Breaking News

ಜು.31  : ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪದವೀಧರೇತರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾನಕಿ ಡಿ. ನಿವೃತ್ತಿ

Advt_Headding_Middle
Advt_Headding_Middle

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪದವೀಧರೇತರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾನಕಿ ಡಿ.ಯವರು ಜು. 31 ರಂದು ಸೇವೆಯಿಂದ ನಿವೃತ್ತಿಗೊಳ್ಳಲಿದ್ದಾರೆ.


ಸುಮಾರು 41 ವರ್ಷಗಳ ಸುದೀರ್ಘ ಕಾಲ ಶಿಕ್ಷಣ ಇಲಾಖೆಯ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಇವರು ೧೯೭೮ ರಲ್ಲಿ ಗುತ್ತಿಗಾರು ಗ್ರಾಮದ ಮೊಗ್ರ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದರು. ನಂತರ ಮಂಡೆಕೋಲಿನ ಕಲ್ಲಡ್ಕ ಕಿ.ಪ್ರಾ.ಶಾಲೆ, ಅಮರಪಡ್ನೂರು ಸ.ಹಿ.ಪ್ರಾ.ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ನಂತರ ವರ್ಗಾವಣೆಗೊಂಡು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಪದವೀಧರೇತರ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ಜು.31  ರಂದು ನಿವೃತ್ತಿಗೊಳ್ಳಲಿದ್ದಾರೆ.
ಇವರು ಮಂಡೆಕೋಲು ಗ್ರಾಮದ ಮುರೂರು ಮನೆ ನಿವೃತ್ತ ಮುಖ್ಯೋಪಾಧ್ಯಾಯ ಪುತ್ತು ಮಾಸ್ತರ್‌ರವರ ಪತ್ನಿ, ಇವರ ಪುತ್ರಿ ಅಕ್ಷತಾ ಲೋಕೇಶ್‌ರವರು ಬಂಟ್ವಾಳ ತಾಲೂಕಿನ ಕಂಬಳಬೆಟ್ಟು ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ಶಿವರಾಜ್ ಬೆಂಗಳೂರಿನ ಮೈಂಡ್ ಟ್ರಿ ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.