ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜ್ ನಲ್ಲಿ ವಿದ್ಯಾರ್ಥಿ ಗ್ರಾಹಕ ಜಾಗ್ರತಿ ಕ್ಲಬ್ ಮತ್ತು ಇಕೋ ಕ್ಲಬ್ ವತಿಯಿಂದ “ಡೆಂಗ್ಯು ಜ್ವರದ ಬಗ್ಗೆ ಮಾಹಿತಿ” ಉಪನ್ಯಾಸ ಕಾರ್ಯಕ್ರಮ ನಡೆಯಿತು. ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಿಥುನ್ ರವರು ಸಂಪನ್ಮೂಲ ವ್ಯಕ್ತಿ ಗಳಾಗಿದ್ದು, ಡೆಂಗ್ಯು ಜ್ವರ ತಡೆಗಟ್ಟಲು ಮಾಡಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪಶ್ನೆಗಳನ್ನು ಉತ್ತರಿಸಿದರು. ಮುಖ್ಯ ಶಿಕ್ಷಕರಾದ ವೈ.ಎ ಆನಂದರವರು ಅಧ್ಯಕ್ಷತೆ ವಹಿಸಿದ್ದರು. ಗ್ರಾಹಕ ಕ್ಲಬ್ ನ ಸಂಚಾಲಕ ಕಿಶೋರ್ ಕುಮಾರ್ ರವರು ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸ ಕ ಪದ್ಮ ಕುಮಾರ್ ಉಪಸ್ಥಿತರಿದ್ದರು.