HomePage_Banner
HomePage_Banner
HomePage_Banner
HomePage_Banner

ಯೂತ್ ಆಂಡ್ ಆಕ್ಸಿಡೆಂಟ್, ನಮ್ಮ ಜೀವದ ರಕ್ಷಣೆ ನಮ್ಮದೇ ಹೊಣೆ

 

ದಿನ ಬೆಳಗಾದರೇ ಸಾಕು ನ್ಯೂಸ್ ಪೇಪ್ ಹಿಡ್ಕೊಂಡು ಸುದ್ದಿ ಹೋದಕ್ಕೆ ಹೊರಟರೇ ನಮ್ಮ ಗ್ರಾಮದಲ್ಲೆ 2 ಅಪಘಾತದ ಸುದ್ದಿ ಸಿಕ್ರೆ, ಇಡೀ ತಾಲೂಕಿನಲ್ಲಿ 5, ರಾಜ್ಯ, ದೇಶ ಸೇರಿಸಿದ್ರೆ ಕಡಿಮೆ ಅಂದ್ರೆ 15 ರಿಂದ 20 ಸುದ್ದಿ ಸಿಗಬಹುದು. ಇನ್ನೂ ಅಪಘಾತವಾಗಿ ಸುದ್ದಿಯಾಗದೆ ಬಿಟ್ಟದ್ದು ಇರಬಹುದು. ಕಾಲ ಬದಲಾಗಿದೆ, ಹಳ್ಳಿಯಾಗಲೀ ಪಟ್ಟಣವಾಗಲಿ ಉದ್ಯೋಗಕ್ಕೆ ತೆರಳುವವರ ಸಂಖ್ಯೆಯೇ ಹೆಚ್ಚು, ಎಲ್ಲಿಯಾದ್ರು ಪುಟ್ಟ ಕೆಲಸ ನೋಡಿಕೊಳ್ಳುತ್ತಾರೆ.

ಈ ಬ್ಯುಸಿ ಸೆಡ್ಯೂಲ್‌ನಲ್ಲಿ ಆಫೀಸ್‌ಗೆ ಬೇಗ ತಲುಪಬೇಕು, ಸಂಜೆ ಮನೆಗೆ ಬೇಗ ತಲುಪಿ ಬಿಡಬೇಕು ಎನ್ನುವವರೇ ಜಾಸ್ತಿ. ಇಂತವರು ಬಸ್‌ಗಾಗೀ ಕಾಯುವುದು ಕಷ್ಟ ಎಂದು ತನ್ನದೇ ಬೈಕ್ ಅಥವಾ ಕಾರು ಖರೀದಿಕೊಳ್ಳುತ್ತಾರೆ. ಬೇಗ ತಲುಪಿ ಬಿಡಬೇಕು ಎಂಬ ಉದ್ದೆಶದಿಂದ ಭಾರೀ ವೇಘವಾಗಿ ಹೋಗುತ್ತಾರೆ. ಗ್ರಹಚಾರ ಯಾರ್‍ದೂ ಯಾವ ರೀತಿ ಇರತ್ತೆ ಹೇಳೋಕಾಗಲ್ಲ, ನಾವು ಎಷ್ಟೇ ನಿಧಾನವಾಗಿ ಹೋದ್ರು ಮುಂದಿನವನು ಹೇಗೆ ಬರುತ್ತಾನೆ ಎಂಬುವುದು ನಮಗೆ ತಿಳಿಯುದಿಲ್ಲ. ಇದ್ದರಿಂದ ಗಾಡಿಯಲ್ಲಿ ಹೋಗುವಾಗ ಮೈಯಲ್ಲ ಕಣ್ಣಾಗಿರಬೇಕು. ಇನ್ನೂ ಕಾಲೇಜು ಹುಡುಗರ ವಿಚಾರ ಹೇಳಬೇಕೆಂದಿಲ್ಲ ವರ್ಷಕ್ಕೊಂದು ತರ ಬೈಕ್‌ನ ಸ್ಟೈಲ್ ಚೆಂಜ್ ಆಗ್ತಾ ಇರತ್ತೆ, ಬೈಕ್‌ನಲ್ಲಿ ನಿಧಾನವಾಗಿ ಹೋಗುವ ವಿಷಯನೇ ಇಲ್ಲ ಎಲ್ಲರ ಎದುರಿನಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಲು ವ್ಹೀಲಿಂಗ್, ಹೈಸ್ಪೀಡ್ ಇತ್ಯಾದಿಗಳಲ್ಲೇ ತೊಡಗಿರುತ್ತಾರೆ. ಇದ್ದರಿಂದ ಅಪಘಾತವಾದ ಮೇಲೇನೆ ಗೊತ್ತಾಗೋದೋ ನಾವು ನಿಧಾನ ಹೋಗಬೇಕಿತ್ತು ಅಂತ . ಮುಖ್ಯವಾಗಿ ವಾಹನ ಸವಾರರು ಗಮನಿಸಬೇಕು ಏನಪ್ಪ ಅಂದ್ರೆ ನಿಮಗಾಗಿ ಮನೆಯಲ್ಲೊಂದು ಜೀವ ಕಾಯುತ್ತಿದೆ ಎಂಬ ಸತ್ಯ. ಸದಾ ದ್ವಿಚಕ್ರ ವಾಹನ ಸವಾರರ ಚಿಂತನೆಯಲ್ಲಿರಬೇಕು. ನಾವು ಶಾಲಾ ಕಾಲೇಜು ಬಳಿ ನಿಧಾನವಾಗಿ ಚಲಿಸಿ ಎಂದು ಬೋರ್ಡ್ ಹಾಕಿದ್ರು ಕೆಲವೊಮ್ಮೆ ನಿಧಾನವಾಗಿ ಹೋಗಲ್ಲ, ಐಎಸ್‌ಐ ಗುಣಮಟ್ಟದ ಹೆಲ್ಮೆಟ್ ಧರಿಸ ಬೇಕು ಅಂದ್ರು ಧರಿಸಲ್ಲ, ಹೆಚ್ಚಿನವರು ಪೋಲೀಸ್ ಆಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಗುಣಮಟ್ಟವಿಲ್ಲದ ಹೆಲ್ಮೆಟ್‌ನ್ನು ತೆಗೆದುಕೊಳ್ಳುತ್ತಾರೆ, ಸಿಗ್ನಲ್ ಹಾಕುವಲ್ಲಿ ಸರಿಯಾಗಿ ಸಿಗ್ನಲ್ ಹಾಕಬೇಕು ಇಲ್ಲವಾದರೇ ನಮ್ಮ ಹಿಂದಿನ ಸವಾರರಿಗೆ ಗೊಂದಲವಾಗುತ್ತದೆ.

ಮಳೆಗಾಲವೆಂದರೆ ಹಾಗೆ..

