ಪೆರಾಜೆ : ಗ್ರಾಮ ಸಭೆ

Advt_Headding_Middle
Advt_Headding_Middle

ಒಣಗಿದ ಮರವನ್ನು ತೆರವುಗೊಳಿಸಿ, ಅಪಾಯದಿಂದ ಪಾರಾಗುವಂತೆ ಮಾಡಿ – ಗ್ರಾಮಸ್ಥರು

ಪೆರಾಜೆ ಗ್ರಾಮಸಭೆಯು ಜು.24 ರಂದು ನಡೆಯಿತು. ಗ್ರಾಮಸಭೆಯ ಅಧ್ಯಕ್ಷತೆಯನ್ನು ಜಯಲಕ್ಷ್ಮಿ ದರಣಿಧರ, ನೋಡೆಲ್ ಅಧಿಕಾರಿಯಾಗಿ ಸಮಾಜಕಲ್ಯಾಣ ಇಲಾಖೆ ಚಿಕ್ಕಬಸವಯ್ಯ ವಹಿಸಿದ್ದರು. ಹಿಂದಿನ ಗ್ರಾಮ ಸಭೆಯ ವರದಿಯನ್ನು ಕಾರ್ಯದರ್ಶಿ ಎಸ್.ಜೆ ಕುಮಾರರವರು ವಾಚಿಸಿದರು. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಸ್ವಾಗತಿಸಿದರು.

ಅನುಷ್ಠಾನ ವರದಿಯನ್ನು ಓದುತ್ತಿದ್ದಂತೆ ಮನು ಪೆರುಮುಂಡರವರು ಪುತ್ಯ ಅಂಗನವಾಡಿ ಬಳಿಯಿರುವ ಮರವನ್ನು ತೆರೆವುಗೊಳಿಸುವ ಬಗ್ಗೆ ಕೈಗೊಂಡಿರುವ ಪ್ರಸ್ತಾಪದ ಬಗ್ಗೆ ಕೇಳಿದಾಗ ಪಿ.ಡಿ.ಓ ರವರು “ಅದು ಅರಣ್ಯ ಇಲಾಖೆಗೆ ಸಂಬಂಧಪಟ್ಟದ್ದು ಅಲ್ಲದೇ ಬೀಟೆ ಮರವನ್ನು ಕಡಿಯಲು ಕಾನೂನು ಪ್ರಕಾರ ಕಷ್ಟ ಅರಣ್ಯ ಇಲಾಖೆಯವರು ಆ ಸಂದರ್ಭದಲ್ಲಿ ಗ್ರಾಮಸಭೆಗೆ ಬಂದಿರಲಿಲ್ಲ. ಬಂದ ಕೂಡಲೇ ಅದರ ಮಾಹಿತಿಯನ್ನು ಕೇಳುವ ಎಂದರು. ಪೆರಾಜೆ ಪಂಚಾಯತ್ ಬಳಿ ಬೃಹತ್ ಆಕಾರದ ಒಣ ಮರವೊಂದು ಬೀಳುವ ಹಂತದಲ್ಲಿದೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದಿರಿ? ಎಂದು ಗ್ರಾಮಸ್ಥರು ಕೇಳಿದಾಗ ತಾ.ಪಂ ಸದಸ್ಯ ನಾಗೇಶ್ ಕುಂದಲ್ಪಾಡಿಯವರು ಇದರ ಬಗ್ಗೆ ಎರಡು ವರ್ಷದಿಂದ ಸಂಬಂಧಪಟ್ಟ ಇಲಾಖೆಗೆ ತಿಳಿಸಿದರೂ ಏನು ಪ್ರಯೋಜನವಾಗಿಲ್ಲ. ಅದು ಆಲೆಟ್ಟಿ ಗ್ರಾಮ ಪಂಚಾಯತ್‌ಗೆ ಸಂಬಂಧಪಟ್ಟ ಜಾಗ ಅಲ್ಲದೇ ಸುಳ್ಯ ಅರಣ್ಯ ಇಲಾಖೆಗೆ ಬರುತ್ತದೆ. ಮೆಸ್ಕಾಂ ಹಿಂದಿನ ಜೆ.