Breaking News

ಸುಪ್ರಿತಾ ಬಿ.ಜಿ.ಗೆ ಎಐಸಿಇ -ಎಸ್.ಆರ್.ಎಫ್. ಪರೀಕ್ಷೆಯಲ್ಲಿ ರ‍್ಯಾಂಕ್

Advt_Headding_Middle
Advt_Headding_Middle

ಕೆಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಭಾರತೀಯ ಕೃಷಿ ಸಂಶೋಧನಾ ಪರಿಷತ್ ನಡೆಸುವ ಕೃಷಿ ಯುನಿವರ್ಸಿಟಿ ಪ್ರವೇಶ ಪರೀಕ್ಷೆ- 2019 ರಲ್ಲಿ ಕೊಯಿನಾಡು ಕಲ್ಯಾಳದ ಕು. ಸುಪ್ರಿತಾ ಬಿ.ಜಿ. ಸಾಮಾನ್ಯ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಹಾಗೂ ಒಬಿಸಿ ವಿಭಾಗದಲ್ಲಿ ಪ್ರಥಮ ರ‍್ಯಾಂಕನ್ನು ಪಡೆದಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ದೇಶದಲ್ಲಿ 4 ಡೀಮ್ಡ್ ಕೃಷಿ ವಿಶ್ವವಿದ್ಯಾನಿಲಯಗಳನ್ನು, 5೦ ಕೃಷಿ ಸಂಸ್ಥೆಗಳನ್ನು, 17 ರಾಷ್ಟ್ರೀಯ ಕೃಷಿ ಸಂಶೋದನಾ ಕೇಂದ್ರಗಳನ್ನು ಹೊಂದಿದ್ದು, ಸುಪ್ರಿತಾ ಈ ಯಾವ ಸಂಸ್ಥೆಗಳಲ್ಲಿಯೂ ಪ್ರವೇಶ ಪಡೆಯಬಹುದಾಗಿದೆ.
ಸುಪ್ರಿತಾರವರು ಕೊಡಗು ಸಂಪಾಜೆ ಗ್ರಾಮದ ಮಾಜಿ ಗ್ರಾ.ಪಂ. ಅಧ್ಯಕ್ಷ ಹಾಗೂ ಪಯಸ್ವಿನಿ ಸೊಸೈಟಿಯ ಮಾಜಿ ಅಧ್ಯಕ್ಷ ಕಲ್ಯಾಳದ ಬಿ.ಎ. ಗಣಪತಿ ಹಾಗೂ ವಿಮಲ ದಂಪತಿಯ ಪುತ್ರಿ. ಇವರು 1ನೇ ಮತ್ತು 2 ನೇ ತರಗತಿಯನ್ನು ಕಲ್ಯಾಳ ಶಾಲೆಯಲ್ಲಿ, 3 ರಿಂದ 1೦ನೇ ತರಗತಿವರೆಗೆ ಸತ್ಯಸಾಯಿ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ, ಪಿಯುಸಿ ವಿದ್ಯಾಭ್ಯಾಸವನ್ನು ಮಂಗಳೂರಿನ ಅಲೋಸಿಯಸ್ ಕಾಲೇಜಿನಲ್ಲಿ, ಬಿ..ಎಸ್‌ಸಿ ಪದವಿಯನ್ನು ಶಿರಸಿ ಯುನಿವರ್ಸಿಟಿಯಲ್ಲಿ, ಎಂ.ಎಸ್ಸಿ ಪದವಿಯನ್ನು ಪಂಜಾಬಿನ ಲೂದಿಯಾನ ಯುನಿವರ್ಸಿಟಿಯಲ್ಲಿ ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.