ವಿಪತ್ತು ನಿರ್ವಹಣಾ ಸಭೆಗೆ ಜನಪ್ರತಿನಿಧಿಗಳನ್ನು ಕರೆದಿಲ್ಲವೆಂಬ ಆಕ್ಷೇಪ : ಶಾಸಕಾಂಗ ಮಾಡಬೇಕಾದುದನ್ನು ಕಾರ್ಯಾಂಗ ಮಾಡಿದೆ ಎಂದು ಸಭೆಯಲ್ಲಿದ್ದವರ ಪ್ರತ್ಯುತ್ತರ ಸಂಘ – ಸಂಸ್ಥೆಗಳ, ಮುಳುಗುತಜ್ಞರ ಸಭೆ ಮಾಡಿದ್ದೇವೆ ಎಂದು ತಹಶೀಲ್ದಾರ್ ಸ್ಪಷ್ಟನೆ

Advt_Headding_Middle
Advt_Headding_Middle
Advt_Headding_Middle

 

ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ‌ ವಿಪತ್ತು ನಿರ್ವಹಣಾ ಸಭೆಯ ಮಾಹಿತಿ ಜನಪ್ರತಿನಿಧಿಗಳಿಗೆ ನೀಡದಿರುವ ಕುರಿತು ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸಭೆಯಲ್ಲಿ ಭಾಗವಹಿಸಿದವರು ಶಾಸಕಾಂಗವು ಮಾಡಬೇಕಾದ ಕೆಲಸವನ್ನು ಕಾರ್ಯಾಂಗ ಮಾಡಿದೆ ಎಂದು ಪ್ರತ್ಯುತ್ತರ ನೀಡಿದ ಈ ಕುರಿತು ಸಭೆಯಲ್ಲಿ ಚರ್ಚೆ ಆಗುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ತಹಶೀಲ್ದಾರ್ ರವರು ವಿಪತ್ತು ಸಂದರ್ಭ ಯಾರೂ ಇಳಿದು ಕೆಲಸ ಮಾಡುತ್ತಾರೋ ಅವರ ಸಭೆ ಜತೆಗೆ ಸಂಘ ಸಂಸ್ಥೆಗಳು ಸಭೆಯನ್ನಷ್ಟೆ ಕರೆದಿದ್ದೇವೆ ಎಂದು ಸ್ಪಷ್ಟತೆ ನೀಡಿದ ಘಟನೆ ಇಂದು ನಡೆದಿದೆ.

ತಹಶೀಲ್ದಾರ್ ಕುಂಞಿ ಮಹಮ್ಮದ್ ನೇತ್ರತ್ವದಲ್ಲಿ ತಾಲೂಕು ಕಚೇರಿಯಲ್ಲಿ ಬೆಳಗ್ಗೆ ಸಭೆ ಆಯೋಜಿಸಲಾಗಿತ್ತು. ಸಭೆ ನಡೆಯುತ್ತಿದ್ದಂತೆ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ರು “ಈ ಸಭೆಗೆ ತಾ.ಪಂ. ಅಧ್ಯಕ್ಷ ರನ್ನು ಕರೆಯಬೇಕಿತ್ತು. ಅವರಿಗೆ ಮಾಹಿತಿಯೇ ಇಲ್ಲವಂತೆ. ಎಲ್ಲರನ್ನೂ ಸೇರಿಸಿಕೊಳ್ಳುತ್ತಿದ್ದರೆ ಮತ್ತಷ್ಟು ಒಳ್ಳೆಯದಾಗುತ್ತಿತ್ತು” ಎಂದು ಅಭಿಪ್ರಾಯ ಸಭೆಗಿಟ್ಟರು. ಆಗ ಸಭೆಯಲ್ಲಿ ಉಪಸ್ಥಿತರಿದ್ದ‌ ನ್ಯಾಯವಾದಿ ಪ್ರದೀಪ್ ಕೆ.ಎಲ್. ರವರು “ಈ ಸಭೆಯನ್ನು ಶಾಸಕಾಂಗ ಮಾಡಬೇಕಿತ್ತು. ಶಾಸಾಕಾಂಗ ಸುಮ್ಮನಿದ್ದಾಗ ಅದನ್ನು ಕಾರ್ಯಾಂಗ ಮಾಡಿದೆ. ಅದರಲ್ಲಿ ತಪ್ಪಿಲ್ಲ” ಎಂದು ಹೇಳಿ ಮಾತು ಮುಂದುವರಿಸಿದರು. ಈ ಕುರಿತು ಸಭೆಯಲ್ಲಿ ವಾದ – ಪ್ರತಿವಾದ ನಡೆಯಿತು. ಆಗ ಮಧ್ಯ ಪ್ರವೇಶ ಮಾಡಿದ ತಹಶೀಲ್ದಾರ್ ಕುಂಞಿ ಅಹಮ್ಮದ್ ರು “ನೋಡಿ ಸುಬೋದ್ ರವರೇ ಇದು ಸಂಘ ಸಂಸ್ಥೆಗಳ ಸಭೆಯನ್ನು ಆಯೋಜಿಸಿದ್ದೇವೆ. ಯಾರೂ ಇಳಿದು ಕೆಲಸ ಮಾಡುತ್ತಾರೋ ಅವರ ಕುರಿತು ಮತ್ತು ಈಜುಗಾರರ ಸಭೆ ಇದು. ಆ ಬಗ್ಗೆ ಮಾಹಿತಿ ಪಡೆಯಲು ಸಭೆ ಇದಾಗಿದೆ. ಗ್ರಾ.ಪಂ. ಮಟ್ಟದಲ್ಲಿ ಈಗಾಗಲೇ ಸಭೆ ಮಾಡಿದ್ದು ಅಲ್ಲಿ ಅಧ್ಯಕ್ಷ ರುಗಳು ಭಾಗವಹಿಸಿದ್ದಾರೆ. ವಿಪತ್ತು ನಿರ್ವಹಣಾ ಕುರಿತು ಸಾರ್ವಜನಿಕ ರ ಸಹಕಾರವನ್ನು ನಾವು ಯಾಚಿಸುತ್ತೇವೆ. ಮತ್ತೆ ಎಲ್ಲರನ್ನು ಸೇರಿಸಿ ಮತ್ತೊಮ್ಮೆ ಸಭೆ ಮಾಡೋಣ ಎಂದು ಚರ್ಚೆಗೆ ತೆರೆ ಎಳೆದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.