ಇ ಯವರೊಂದಿಗೆ ಲೈನ್ ತೆರವು ಮಾಡಿಕೊಡಲು ವಿನಂತಿಸಿ ಜಗಳವಾಡಿ ಕೂಡ ಆಗಿದೆ ಯಾವುದೇ ಪ್ರಯೋಜನವಿಲ್ಲ. ಕಳೆದ ವರ್ಷದಂತೆ ಈ ಸಲ ಮಳೆ ಬರುತ್ತಿದ್ದರೆ ಈಗಾಗಲೇ ಮರ ಬಿದ್ದು ಅಪಾಯ ಬರುತ್ತಿತ್ತು. ಹತ್ತಿರವೇ ಹೆಚ್.ಟಿ ಲೈನ್ ಮನೆ ಮತ್ತು ರಾಜ್ಯ ಹೆದ್ದಾರಿ ಇರುವ ಕಾರಣ ಇಂದಲ್ಲ ನಾಳೆ ಸಮಸ್ಯೆ ಬರಬಹುದೆಂದು ಜಾಗೃತರಾಗಿ ಪಂಚಾಯಾತ್ ಮುಖಾಂತರ ಕೂಡ ಎಲ್ಲಾ ಇಲಾಖೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದರು. ವಾರ್ಡ್ ಸಭೆಯ ವರದಿಯನ್ನು ವಾರ್ಡಿನ ಸದಸ್ಯರೇ ಓದಬೇಕೆಂದು ಮನು ಪೆರುಮುಂಡ ಹೇಳಿದಾಗ ಅದಕ್ಕೆ ಉತ್ತರಿಸಿದ ನೋಡೆಲ್ ಅಧಿಕಾರಿ ಅಂತ ಕ್ರಮ ಇಲ್ಲವೆಂದು ಹೇಳಿದರು. ಪೆರಾಜೆ ದೂರವಾಣಿ ಸಂಪರ್ಕವಿಲ್ಲದೆ ಕುಗ್ರಾಮದಂತಾಗಿದೆ. ಮೊಬೈಲ್ ವ್ಯವಸ್ಥೆ ನಮ್ಮಲಿಲ್ಲ.

೩೦-೪೦ರಷ್ಟು ಲ್ಯಾಂಡ್ ಲೈನ್‌ಗಳು ಇವೆ ಅದನ್ನಾದರು ಜನರಿಗೆ ಉಪಯೊಗವಾಗುವಂತೆ ಮಾಡುವುದು ಒಳ್ಳೆಯದು ಎಂದು ಎನ್.ಎ ಜಿತೇಂದ್ರ ಸಭೆಗೆ ತಿಳಿಸಿದರು. ಚುನಾವಣೆ ಬಂದಾಗ ಗ್ರಾಮ ಪಂಚಾಯತ್ ಮತ್ತು ಲೋಕಸಭಾ ಚುನಾವಣೆಗೆ ವಾರ್ಡ್‌ಗಳ ಸಂಖ್ಯೆ ಬದಲಾವಣೆ ಯಾಕೆ? ಎಂದು ಲೋಕನಾಥ ಅಮೆಚೂರು ಮತ್ತು ಎ.ಸಿ ಹೊನ್ನಪ್ಪರವರು ಕಂದಾಯ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿ ಎಂದರು. ಮೂಲೆಮಜಲು ಬಳಿ ಡಾಮರೀಕರಣವು ಕಳಪೆಯಾದ ಬಗ್ಗೆ ಎ.ಸಿ ಹೊನ್ನಪ್ಪ , ಲೋಕನಾಥ ಅಮೆಚೂರು, ಗಾಂಧಿಪ್ರಸಾದ್ ಬಂಗಾರಕೋಡಿ ಮತ್ತಿತ್ತರರು ಸಭೆಯ ಗಮನಕ್ಕೆ ತಂದಾಗ ತಾ.