ಎಲಿಮಲೆ : ಸಾಧನಾ ಶೃಂಗ ಕಾರ್ಯಕ್ರಮ

Advt_Headding_Middle
Advt_Headding_Middle

ಪ್ರತಿಯೊಬ್ಬ ವಿಧ್ಯಾರ್ಥಿಯು ತನ್ನ ವಿಧ್ಯಾರ್ಥಿ ಜೀವನದಲ್ಲಿ ಜ್ನಾನ ದಾಹ, ಕಠಿಣ ಪರಿಶ್ರಮ, ಬದ್ಧತೆ ಹಾಗು ಸೌಜನ್ಯತೆಯನ್ನು ಅಳವಡಿಸಿಕೊಂಡರೆ ಯೋಗ್ಯ ಸತ್ಪ್ರಜೆ ಹಾಗು ಉನ್ನತ ಸ್ಥಾನವನ್ನು ಗಳಿಸಲು ಸಾದ್ಯವಿದೆ ಎಂದು ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ನಡೆದ ವಿನೂತನವಾದ ಸಾಧನಾ ಶೃಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಶಿಕ್ಷಕ ಕೆ ಆರ್ ಗಂಗಾಧರ್ ಇವರು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮವು ಪ್ರತಿ ತಿಂಗಳು ನಡೆಯಲಿದ್ದು ರಾಷ್ತ್ರ ಹಾಗು ರಾಜ್ಯ ಪ್ರಶಸ್ತಿ ಪಡೆದ ಗಣ್ಯರನ್ನುಕರೆಸಲಾಗುವುದು ಎಂದು ತಿಳಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಮುಖ್ಯ ಗುರುಗಳಾದ ಚಂದ್ರಶೇಖರ್ ಪೆರಾಲ್ ಎಲ್ಲರನ್ನು ಸ್ವಾಗತಿಸಿದರು. ತದನಂತರ ಶಾಲಾಭಿವೃದ್ದಿ ಕಾರ್ಯಧ್ಯಕ್ಷರಾದ ಪುರುಷೊತ್ತಮ ಕಜೆ ಇವರು ಕೆ ಆರ್ ಗಂಗಾಧರ ಇವರನ್ನು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್, ಪೂರ್ವ ವಿಧ್ಯಾರ್ಥಿ ಸಂಘದ ಅದ್ಯಕ್ಷ ಪ್ರಶಾಂತ್ ಮಾವಿನಕಟ್ಟೆ ಹಾಗು ಶಾಲಾಭಿವೃದ್ದಿ ಸದಸ್ಯರಾದ ಚಂದ್ರಶೇಖರ, ಭೋಜಪ್ಪ ಗೌಡ, ಭರತ್,ಪವಿತ್ರ ಸುಳ್ಳಿ ಮತ್ತು ಲಿಂಗಪ್ಪ ಮಾಸ್ತರ್ ಉಪಸ್ತಿತರಿದ್ದರು. ಶಿಕ್ಷಕ ರಾದ ಗೋಪಿನಾಥ ಮೆತ್ತಡ್ಕ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕರಾದ ವಸಂತ್ ನಾಯಕ್, ತಿರುಮಲೇಶ್ವರಿ, ವಿರುಪಾಕ್ಷಪ್ಪ, ಸುಂದರ, ರಾಜೆಶ್ವರಿ, ಶಶಿಕಲಾ ಹಾಗು ವಿಜೇತ್ ಕಾರ್ಯಕ್ರಮದಲ್ಲಿ ಸಹಕರಿಸಿದರು. ಶಿಕ್ಷಕರಾದ ಮುರಳೀಧರ ಎಲ್ಲರಿಗೂ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.