ಸುಳ್ಯ ಎನ್ನೆಂಪಿಯುಸಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Advt_Headding_Middle
Advt_Headding_Middle

ಸುಳ್ಯ ಎನ್ನೆಂಪಿಯುಸಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಕಾಲೇಜಿನ ಇತಿಹಾಸ ಉಪನ್ಯಾಸಕ ಹರೀಶ್ ಸಿ. ಅವರು ಕಾರ್ಗಿಲ್ ವಿಜಯ್ ದಿವಸ್ ಕಾರ್‍ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿ, ದುರ್ಗಮವಾದ ಪ್ರದೇಶಗಳಲ್ಲಿ ನಮ್ಮ ಸೈನಿಕರ ಧೈರ್‍ಯಶಾಲಿ ಹೋರಾಟದಿಂದ ಜುಲೈ 26 ಭಾರತೀಯರಿಗೆ ಐತಿಹಾಸಿಕ ದಿನವಾಗಿ ಕಾರ್ಗಿಲ್ ವಿಜಯ ದಿವಸವಾಗಿ ಆಚರಿಸುತ್ತಿದ್ದೇವೆ. ನಮ್ಮ ಸೈನಿಕರ ಒಗ್ಗಟ್ಟು ಈ ಯುದ್ಧದ ಯಶಸ್ವಿಗೆ ಕಾರಣ ಎಂದರು.
ಸಭಾಧ್ಯಕ್ಷತೆಯನ್ನು ಪ್ರಾಂಶುಪಾಲೆ ಶ್ರೀಮತಿ ಹರಿಣಿ ಪುತ್ತೂರಾಯ ವಹಿಸಿದ್ದರು. ವಿ.ಕ್ಷೇಮಾಧಿಕಾರಿ ಶ್ರೀ ಲಕ್ಷ್ಮಣ್ ಏನೇಕಲ್, ವಿ.ನಾಯಕ ರಜತ್ ಡಿ,ನಾಯಕಿ ವಿಸ್ಮಿತಾ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ವಿದ್ಯಾರ್ಥಿನಿಯರಾದ ಅನಘ,ನಂದಿತ ದೇಶಭಕ್ತಿಗೀತೆ ಹಾಡಿದರು. ವಿ.ನಾಯಕ ರಜತ್ ಡಿ. ಕಾರ್‍ಯಕ್ರಮದಲ್ಲಿ ಸ್ವಾಗತಿಸಿ.ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.