಕ್ಷ ಸತೀಶ್ ಬೊಂಬುಳಿ, ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಕಿಶೋರಿ ಚಾರ್ಮತ, ಮಹಿಳಾ ಮಂಡಲದ ಅಧ್ಯಕ್ಷೆ ಉಮೇಶ್ವರಿ ಎನ್. ಕೆ., ನವೀನ ಬಾಳುಗೋಡು, ಸ್ವಸಹಾಯ ಸಂಘದ ಸದಸ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಧನಂಜಯ ಕುಕ್ಕುಡೇಲು, ವೀರಭದ್ರಯ್ಯ ಕರಣಿಮಠ, ಶೋಭಿತ್ ಕುಮಾರ್ ಹಾಗೂ ಮಕ್ಕಳು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ರವೀಂದ್ರ ಕೊರಂಬಟರವರು ಶಿವಶಂಕರ ದಂಪತಿಗಳನ್ನು ಸನ್ಮಾನಿಸಿದರು. ಸುಬ್ರಹ್ಮಣ್ಯ ದೇರಪಜ್ಜನಮನೆ ಸ್ವಾಗತಿಸಿ, ಶಿಕ್ಷಕಿ ಕುಸುಮಾವತಿ ವಂದಿಸಿದರು. ಶಿಕ್ಷಕಿ ವನಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.