ಶ್ರೀಮತಿ ಲೀಲಾವತಿ ಎಚ್. ರವರಿಗೆ ಫ್ಲೋರೆನ್ಸ್ ನೈಟಿಂಗೇಲ್ ಮದರ್ ತೆರೆಸಾ ಪ್ರಶಸ್ತಿ

Advt_Headding_Middle
Advt_Headding_Middle

ಬೆಂಗಳೂರಿನ ನ್ಯೂಸ್ ಪೇಪರ್ ಎಸೋಸಿಯೇಷನ್ ಆಫ್ ಕರ್ನಾಟಕ ಮತ್ತು ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ವಿಶ್ವ ದಾದಿಯರ ದಿನಾಚರಣೆ ಪ್ರಯುಕ್ತ ಪ್ರತಿವರ್ಷ ಅತ್ಯುತ್ತಮ ಸೇವೆಗೆ ನೀಡುವ 2019ರ ಫ್ಲೋರೆನ್ಸ್ ನೈಟಿಂಗೇಲ್ ಮದರ್ ತೆರೆಸಾ ಪ್ರಶಸ್ತಿಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾದಿಯರ ಮೇಲ್ವಿಚಾರಕಿಯಾಗಿರುವ ಶ್ರೀಮತಿ ಲೀಲಾವತಿ ಎಚ್. ರವರಿಗೆ ಲಭಿಸಿದೆ.

ಜು. 27 ರಂದು ಬೆಂಗಳೂರಿನ ಮೆಡಿಕಲ್ ಕಾಲೇಜು ಅಡಿಟೋರಿಯಮ್‌ನಲ್ಲಿ ನಡೆದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್‌ನ  ಎ.ವಿ. ಶ್ರೀನಿವಾಸನ್‌ರವರು ಪ್ರಶಸ್ತಿ ಪ್ರದಾನ ಮಾಡಿದರು. ಲೀಲಾವತಿಯವರು ಆರಂಭದಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ 2 ವರ್ಷಗಳ ಕಾಲ ದಾದಿಯಾಗಿ ಸೇವೆ ಸಲ್ಲಿಸಿದ್ದರು. ನಿಮ್ಹಾನ್ಸ್‌ನಲ್ಲಿ ಕಳೆದ 27  ವರ್ಷಗಳಿಂದ ಕರ್ತವ್ಯದಲ್ಲಿದ್ದರು.

ನಾಲ್ಕೂರು ಹೊಸಹಳ್ಳಿ ದಿ. ಹೊನ್ನಪ್ಪ ಗೌಡ ಹಾಗೂ ಶಿವಮ್ಮ ದಂಪತಿಗಳ ಪುತ್ರಿಯಾಗಿರುವ ಇವರು ಏನೆಕಲ್ಲು ಬಾನಡ್ಕ ದಿ. ಕೃಷ್ಣಪ್ಪ ಗೌಡರ ಸೊಸೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಬಾನಡ್ಕ ರಂಗನಾಥ್‌ರವರ ಪತ್ನಿ. ಪ್ರಸ್ತುತ ಬೆಂಗಳೂರಿನ ಕೋರಮಂಗಲದಲ್ಲಿ ನೆಲೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.