ದ್ವಿಚಕ್ರ ವಾಹನ ಸವಾರರ ಪಾಲಿಗೆ ಸವಾಲಿನ ದಿನಗಳಾಗಿರತ್ತೆ ಯಾಕೆಂದರೆ ಒದ್ದೆ ನೆಲದಲ್ಲಿ ಬ್ರೇಕ್ ಹಾಕಿದಾಗ ಗಾಡಿ ಒಮ್ಮೆಗೇ ಸ್ಕಿಡ್ಡಾಗಿ ಉರುಳುವುದು ಉಂಟು, ಅಲ್ಲಲ್ಲಿ ಚೆಲ್ಲಿದ ತೈಲಾಂಶಗಳು ನೀರಿನೊಂದಿಗೆ ಬೆರೆತು ಜಾರುವುದು, ನೀರು ತುಂಬಿದ ಹೊಂಡಗಳಿಗೆ ವಾಹನಗಳು ಬೀಳುವುದು ಸಹಜವಾಗಿ ಕಾಣ ಸಿಗತ್ತೆ. ಇನ್ನೂ ಮಳೆಗಾಲ ಆರಂಭವಾಗುವ ಮುನ್ನ ಎನ್ನೆಲ್ಲಾ ಮುನ್ನಚ್ಚೇರಿಕೆ ವಹಿಸಬೇಕು ಅಂದ್ರೆ ಜೋರು ಮಳೆ ಶುರುವಾಗುವ ಮುನ್ನವೇ ನಮ್ಮ ಟೂ ವೀಲರನ್ನು ಸರ್ವಿಸ್ ಮಾಡಿಸಿಕೊಂಡು ಬಿಡಿಭಾಗಗಳೆಲ್ಲ ಟೈಟ್ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು, ಎಂಜಿನ್ ಕಂಡೀಷನ್ಡ್ ಆಗಿರಬೇಕು, ಮುಖ್ಯವಾಗಿ ಗಮನಿಸಬೇಕಾಗಿರುವುದು ಟೈರು, ಬ್ರೇಕ್ ಮತ್ತು ಲೈಟ್ ಟೈರ್‌ನಲ್ಲಿ ಕನಿಷ್ಠ 1.5 ಎಂಎಂ ಕುಳಿಗಳು (ಗ್ರೂವ್ಸ್ ) ಇರಬೇಕು, ತುಂಬ ಸವೆದಿದ್ದರೆ ಮಳೆಗಾಲದಲ್ಲಿ ಜಾರುವ ಅಪಾಯವಿರುತ್ತದೆ. ಹಾಗಿದ್ದರೆ ಕೂಡಲೇ ರಿಪ್ಲೇಸ್ ಮಾಡಿಸಿಕೊಳ್ಳಬೇಕು, ಚಕ್ರಗಳಲ್ಲಿ ಗಾಳಿಯ ಪ್ರಮಾಣ ಸರಿಯಾಗಿರಬೇಕು, ಕಡಿಮೆಯಾದರೆ ವಾಹನ ಮಳೆಗಾಲದಲ್ಲಿ ಗ್ರಿಪ್ ಕಳೆದುಕೊಳ್ಳುವ ಅಪಾಯ ಜಾಸ್ತಿಯಾಗಿರತ್ತೆ, ಬ್ರೇಕ್ ಸಿಸ್ಟಮ್ ಸರಿಯಾಗಿ ಕೆಲಸ ಮಾಡುತ್ತಿದೆಯಾ, ಬ್ರೇಕ್ ಆಯಿಲ್ ಸಾಕಷ್ಟಿದೆಯಾ ನೋಡಿಕೊಳ್ಳಬೇಕು, ಇನ್ನೂ ಮಳೆಗಾಲದಲ್ಲಿ ವಾಹನಗಳ ಎಲೆಕ್ಟ್ರಿಕ್ ಸಿಸ್ಟಮ್ ಕೈಕೊಡುವುದು ಜಾಸ್ತಿಯಾಗಿರತ್ತೆ ಹಾಗಾಗಿ, ಎಲ್ಲ ವಯರಿಂಗನ್ನು ಸರಿ ಮಾಡಿಸಿಕೊಳ್ಳಬೇಕು, ಮಳೆಗಾಲದಲ್ಲಿ ಹೆಡ್ ಲೈಟ್ ಮಾತ್ರವಲ್ಲ ಸಿಗ್ನಲ್ ಲೈಟ್‌ಗಳ ಬಳಕೆಯೂ ಹೆಚ್ಚು ಮತ್ತು ಅನಿವಾರ್ಯವಾಗಿರತ್ತೆ ಹಾಗಾಗಿ, ಅದು ಸರಿಯಾಗಿದೆಯೇ ಪರೀಕ್ಷಿಸಿಕೊಳ್ಳಬೇಕು , ವಾಹನದ ಕನ್ನಡಿ ನಮಗೆ ಬಹು ಮುಖ್ಯ ಯಾಕೆಂದರೆ ಸರಿಯಾಗಿ ಮಳೆಗಾಲದಲ್ಲಿ ಹಿಂದಿನಿಂದ ಬರುವ ವಾಹನಗಳ ಸದ್ದು ಕೇಳಿಸುವುದಿಲ್ಲ. ಹಾಗಾಗಿ ಏನಿದರೂ ಕನ್ನಡಿಯಲ್ಲೇ ಗಮನಿಸಬೇಕಾಗುತ್ತದೆ. ಸ್ಟೈಲ್ ಕಾಣೊಲ್ಲ ಅಂತ ಮಿರರ್ ಅವಾಯ್ಡ್ ಮಾಡಬಾರದು. ಕೆಲವೊಮ್ಮೆ ನಾವು ಗಾಡಿನ ತೊಳೆಯಲ್ಲ. ಮಳೆ ಬರ್ತಿದೆಯಲ್ಲ.. ವಾಹನ ತೊಳೆಯೋದು ಬೇಕಾಗಿಲ್ಲ ಅಂತ ತಿಳಿದುಕೊಳ್ಳುತ್ತೇವೆ, ಆದರೆ ಮಳೆಗಾಲದಲ್ಲಿ ಬಿಡಿಭಾಗಗಳ ಮೇಲೆ ಕೆಸರು, ಆಯಿಲ್ ಸೇರುವುದು ಜಾಸ್ತಿಯಾಗಿರತ್ತೆ ಕ್ಲೀನಿಂಗ್, ಸರ್ವಿಸ್ ಆಗಾಗ ಮಾಡಿಸುವುದು ಅಗತ್ಯವಾಗಿರತ್ತೆ. ವಾಹನ ಎಷ್ಟೇ ಕಂಡೀಷನ್‌ನಲ್ಲಿದ್ದರೂ ಸೇಫ್ಟಿ ಅಡಗಿರುವುದು ಅದರ ಸುರಕ್ಷಿತ ರೈಡಿಂಗ್‌ನಲ್ಲಿ. ವೇಗದ ರೈಡಿಂಗ್ ಏನಿದ್ದರೂ ಬೇಸಿಗೆಗೆ … ಕೆಲವರು ಲೇಟಾಯ್ತು ಅಂತಾ ಬೇಗ ತಲುಪಲು ಸ್ಪೀಡ್ ರೈಡ್ ಮಾಡುತ್ತಾರೆ, ಆದರೆ ಮಳೆಗಾಲದಲ್ಲಿ 40 ಕಿ.ಮೀ, ಅತಿ ಹೆಚ್ಚು ಅಂದರೆ 60ಕಿ.ಮೀ. ಸಾಕು. ಮಳೆಗಾಲದಲ್ಲಿ ಪ್ರಮುಖ ಕಂಟ್ರೋಲಿಂಗ್ ಪಾಯಿಂಟ್‌ಗಳಾದ ಕ್ಲಚ್, ಗೇರ್, ಬ್ರೇಕ್ ಮತ್ತು ಅಕ್ಸಿಲರೇಟರ್‌ಗಳ ಮೇಲೆ ಪೂರ್ಣ ಹಿಡಿತ ಇರಬೇಕು. ಒಮ್ಮೆಗೇ ಬ್ರೇಕ್ ಹಾಕಲೇಬಾರದು. ಹೆಚ್ಚಿನ ಸಂದರ್ಭದಲ್ಲಿ ದ್ವಿಚಕ್ರ ವಾಹನ ಅಪಘಾತ ನಡೆಯುವುದು ಒಮ್ಮೆಗೇ ಬ್ರೇಕ್ ಹಾಕುವುದರಿಂದ. ಸಾಮಾನ್ಯವಾಗಿ ಮುಂದಿನ ಬ್ರೇಕ್ ಹಿಡಿದರೆ ವಾಹನ ಉರುಳುತ್ತದೆ. ಆದರೆ, ಮಳೆಗಾಲದಲ್ಲಿ ಹಿಂದಿನ ಬ್ರೇಕ್ ಹಿಡಿಯುವಾಗಲೂ ಎಚ್ಚರಿಕೆ ಬೇಕು. ವೇಗವನ್ನು ಬ್ರೇಕ್ ಮೂಲಕ ನಿಯಂತ್ರಿಸುವುದಕ್ಕಿಂತಲೂ ಎಕ್ಸಿಲರೇಟರ್ ಮೂಲಕವೇ ನಿಯಂತ್ರಿಸುವುದು ಬೆಟರ್. ಸ್ಲೋ ಆದ ಮೇಲೆ ಬ್ರೇಕ್ ಹಾಕಬೇಕು. ರಸ್ತೆಯಲ್ಲಿ ಹಾಕುವ ಪೈಂಟ್ ಪ್ಯಾಚ್ ಜಾರುವ ಸಾಧ್ಯತೆಗಳಿರುವುದರಿಂದ ಅದರ ಮೇಲೆ ವಾಹನ ಚಲಾಯಿಸಬಾರದು. ಮಳೆ ಬರುವಾಗ ಮುಂದಿನ ಭಾಗ ಸರಿಯಾಗಿ ಕಾಣುವುದಿಲ್ಲ. ಹಾಗಾಗಿ ಮುಂದಿನ ವಾಹನದ ಬ್ರೇಕ್ ಲೈಟ್‌ನ ಮೇಲೆ ಕಣ್ಣಿರಬೇಕು, ಕೆಲವೊಮ್ಮೆ ನಾವು ಯಾವುದೋ ಯೋಚನೆಯಲ್ಲಿರುತ್ತೇವೆ ಆದರೆ ಎದುರಿನ ವಾಹನದಲ್ಲಿ ಬ್ರೇಕ್ ಲೈಟ್ ಬಿದ್ದರೆ ನಮ್ಮ ವಾಹನವನ್ನೂ ನಿಯಂತ್ರಿಸಿಕೊಳ್ಳುವಷ್ಟು ದೈರ್ಯದಿಂದಿರಬೇಕು. ಇನ್ನೂ ಹಲವರಿಗೆ ಅಷ್ಟು ಟ್ರಾಫಿಕ್ ಇಲ್ಲ ಅಂದ್ರು ಎಡೆಗೆ ಹೋಗಿ ಗಾಡಿ ನುಗ್ಗಿಸುವ ಅಭ್ಯಾಸವರತ್ತೆ. ಎರಡು ವಾಹನಗಳ ನಡುವೆ ನುಗ್ಗಿಸುವ ಪ್ರಯತ್ನ ಬೇಡವೇ ಬೇಡ. ಯಾಕೆಂದರೆ, ಸಹ ಸವಾರರು ರಸ್ತೆ ಗುಂಡಿ ತಪ್ಪಿಸಲು ಅತ್ತಿತ್ತ ಚಲಿಸುವ ಸಾಧ್ಯತೆಗಳಿರುತ್ತವೆ. ಅಥವಾ ನೀವು ಸಾಗುವ ನಡು ಭಾಗದಲ್ಲಿ ಒಮ್ಮೆಗೇ ಗುಂಡಿ ಸಿಗಬಹುದು. ಯಾವುದೇ ವಾಹನವನ್ನು ಅದರಲ್ಲೂ ಚತುಷ್ಚಕ್ರ ವಾಹನವನ್ನು ತುಂಬ ಹತ್ತಿರದಿಂದ ಫಾಲೋ ಮಾಡಬೇಡಿ. ಯಾಕೆಂದರೆ, ನಾಲ್ಕು