ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸಾಮೂಹಿಕ ರಾಮನಾಮ ಜಪ ಕಾರ್ಯಕ್ರಮ

Advt_Headding_Middle
Advt_Headding_Middle

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಜು.28ರಂದು ಸಂಜೆ ಸನಾತನ ಸಂಸ್ಥೆಯ ಸುಳ್ಯ ಕೇಂದ್ರದ ವತಿಯಿಂದ ಲೋಕ ಕಲ್ಯಾಣಾರ್ಥ ಸಾಮೂಹಿಕ ಶ್ರೀ ರಾಮನಾಮ ಜಪದ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಶ್ರೀರಾಮಭಕ್ತರು ಅತ್ಯಂತ ಭಾವಪೂರ್ಣವಾಗಿ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಜಪವನ್ನು ಮಾಡಿದರು. ಇದರಲ್ಲಿ ಮಹಿಳೆಯರೂ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರಾರಂಭದಲ್ಲಿ ಬಿ. ರಾಮ ಭಟ್ ಪಟ್ವರ್ಧನ್, ಸುಳ್ಯ ಅವರು ಉಪಸ್ಥಿತರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಅರಂಬೂರು ಶ್ರೀ ಕಾಂಚಿ ಕಾಮಕೋಟಿ ವೇದ ಪಾಠ ಶಾಲೆಯ ಪ್ರಾಂಶುಪಾಲರಾದ ವೇದಮೂರ್ತಿ ವೆಂಕಟೇಶ ಶಾಸ್ತ್ರಿಗಳು, ಅವರ ವಿದ್ಯಾರ್ಥಿಗಳು ಮತ್ತು ಊರಪರವೂರ ಭಗವದ್ಭಕ್ತರು ಉಪಸ್ಥಿತರಿದ್ದರು. ಕೊನೆಯಲ್ಲಿ ಬಿ. ರಾಮ ಭಟ್ ಪಟ್ವರ್ಧನ್ ಅವರು ಕೃತಜ್ಞತೆ ಸಲ್ಲಿಸಿ, ಅಧರ್ಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಧ್ಯವಿದ್ದಲ್ಲೆಲ್ಲಾ ಇಂತಹ ಕಾರ್ಯಕ್ರಮವನ್ನು ಏರ್ಪಡಿಸುವಂತೆ ಉಪಸ್ಥಿತರನ್ನು ವಿನಂತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.