ದೇಶ ರಕ್ಷಣೆಯತ್ತ ಯುವಜನತೆಯ ಚಿತ್ತವಿರಲಿ: ಜತ್ತಪ್ಪ ಗೌಡ

Advt_Headding_Middle
Advt_Headding_Middle

ಕಾರ್ಗಿಲ್ ಯುದ್ಧ ಕೇವಲ ಯುದ್ಧವಲ್ಲ. ಅದು ಒಂದು ಬಲಿದಾನದ ಪ್ರತೀಕ. ಸಂಬಂಧ ಹಾಗೂ ಒಪ್ಪಂದಗಳನ್ನು ಮುರಿದು ಆಕಸ್ಮಿಕವಾಗಿ ನಡೆದ ಯುದ್ಧ. 73 ದಿನಗಳ ದೀರ್ಘ ಹೋರಾಟದ ಫಲವೇ ಕಾರ್ಗಿಲ್ ವಿಜಯೋತ್ಸವ. ಭಾರತ ದೇಶದ ಮಣ್ಣನ್ನು ರಕ್ಷಿಸುವ ಜವಾಬ್ದಾರಿಯನ್ನು ಯುವಜನತೆ ಮಾಡಬೇಕು. ಭಾರತೀಯ ನಾಗರೀಕರಾಗಿ ನಮ್ಮ ದೇಶದ ರಕ್ಷಣೆ ನಮ್ಮ ಕರ್ತವ್ಯ. ಮುಂದಿನ ಯುವಜನತೆ ಸೈನ್ಯ ಸೇವೆಗೆ ಮುಂದಾಗಬೇಕು ಎಂದು ಮಾಜಿ ಸುಬೇದಾರ್ ಜತ್ತಪ್ಪ ಗೌಡ ಬೀರಮಂಗಲರವರು ಹೇಳಿದರು.


ಅವರು ಜು. ೨೬ ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯಪ್ರಶಸ್ತಿ ವಿಜೇತ ಮಿತ್ರ ಬಳಗ ಕಾಯರ್ತೋಡಿ ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟನೆ ಮಾಡಿದ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಧರ್ಮಗುರು ವಂದನಿಯ ಫಾದರ್ ವಿಕ್ಟರ್ ಅವರು ಮಾತನಾಡಿ ಪ್ರತಿಯೊಬ್ಬರಲ್ಲಿ ದೇಶಪ್ರೇಮ, ಐಕ್ಯತೆ ಮೂಡಿದಾಗ ನಮ್ಮ ದೇಶದ ಬಲ ವರ್ಧಿಸುತ್ತದೆ. ಸೈನ್ಯದಲ್ಲಿ ಭೇದಭಾವವಿಲ್ಲದೆ ಒಂದೇ ಮನಸ್ಸಿನಲ್ಲಿ ಸೈನಿಕರು ಕಾರ್ಯಪ್ರವೃತ್ತರಾಗುತ್ತಾರೆ. ನಾವೆಲ್ಲರೂ ಸೈನಿಕರನ್ನು ಗೌರವಿಸಬೇಕು ಎಂದು ಹೇಳಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾಕ್ಟರ್ ಚಂದ್ರಶೇಖರ ದಾಮ್ಲೆಯವರು ಮಾತನಾಡಿ ನಾವೆಲ್ಲರೂ ವೈರತ್ವ ಮರೆತು ಸ್ನೇಹ ಬೆಳೆಸಿಕೊಂಡರೆ ಯುದ್ಧದ ಸನ್ನಿವೇಶ ಒದಗುವುದಿಲ್ಲ. ದೇಶದ ಆರ್ಥಿಕತೆ ಸುಧಾರಿಸಿ ಅಭಿವೃದ್ಧಿ ಕಾಣುವುದು ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಶೀಲ ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಮಿತ್ರ ಬಳಗ ಕಾಯರ್ತೋಡಿ ಸುಳ್ಯ ಇದರ ಅಧ್ಯಕ್ಷರಾದ ಅನಿಲ್ ರಾಜ್ ಕೆ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಶುಭ ಹಾರೈಸಿದರು. ಕಾರ್ಗಿಲ್ ಕದನದಲ್ಲಿ ಜೀವತೆತ್ತ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮುಖ್ಯ ಅತಿಥಿಯಾಗಿದ್ದ ಸೈನಿಕ ಜತ್ತಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಸವಿತಾ ಎಂ ಸ್ವಾಗತಿಸಿ, ಶಿಕ್ಷಕಿ ಜಯಂತಿ ಕೆ ವಂದಿಸಿದರು. ಶಿಕ್ಷಕ ದೇವಿಪ್ರಸಾದ ಜಿ.ಸಿ. ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.