ಚೊಕ್ಕಾಡಿ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2018-19 ನೇ ಸಾಲಿನ ವಾರ್ಷಿಕ ಮಹಾಸಭೆಯು ಜು.30 ರಂದು ಚೊಕ್ಕಾಡಿ ದೇಸೀ ಭವನದಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ಪಾರ್ವತಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಕೆ.ಎಂ.ಎಫ್.ದ.ಕ.ಜಿ.ಸ ಒಕ್ಕೂಟದ ವಿಸ್ತರಣಾಧಿಕಾರಿ ಕೆ.ನಾಗೇಶ್, ದ.ಕ.ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಕೇಶವ ಸುಳ್ಳಿ, ಮುಖ್ಯ ಅತಿಥಿಯಾಗಿ ಶೋಭಾ ಎ.ಕೆ .ನಾಯ್ಕ್, ಸಂಘದ ಉಪಾಧ್ಯಕ್ಷೆ ನಂದಿನಿ ಎಂ, ನಿರ್ದೇಶಕರಾದ ಶೋಭಾವತಿ ಕೆ, ತನುಜ, ಪಿ.ಎಂ.ಪ್ರೇಮ, ಕುಸುಮಾವತಿ ಕುಬಲಾಡಿ,ಬೇಬಿ ಬಿ, ತಿಲಕ ಪಿ, ಸುಶೀಲ ಎ, ಪ್ರತಿಮಾ ಬಿ, ಶಶಿಕಲಾ ಪಿ, ಜಯಲಕ್ಷ್ಮೀ ಹೆಚ್ ಉಪಸ್ಥಿತರಿದ್ದರು. ಅರ್ಚನ ಪ್ರಾರ್ಥಿಸಿದರು. ಹಾಲು ಪರೀಕ್ಷಕಿ ದಿವ್ಯ ಸ್ವಾಗತಿಸಿದರು. ಕಾರ್ಯದರ್ಶಿ ತುಳಸಿ ಹೆಚ್ ವರದಿಯನ್ನು ಮಂಡಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷೆ ನಂದಿನಿ ಎಂ. ವಂದಿಸಿದರು.

ಸಂಘವು 1998 ರಲ್ಲಿ ಆರಂಭಗೊಂಡು ಪ್ರಸಕ್ತ 21ನೇ ವರ್ಷ ಪೂರೈಸಿದ್ದು ಸಂಘದಲ್ಲಿ ಒಟ್ಟು 412 ಮಂದಿ ಸದಸ್ಯರಿದ್ದು ರೂ.56,675 ಪಾಲು ಬಂಡವಾಳ ಹೊಂದಿರುತ್ತದೆ.ವರದಿ ಸಾಲಿನಲ್ಲಿ ರೂ.80,92,396.28 ಮೊತ್ತದ ಹಾಲು ಸಂಗ್ರಹವಾಗಿದ್ದು ರೂ.20,356,40 ಮೊತ್ತದ ಹಾಲು ಸ್ಥಳೀಯವಾಗಿ ಮಾರಾಟವಾಗಿದೆ. ಪ್ರತಿ ದಿನ 744 ಲೀ.ಹಾಲು ಸಂಗ್ರಹವಾಗುತ್ತಿದೆ. ರೂ.70,42,920.15 ಮೌಲ್ಯದ ಹಾಲು ಒಕ್ಕೂಟಕ್ಕೆ ಮಾರಾಟವಾಗಿದೆ. ಹಾಲು ಮತ್ತು ಪಶು ವ್ಯವಹಾರದಲ್ಲಿ ರೂ.10,27,557.27 ರಷ್ಟು ಮೊತ್ತದ ಆದಾಯ ಬಂದಿದ್ದು ರೂ. 2,58,538.50 ಲಾಭಾಂಶವಾಗಿದೆ. ಪ್ರಸಕ್ತ ವರ್ಷದಲ್ಲಿ ರೂ.5,99,543.12 ರಷ್ಟು ಖರ್ಚಾಗಿದ್ದು ರೂ. 6,88,220.95 ರಷ್ಟು ಸಂಘಕ್ಕೆ ನಿವ್ವಳ ಲಾಭ ಬಂದಿರುತ್ತದೆ.
ಲಾಭಾಂಶ ಆಧಾರದಲ್ಲಿ ಸರಾಸರಿ ಒಂದು ಲೀಟರ್ ಹಾಲಿಗೆ ರೂ.1.21 ರಷ್ಟು ಬೋನಸ್ ನೀಡಲಾಗುತ್ತಿದೆ.
 ಸಂಘದ ಸದಸ್ಯತ್ವ ಹೊಂದಿದ ಸದಸ್ಯರು ನಿಧನರಾದಾಗ ಸಂಘಕ್ಕೆ ತಿಳಿಸಬೇಕು.
413 ಮಂದಿ ಸದಸ್ಯರಲ್ಲಿ ಕೇವಲ 130 ಮಂದಿ ಮಾತ್ರ ಸಕ್ರೀಯರಾಗಿರುವುದರಿಂದ ಸರಕಾರದಿಂದ ಸಿಗುವ ಯೋಜನೆಯಿಂದ ವಂಚಿತರಾಗಬೇಕಾಗುವುದು.ಶೇ.60% ರಷ್ಟು ಸದಸ್ಯರು ಸಕ್ರೀಯರಾಗಿರಬೇಕು. ಅನಾನುಕೂಲತೆಯಾಗುವವರು ರಾಜೀನಾಮೆ ನೀಡಬೇಕು.