ಪಂ ಸದಸ್ಯ ನಾಗೇಶ್ ಕುಂದಲ್ಪಾಡಿಯವರು ಈ ಹಿಂದೆಯೇ ಪಿಡಬ್ಯುಡಿ ಕಂಟ್ರಾಟ್ಟರ್‌ದಾರ ಬಶೀರ್‌ನನ್ನು ಬ್ಲ್ಯಾಕ್ ಲೀಸ್ಟ್‌ಗೆ ಸೇರಿಸಿ ಮಾಡಿದ ಕಾಮಗಾರಿಗೆ ಬಿಲ್ಲು ಪಾವತಿಸುವುದು ಬೇಡ ಎಂದರು. ಆಗ ಗ್ರಾಮಸ್ಥರು ಈ ರೋಡನ್ನು ಮರುಡಾಮರೀಕರಣ ಮಾಡಿ ಕೊಡಲಿ ಎಂದು ಹೇಳಿದರು. ಅಕ್ರಮ ಮದ್ಯ, ಕೋಳಿ ಅಂಕದ ಬಗ್ಗೆ ಸಭೆಯಲ್ಲಿ ಚರ್ಚೆಯಾದಾಗ ಪೊಲೀಸ್ ಅಧಿಕಾರಿಗಳು ಇದಕ್ಕೆ ಅವಕಾವಿರುದಿಲ್ಲ. ಇಂತಹ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಬೀಟ್ ಪೊಲೀಸ್ ತನ್ನ ಮೊಬೈಲ್ ನಂಬರ್‌ನ್ನು ಗ್ರಾಮಸ್ಥರಿಗೆ ನೀಡಿ ದೂರು ಕೊಟ್ಟವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು. ಆನೆ ಹಾವಳಿ ಇನ್ನಿತರ ಕಾಡು ಪ್ರಾಣಿಗಳ ರಕ್ಷಣೆಗೆ ಆರಣ್ಯ ಇಲಾಖೆಯಲ್ಲಿ ವ್ಯವಸ್ಥೆಯಿದೆ. ಹಾಗೆಯೇ ಮಂಗಗಳ ಹಾವಳಿಗೆ ಅರಣ್ಯ ಇಲಾಖೆಯಲ್ಲಿ ವ್ಯವಸ್ಥೆಯಿದೆಯೇ? ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಅರಣ್ಯ ಇಲಾಖೆಯವರು ಇದನ್ನು ಹಿಡಿದು ಎಲ್ಲಿಗೆ ಬಿಡುವುದು? ಎಂದು ಕೇಳಿದರು. ಈ ಸಂದರ್ಭದಲ್ಲಿ ಎದ್ದು ನಿಂತ ಅಶೋಕ್ ಪಿಚೆಯವರು ಇದು ಗ್ರಾಮ ಸಭೆ ತಮಾಷೆ ಮಾತನಾಡುವುದು ಬೇಡವೆಂದರು. ಮನು ಪೆರುಮುಂಡರವರು ಉದ್ಯೋಗ ಖಾತರಿಯಲ್ಲಿ ಉದಯ ಕುಂಬಳಚೇರಿ ಅಡ್ಕದ ಕುಟುಂಬದ ದೈವಸ್ಥಾನಕ್ಕೆ ಕೊಟ್ಟಿದ್ದಿರಿ ಎಂದು ಪ್ರಸ್ತಾಪಿಸಿದಾಗ ಉದಯ ಕುಂಬಳಚೇರಿಯವರು ಎದ್ದು ನಿಂತು ಇದರ ಬಗ್ಗೆ ಈ ಹಿಂದೆಯೇ ನೀವು ಲೋಕಾಯುಕ್ತಕ್ಕೆ ದೂರು ನೀಡಿ ಅವರೇ ನಿಮಗೆ ಉತ್ತರ ಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು. ಅಡ್ಕ ಕುಟುಂಬಸ್ಥರಿಗೆ ಕೊಟ್ಟ ಬಾವಿ ಆಗಿದೆ ಎಂದು ಚಿನ್ನಪ್ಪ ಅಡ್ಕರವರು ತಿಳಿಸಿದರು. ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ನಾಗೇಶ್ ಕುಂದಲ್ಪಾಡಿಯವರು ಮಾತನಾಡಿ ಇದರ ಬಗ್ಗೆ ಮಾಹಿತಿಯನ್ನು ನನ್ನಲ್ಲಿ ಕೇಳುತ್ತಿದ್ದರೆ ಸರಿಯಾದ ಮಾಹಿತಿಯನ್ನು ನಾನು ಕೊಡುತ್ತಿದ್ದೆ. ನಿಮಗೆ ಲೋಕಾಯುಕ್ತಕ್ಕೆ ಬರೆಯುವ ಅಗತ್ಯವಿರಲಿಲ್ಲ ಪಂಚಾಯತ್‌ನಿಂದ ಬಂದ ಅನುದಾನ ಹಿಂದೆ ಹೋಗುವುದು ಬೇಡವೆಂದು ಅಗತ್ಯವಿದ್ದಲ್ಲಿ ಬಾವಿ ತೆರೆಯಲಾಗಿದೆ. ಆದರೆ ಜಾಗ ಬದಲಾಗಿರಬಹುದು. ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು. ಕೊಳೆರೋಗದ ಪರಿಹಾರ ಸಂತ್ರಸ್ತರಿಗೆ ಸರಿಯಾಗಿ ಸಿಗಲಿಲ್ಲ ಎಂದು ಎನ್.ಎ ಜಿತೇಂದ್ರರವರು ಕಂದಾಯ ಇಲಾಖೆಯವರ ಗಮನಕ್ಕೆ ತಂದಾಗ ಅದು ಆದಾರ್‌ಕಾರ್ಡ್ ದಾಖಲೆಗಳು ಸರಿಯಾಗಿ ಇಲ್ಲದವರಿಗೆ ಸಮಸ್ಯೆಯಾಗಿದೆ ಎಂದು ಉತ್ತರ ಕೊಟ್ಟಾಗ ದಾಖಲೆಗಳು ಸರಿಯಾಗಿದ್ದರು ಬರಲಿಲ್ಲ ಎಂದು ಎನ್.ಎ ಜಿತೇಂದ್ರರವರು ಹೇಳಿದರು. ಇದರ ಬಗ್ಗೆ ಪರಿಶೀಲನೆ ನಡೆಸುವಂತೆ ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು. ಇಲಾಖಾಧಿಕಾರಿಗಳು ತಮ್ಮ ಇಲಾಖೆಯಲ್ಲಿ ದೊರೆಯುವ ಸವಲತ್ತಿನ ಬಗ್ಗೆ ಸಭೆಗೆ ತಿಳಿಸಿದರು. ಕೆಲವು ಅಧಿಕಾರಿಗಳು ಗ್ರಾಮಸಭೆಗೆ ಬಾರದಿರುವ ಬಗ್ಗೆ ನೋಡೆಲ್ ಅಧಿಕಾರಿಯವರ ಗಮನಕ್ಕೆ ತಂದಾಗ ಮೇಲಾಧಿಕಾರಿಗಳಿಗೆ ಬರೆದು ತಿಳಿಸುವುದೆಂದು ಗ್ರಾಮ ಸಭೆಯು ಬೆಳಿಗ್ಗೆ ೧೦ರಿಂದ ಪ್ರಾರಂಭಗೊಂಡು ಮದ್ಯಾಹ್ನ ೨.೩೦ರವರೆಗೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.