ಪುಂಸ್ತ್ರೀಗಾಗಿ ಡಾ. ಶಿಶಿಲರಿಗೆ ಸನ್ಮಾನ

Advt_Headding_Middle
Advt_Headding_Middle

ಇತ್ತೀಚೆಗೆ ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ಸಂಘ ಮತ್ತು ಬೆಳ್ತಂಗಡಿ ತಾಲೂಕು ಕಸಾಪ ಏರ್ಪಡಿಸಿದ ಪುಂಸ್ತ್ರೀ ಕಾದಂಬರಿಯ ರಾಜ್ಯಮಟ್ಟದ ಒಂದು ದಿನದ ವಿಚಾರಗೋಷ್ಠಿಯಲ್ಲಿ ಕೃತಿಕಾರ ಡಾ. ಪ್ರಭಾಕರ ಶಿಶಿಲರನ್ನು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಡಾ. ಯಶೋವರ್ಮ ಸನ್ಮಾನಿಸಿದರು. ಪ್ರಶಸ್ತಿಯು ಹಣ್ಣು ಹಂಪಲು, ಸ್ಮರಣಿಕೆ ಮತ್ತು ಐದು ಸಾವಿರ ನಗದನ್ನು ಒಳಗೊಂಡಿತ್ತು.
ಶ್ರೀಯುತರು ಅಭಿನಂದನಾ ಭಾಷಣದಲ್ಲಿ “ನಮ್ಮ ಕಾಲೇಜಿನ ರ್‍ಯಾಂಕ್ ವಿಜೇತ ಹಳೆ ವಿದ್ಯಾರ್ಥಿಯೊಬ್ಬರು ಕಾದಂಬರಿಕಾರನಾದದ್ದು, ಪುಂಸ್ತ್ರೀ 14ಭಾಷೆಗಳಿಗೆ ಅನುವಾದಗೊಳ್ಳುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತರುವ ವಿಷಯ. ಶಿಶಿಲರು ಜೈನಧರ್ಮದಲ್ಲಿ ರಾಷ್ಟ್ರಕ್ಕೇ ತೃತೀಯ ರ್‍ಯಾಂಕು ಗಳಿಸಿದ್ದಲ್ಲದೆ ನೈಜ ಧರ್ಮಾನುಯಾಯಿಯಾಗಿ ಅಹಿಂಸಾವಾದಿಗಳಾಗಿರುವುದು ಒಂದು ಸಾಧನೆ. ಇವರ ಪುಂಸ್ತ್ರೀ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲಿ ಗುರುತಿಸಲ್ಪಡಬೇಕಾದ ಅಪೂರ್ವಕೃತಿ ಎಂದು ಅಭಿಪ್ರಾಯ ಪಟ್ಟರು.
ಸನ್ಮಾನಕ್ಕೆ ಉತ್ತರಿಸಿದ ಹಿರಿಯ ವಿದ್ವಾಂಸ ಡಾ. ಪ್ರಭಾಕರ ಶಿಶಿಲರು “ಸಿದ್ಧವನ ಮತ್ತು ಉಜಿರೆ ಕಾಲೇಜು ನನ್ನನ್ನು ಸಾಹಿತಿಯಾಗಿ ರೂಪಿಸಿತು. ಉಜಿರೆಯ ನಾವುಜಿರೆ, ಪಟವರ್ಧನ್, ಎಸ್.ಡಿ. ಶೆಟ್ಟಿ ಆರಂಭಿಕ ಹಂತದಲ್ಲಿ ನನ್ನನ್ನು ಕತೆಗಾರನನ್ನಾಗಿ ರೂಪಿಸಿದರು. ಅಲ್ಲಿ ಪಡೆದ ಯಶಸ್ಸಿನಿಂದಾಗಿ ನಾನು ಕಾದಂಬರಿಕಾರನಾದೆ” ಎಂದು ಕಳೆದು ಹೋದ ದಿನಗಳನ್ನು ನೆನಪಿಸಿಕೊಂಡರು.
ಸಾಹಿತಿಗಳಾದ ಪ. ರಾಮಕೃಷ್ಣ ಶಾಸ್ತ್ರಿ, ಡಾ. ಸಂಪತ್, ಡಾ. ದಿವಾಕರ ಕೊಕ್ಕಡ, ಯಕ್ಷಗಾನ ಅರ್ಥಧಾರಿಗಳಾದ ಜಬ್ಬಾರ್ ಸಮೊ, ಗಣರಾಜ ಕುಂಬ್ಳೆ, ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್, ಸತೀಶ- ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಸಂಪತ್ ಸ್ವಾಗತಿಸಿದರು. ಡಾ. ಶ್ರೀನಾಥ್ ಅರಸಿನಮಕ್ಕಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.