HomePage_Banner
HomePage_Banner
HomePage_Banner
HomePage_Banner

ಸುಳ್ಯ ರೋಟರಿ ಶಾಲೆಯಲ್ಲಿ ಸಿಇಟಿ/ ನೀಟ್/ ಜೆಇಇ ತರಬೇತಿ ಆರಂಭ

ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ ನೀಟ್ ಹಾಗೂ ಜೆಇಇ ಪರೀಕ್ಷೆಗಳಿಗೆ ಪೂರ್ವಸಿದ್ಧತಾ ತರಗತಿಗಳನ್ನು ಮಡಿಕೇರಿಯ ರಿಯಾಟ್ ತರಬೇತಿ ಕೇಂದ್ರದವರು ನಡೆಸುತ್ತಿದ್ದು, ಸುಳ್ಯದ ರೋಟರಿ ಶಾಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ಆರಂಭವಾಗಿದೆ. 

ಆಗಸ್ಟ್ 4 ರಂದು ಈ ಪೂರ್ವಭಾವಿ ತರಗತಿಗಳ ಉದ್ಘಾಟನೆ ನೆರವೇರಿತು. ರೋಟರಿ ಶಾಲಾ ಸಂಚಾಲಕ ಎನ್.ಎ. ಜಿತೇಂದ್ರ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ರೋಟರಿ ವಿದ್ಯಾ ಸಂಸ್ಥೆಯ ಚೇರ್‌ಮೆನ್ ಡಾ.ಕೆ.ಜಿ. ಪುರುಷೋತ್ತಮ್ ರೋಟರಿ ಚಾರಿಟೆಬಲ್ ಟ್ರಸ್ಟ್ ಖಜಾಂಜಿ ಗಿರಿಜಾಶಂಕರ್ ತುದಿಯಡ್ಕ ತರಬೇತಿಯ ಮಹತ್ವದ ಕುರಿತು ಮಾತನಾಡಿದರು. ರಿಯಾಟ್ ಸಂಸ್ಥೆಯ ಸಂಚಾಲಕರಾದ ನಾರಾಯಣ ಬೆಳ್ಳಾರೆಯವರು ಉಪಸ್ಥಿತರಿದ್ದರು. ಇಪ್ಪತ್ತೈದು ವಾರಗಳ ಕಾಲ ಪ್ರತೀ ಆದಿತ್ಯವಾರ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.