Breaking News

ಶುಭ ವಿವಾಹ : ಇರ್ಷಾದ್ ಗೂನಡ್ಕ – ಫಾತಿಮತ್ ಜಾಸ್ಮೀನ್

Advt_Headding_Middle
Advt_Headding_Middle
Advt_Headding_Middle

ಸಂಪಾಜೆ ಗ್ರಾಮದ ಗೂನಡ್ಕ ಮಹಮ್ಮದ್ ಕುಂಞಿರವರ ಪುತ್ರ ಇರ್ಷಾದ್ ಗೂನಡ್ಕರವರ ವಿವಾಹವು ಸುಳ್ಯ ಕಸಬಾ ಗ್ರಾಮದ ಶಾಂತಿನಗರ ಇಬ್ರಾಹಿಂ ರವರ ಪುತ್ರಿ ಫಾತಿಮತ್ ಜಾಸ್ಮೀನ್‌ರವರೊಂದಿಗೆ ಜು.೨೮ರಂದು ಕೊಡಿಯಲ್‌ಬೈಲ್‌ನ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಉಳ್ಳಾಲ ಖಾಝಿ ಬಹು. ಫಸಲ್ ಕೋಯಮ್ಮ ತಂಞಲ್ ಕೂರತ, ಬಹು.ಅಶ್ರಫ್ ತಂಞಲ್ ಆದೂರು, ಬಹು. ಕುಂಞಕೋಯ ತಂಞಲ್ ಸಹದಿ ಸುಳ್ಯ, ಕರ್ನಾಟಕ ಸರ್ಕಾರದ ಮಾಜಿ ಸಚಿವರುಗಳಾದ ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಾಜಿ ಶಾಸಕರುಗಳಾದ ಜೆ.ಆರ್.ಲೋಬೋ, ಶಕುಂತಲಾ ಶೆಟ್ಟಿ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಜಿ.ಎ.ಬಾವಾ, ನಿವೃತ್ತ ಐ.ಎ.ಎಸ್.ಅಧಿಕಾರಿ ಹಾಗೂ ಕೆ.ಪಿ.ಎಸ್.ಸಿ.ಮಾಜಿ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್, ಹುಣಸೂರು ಡಿ.ವೈ.ಎಸ್.ಪಿ. ಭಾಸ್ಕರ್ ರೈ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಉಪಾಧ್ಯಕ್ಷರಾದ ರೇಣುಕಾ ಪ್ರಸಾದ್, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್, ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ಗಂಗೇ ರೆಡ್ಡಿ, ಬಂಟ್ವಾಳ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಮಂಗಳೂರಿನ ಮಾಜಿ ಮೇಯರ್ ಕೆ.ಅಶ್ರಫ್, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಸವಣೂರು ಸೀತಾರಾಮ ರೈ, ಹಿರಿಯ ಕಾಂಗ್ರೆಸ್ ಮುಖಂಡರುಗಳಾದ ಕಾವು ಹೇಮನಾಥ ಶೆಟ್ಟಿ, ಎಂ.ವೆಂಕಪ್ಪ ಗೌಡ, ಧನಂಜಯ ಅಡ್ಪಂಗಾಯ, ಕರ್ನಾಟಕ ಸರ್ಕಾರದ ಅರೆಭಾಷೆ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪಿ.ಸಿ.ಜಯರಾಮ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಜೆ.ಡಿ.ಎಸ್.ರಾಜ್ಯ ಉಪಾಧ್ಯಕ್ಷರಾದ ಎಂ.ಬಿ.ಸದಾಶಿವ, ಜಿ ಪಂಚಾಯತ್ ಸದಸ್ಯರುಗಳಾದ ಎಂ.ಎಸ್.ಮಹಮ್ಮದ್, ಹರೀಶ್ ಕಂಜಿಪಿಲಿ, ಅನಿತಾ ಹೇಮನಾಥ ಶೆಟ್ಟಿ, ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ತಡ್ಕ, ತಾಲೂಕು ಪಂಚಾಯತ್ ಸದಸ್ಯರುಗಳಾದ ರಾಧಾಕೃಷ್ಣ ಬೊಳ್ಳೂರು, ಗಫೂರ್  ಕಲ್ಮಡ್ಕ, ಪುಷ್ಪಾ ಮೇದಪ್ಪ, ಕೀಲಾರು ಪ್ರತಿಷ್ಠಾನದ ಅಧ್ಯಕ್ಷರಾದ ರಾಜಾರಾಮ್ ಕೀಲಾರು, ಪುತ್ತೂರು ಕಂಬಳ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ್ ರೈ, ಸಹಕಾರಿ ಧುರೀಣರಾದ ಸೋಮಶೇಖರ ಕೊಯಂಗಾಜೆ, ಸಂತೋಷ್ ಕುತ್ತಮೊಟ್ಟೆ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ  ಎನ್.ಎ.ರಾಮಚಂದ್ರ, ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ಸೇರಿದಂತೆ ಹಲವು ರಾಜಕೀಯ, ಸಾಮಾಜಿಕ, ಧಾರ್ಮಿಕ ನಾಯಕರುಗಳು, ಅಧಿಕಾರಿಗಳು, ಉದ್ಯಮಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಮಾರು ಏಳು ಸಾವಿರಕ್ಕೂ ಮಿಕ್ಕಿ ಜನರು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.