ಚಕ್ರಗಳ ನಡುವೆ ಅವಾಯ್ಡ್ ಆದ ಗುಂಡಿಗೆ ಟೂ ವೀಲರ್ ಬೀಳಬಹುದು. ಟೂ ವೀಲರ್‌ನಲ್ಲಿ ಹೋಗುವಾಗ ರಸ್ತೆ ಹೊಂಡಗಳ ಮೇಲೆ ಕಣ್ಣಿಡಿ. ಯಾಕೆಂದರೆ ನೀರು ತುಂಬಿದ ಹೊಂಡಗಳು ಎಷ್ಟು ಆಳವಾಗಿರುತ್ತವೆ ಅಂತ ಅಂದಾಜು ಮಾಡಲು ಸಾಧ್ಯವಿಲ್ಲ. ಗುಂಡಿಗಳ ಮೇಲೆ ಗಾಡಿ ಹಾರಿಸಬೇಡಿ. ಯಾಕೆಂದರೆ ಪಾದಚಾರಿಗಳ ಮೇಲೆ ನೀರು ಹಾರುವ ಚಾನ್ಸ್ ಇರತ್ತೆ. ಕೆಲವು ಕಡೆ ರಸ್ತೆ ಬದಿಗಳು ತೀರಾ ಎತ್ತರವಾಗಿರುತ್ತವೆ. ಆ ಭಾಗದಲ್ಲಿ ರೈಡ್ ಮಾಡದೆ ಇರುವುದು ಸೇಫ್. ಮಣ್ಣಿನಲ್ಲಿ ಜಾರುವ ಅಪಾಯವಿರುತ್ತದೆ. ಕೆಲವು ಕಡೆ ಆಯಿಲ್ ಚೆಲ್ಲಿ ಜಾರುತ್ತದೆ. ಅಂತ ಲಕ್ಷಣಗಳು ಕಂಡರೆ ನಿಧಾನ ಚಲಿಸಿಸುವುದು ಒಳಿತು. ಕೆಲವು ಕಡೆಗಳಲ್ಲಿ ನೀರಿನಲ್ಲಿ ಸಾಗಿ ಬಂದ ಮರಳು ಶೇಖರವಾಗಿರುತ್ತವೆ. ಅದರ ಮೇಲೆ ಬೈಕ್‌ನ್ನು ವೇಗವಾಗಿ ಓಡಿಸಬೇಡಿ. ನಿಧಾನವಾಗಿ ಚಲಿಸಿ. ಕೆಸರು ಮಣ್ಣಿನಲ್ಲಿ ದ್ವಿಚಕ್ರ ವಾಹನ ದಾಟಿಸುವ ಸಾಹಸ ಮಾಡಬೇಡಿ. ಹಿಂಬದಿ ಟಯರ್ ಜಾರಿ ವಾಹನ ಉರುಳುವ ಜತೆ ಕೆಸರುಪಾಲಾಗುವ ಅಪಾಯವಿದೆ. ಮರಳು, ಆಯಿಲ್ ಸ್ಪಿಲ್‌ನಿಂದ ವಾಹನ ಸ್ಕಿಡ್ ಆಗುವ ಲಕ್ಷಣ ಕಂಡುಬಂದರೆ. ಧೈರ್ಯ ಕಳೆದುಕೊಳ್ಳಬೇಡಿ.. ಧೈರ್ಯ ಕಳೆದುಕೊಂಡರೆ ಒಮ್ಮೆಲೇ ಎಕ್ಸಿಲೇಟರ್ ತಿರುಗಿಸುವ ಅಪಾಯವಿರುತ್ತದೆ. ಮೊದಲು ವಾಹನದ ವೇಗವನ್ನು ತಗ್ಗಿಸಿ. ಸಾಧ್ಯವಾದರೆ ಗೇರ್ ಚೇಂಜ್ ಮಾಡಬಹುದು. ಜಾರುವ ಲಕ್ಷಣಗಳಿದ್ದರೂ ಕಂಟ್ರೋಲ್‌ಗೆ ತೆಗೆದುಕೊಳ್ಳಿ. ನಿಧಾನವಾದರೆ ಕಾಲು ಕೊಟ್ಟು