HomePage_Banner
HomePage_Banner
Breaking News

370ನೇ ವಿಧಿಯನ್ನು ಹಿಂಪಡೆದುದು ಸ್ವಾಗತಾರ್ಹ : ಶ್ರೀಹರಿ ಕುಕ್ಕುಡೇಲು

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮ್ಮ ದೇಶದಲ್ಲಿ ಇದ್ದ ರಾಜರುಗಳ ಆಡಳಿತವನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತವನ್ನು ನಡೆಸಲು ನಮ್ಮ ಹಿರಿಯರು ಐತಿಹಾಸಿಕ ಕ್ರಮಗಳನ್ನು ಕೈಗೊಂಡು ದೇಶದಲ್ಲಿ ಸಂವಿಧಾನ ಬದ್ಧವಾಗಿ ಆಡಳಿತ ವ್ಯವಸ್ಥೆ ಪ್ರಾರಂಭಿಸಿದರು . ದೇಶದಲ್ಲಿ ಆ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ವಿಚಾರದಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲು ಕಷ್ಟವಾಯಿತು. ಆಗ ತಾತ್ಕಾಲಿಕ ಕ್ರಮವಾಗಿ 370 ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಲಾಗಿದ್ದು ಮುಂದೆ ಅದನ್ನು ಹಿಂಪಡೆಯುವಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಸಾಧ್ಯವಾಗಿರಲಿಲ್ಲ. ಆದರೆ ಒಕ್ಕೂಟದ ವ್ಯವಸ್ಥೆಯನ್ನು ಮಾಡಿದ ಸಂದರ್ಭದಲ್ಲಿ ನಮ್ಮ ಹಿರಿಯರು ಮಾಡಿದ ದಿಟ್ಟ ನಿಲುವು ಆದರ್ಶಪ್ರಾಯವಾಗಿದೆ . ಆದರೆ ಈ ಸಂದರ್ಭದಲ್ಲಿ ಮೋದಿ ನೇತೃತ್ವದ ಸರಕಾರವು 370 ನೇ ವಿಧಿಯನ್ನು ಹಿಂಪಡೆದುದು ಐತಿಹಾಸಿಕ ಮತ್ತು ಸ್ವಾಗತಾರ್ಹ ಕ್ರಮವಾಗಿದೆ ಇನ್ನು ಮುಂದೆ ಜಮ್ಮು ಕಾಶ್ಮೀರದ ಬಗ್ಗೆ ವಿವರವಾದ ಚರ್ಚೆಯನ್ನು ಸಂಸತ್ತಿನಲ್ಲಿ ಮಾಡಿ ಜಮ್ಮು ಕಾಶ್ಮೀರ ಜನತೆಗೆ ನ್ಯಾಯವನ್ನು ಒದಗಿಸಿ ಕೊಡಬೇಕಾದದ್ದು ಕೇಂದ್ರ ಸರಕಾರದ ಜವಾಬ್ದಾರಿ.
-ಶ್ರೀಹರಿ ಕುಕ್ಕುಡೇಲು
ಪ್ರಧಾನ ಕಾರ್ಯದರ್ಶಿಗಳು ಬಾಕ್ ಕಾಂಗ್ರೆಸ್ ಸುಳ್ಯ

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.