ಸಂಘಕ್ಕೆ ಗುಣಮಟ್ಟದ ಹಾಲು ಹಾಕಿದರೆ ಉತ್ತಮ ಶ್ರೇಣಿ ಲಭಿಸಲು ಸಾಧ್ಯ.ಇದರಿಂದ ಹಾಲಿನ ದರ ಏರಿಕೆಯಾಗುವುದು. ಹೈನುಗಾರಿಕೆಯಲ್ಲಿ ಲಾಭದಾಯಕ ಆದಾಯ ಗಳಿಸಬಹುದು.                                                                                                – ಕೆ.ನಾಗೇಶ್, ವಿಸ್ತರಣಾಧಿಕಾರಿ

ಹೈನುಗಾರಿಕೆಯಲ್ಲಿ ಗುಣಮಟ್ಟದ ಹಾಲು ಪಡೆಯಬೇಕಾದರೆ ಆಹಾರ ಪದ್ಧತಿಯ ನಿರ್ವಹಣೆ ಅತೀ ಅಗತ್ಯ. ಪಶುವಿಗೆ ಕ್ರಮ ಪ್ರಕಾರ ಹಸಿ ಮೇವು, ಒಣ ಮೇವು ಮತ್ತು ನಾರಿನ ಅಂಶದ ಆಹಾರ ಹಾಗೂ ಪಶು ಆಹಾರ ವನ್ನು ಸಮತೋಲನದಲ್ಲಿ ನೀಡಬೇಕು.ಹಟ್ಟಿಯ ಶುಚಿತ್ವದಿಂದ ಕೆಚ್ಚಲುಬಾವು ರೋಗವನ್ನು ತಡೆಯಬಹುದು.ಇದರಿಂದ ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಪಡೆಯಬಹುದು -ಡಾ.ಕೇಶವ ಸುಳ್ಳಿ

ಪ್ರಸ್ತುತ ದಿನಂಪ್ರತೀ 700 ಲೀ.ಹಾಲು ಸಂಗ್ರಹಿಸುತ್ತಿದ್ದು 900 ಲೀ.ಸಂಗ್ರಹಿಸುವ ಗುರಿ ಇದೆ. ಗುಣಮಟ್ಟದ ಹಾಲು ಸಂಗ್ರಹಕ್ಕೆ ಪ್ರೋತ್ಸಾಹ. ಹಸಿರು ಮೇವು ಅಭಿವೃದ್ಧಿಗೆ ಉತ್ತೇಜನ. ಅ.18 ರಂದು ದಂತ ಚಿಕಿತ್ಸಾ ತಪಾಸಣಾ ಶಿಬಿರ ಏರ್ಪಡಿಸುವುದು. ಮುಂದಿನ ವರ್ಷದಲ್ಲಿ ಜಾನುವಾರು ಪ್ರದರ್ಶನ ಮಾಡುವ ಯೋಜನೆ ಇದೆ.                                                                                            – ಪಾರ್ವತಿ.ಕೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.