ಮೊಗರ್ಪಣೆ : ವಿಶ್ರಾಂತಿ ಚಯರ್ ಗಾರ್ಡನ್ ಉದ್ಘಾಟನೆ ಹಾಗೂ ತಹಶಿಲ್ದಾರರಿಗೆ ಸನ್ಮಾನ

Advt_Headding_Middle
Advt_Headding_Middle

ಸುಳ್ಯ ಮೊಗರ್ಪಣೆ ಮಸೀದಿಯ ಬಳಿ ಕಸದರಾಶಿ ಹಾಕುತ್ತಿದ್ದು, ಇದನ್ನು ಸ್ವಚ ಸುಳ್ಯ ಕಾರ್ಯಕ್ರಮದ ಅಂಗವಾಗಿ ಹಳೇಗೆಟಿನಿಂದ ಜ್ಯೋತಿ ಸರ್ಕಲ್ ವರೆಗೆ ಸ್ವಚತೆ ಕಾರ್ಯಕ್ರಮದ ದಿನ ಸುಳ್ಯ ತಹಶಿಲ್ದಾರ್ ಭೇಟಿ ನಿಡಿದರು. ಈ ಸ್ಥಳದಲ್ಲಿ ಕಸ ಹಾಕದ ರೀತಿಯಲ್ಲಿ ನಾಲ್ಕು ಗಿಡನೆಟ್ಟು ಒಂದು ಪುಟ್ಟ ಗಾರ್ಡನ್ ತರಮಾಡಿ ಎಂದು ಸ್ವಚ್ಛ ಸುಳ್ಯ ಪರಿಕಲ್ಪನೆ ರೂವಾರಿಗಳಾದ ವಿನೋದ್ ಲಸ್ರಾದೊ ಮತ್ತು ಸುಳ್ಯ ವರ್ತಕರ ಸಂಘದ ಅಧ್ಯಕ್ಷರಲ್ಲಿ ವಿನಂತಿಸಿಸರು ಅವರ ವಿನಂತಿ ಹಳೇಗೆಟು ಶೈನಿಂಗ್ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಸದಸ್ಯರ ಮುಖಾಂತರ ಮೊಗರ್ಪಣೆ ಕಸ ಹಾಕುತ್ತಿದ್ದ ಸ್ಥಳಕ್ಕೆ ವಿಶ್ರಾಂತಿ ಚಯರ್ ಕೊಡುಗೆಯಾಗಿ ನೀಡಿದರು. ಅಲ್ಲೇ ಸ್ವಲ್ಪ ಗಿಡಗಳನ್ನು ನೆಟ್ಟು ಸ್ವಚ ಪರಿಸರವಾಗಿ ನಿರ್ಮಿಸಿದರು.


ಇದರ ಉದ್ಘಾಟನೆ ಜು.೨೫ ರಂದು ಸುಳ್ಯ ತಹಶಿಲ್ದಾರ್ ಕುಂಙಿ ಅಹ್ಮದ್‌ರವರು ನಿರ್ವಹಿಸಿದರು. ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ನ.ಪಂ ಕಂದಾಯ ಅಧಿಕಾರಿ ಧನಂಜಯ, ನ.ಪಂ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್, ಸುಳ್ಯ ಸ್ವಚತೆ ರಾಯಭಾರಿ ವಿನೋದ್ ಲಸ್ರಾದೊ,ತಾಲೂಕು ಕಂದಾಯ ಅಧಿಕಾರಿ ಕೊರಗಪ್ಪ ಹೆಗ್ಡೆ,ನ.ಪಂ ಸದಸ್ಯರಾದ ರಾಮಕೃಷ್ಣ ಭಟ್,ಶಿಲ್ಪ, ಧೀರ ಕ್ರಾಸ್ತ,ಬುದ್ದನಾಯ್ಕ,ಮೊದಲಾದವರು ಉಪಸ್ಥಿತರಿದ್ದರು ಉಸ್ಮನ್ ಜಯನಗರ ಸ್ವಾಗತಿಸಿದರು ಇ ಸಂದರ್ಭದಲ್ಲಿ ತಹಶಿಲ್ದಾರ್ ಕುಂಙಿ ಅಹ್ಮದ್ ರವರನ್ನು ಸನ್ಮಾನಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.