ನಿಲ್ಲಿಸಬಹುದು. ಜೋರು ಮಳೆ ಸಂದರ್ಭ ಜಾಗ್ರತೆಯಾಗಿರಿ, ಧಾರಾಕಾರ ಮಳೆ ಸುರಿಯುವಾಗ ರೈಡಿಂಗ್ ಮಾಡುವುದನ್ನು ಎವಾಯ್ಡ್ ಮಾಡಿ. ಯಾಕೆಂದರೆ, ಈ ಸಮಯದಲ್ಲಿ ರಸ್ತೆ ಕಾಣಿಸುವುದಿಲ್ಲ, ರಸ್ತೆಯ ಬದಿ, ಮುಂದಿನ ವಾಹನಗಳು ಗೋಚರಿಸುವುದಿಲ್ಲ. ಜೋರು ಮಳೆ ಬರುವಾಗ ಎಲ್ಲಾದರೂ ಸುರಕ್ಷಿತ ಜಾಗದಲ್ಲಿ ನಿಂತುಬಿಡುವುದೇ ಸೇಫ್. ಮಾರ್ಗದ ಬದಿಯಲ್ಲಿ ನಿಲ್ಲಿಸುವುದಾದರೆ ಹೆಡ್‌ಲೈಟ್ ಆನ್‌ನಲ್ಲಿರಲಿ. ಮಳೆಗಾಲದಲ್ಲಿ ವಾಹನವನ್ನು ಒಮ್ಮೆಗೇ ತಿರುಗಿಸಬೇಡಿ, ಸ್ವಿಂಗ್ ಮಾಡಬೇಡಿ.. ನಿಧಾನವಾಗಿ ದೀರ್ಘ ತಿರುವುದು ತೆಗೆದುಕೊಳ್ಳಿ. ರಾತ್ರಿ ಹೊತ್ತು ಜೋರು ಮಳೆ ಇರುವಾಗ ವಾಹನ ರೈಡ್ ಮಾಡಲೇಬೇಡಿ. ಯಾಕೆಂದರೆ, ಏನೂ ಕಾಣಿಸದೆ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಮುಖಕ್ಕೆ ನೀರು ಹೊಡೆಯುವುದರಿಂದ ಕಣ್ಣು ಬಿಡಲು ಆಗದೆ ಕಷ್ಟವಾಗುತ್ತದೆ. ಹೆಲ್ಮೆಟ್ ಮುಚ್ಚಿದ್ದರೂ ಗಾಜಿನಲ್ಲಿ ನೀರು ಹರಿದು ಏನೂ ಕಾಣಿಸದೆ ಹೋಗಬಹುದು. ಎದುರಿನಿಂದ ಬರುವ ವಾಹನಗಳ ಬೆಳಕು ನೀರಿನಲ್ಲಿ ವಿಭಜನೆಗೊಂಡು ಮುಂದಿನ ದಾರಿ ಕಾಣಿಸದೆ ಹೋಗಬಹುದು. ಮಾರ್ಗದ ಬದಿಯಲ್ಲಿ ಸಾಗುತ್ತಿರುವ ಸೈಕಲ್ ಮತ್ತಿತರ ಸಣ್ಣ ವಾಹನಗಳು, ಪಾದಚಾರಿಗಳು ಕಾಣಿಸದಿದ್ದರೆ ಅಪಾಯ. ಕೆಲವೊಮ್ಮೆ ರಸ್ತೆ ದಾಟುವವರೂ ಕಾಣಿಸುವುದಿಲ್ಲ. ಯಾವುದೇ ಕಾರಣಕ್ಕೂ ಒದ್ದೆ ಆಗಿಕೊಂಡು ಡ್ರೈವ್ ಮಾಡಲೇಬೇಡಿ. ಮಳೆಯಲ್ಲಿ ಡ್ರೈವ್ ಮಾಡಿದ ಬಳಿಕ ಮನೆಗೆ ಹೋಗಿ ಬೆಚ್ಚಗೆ ನಿಲ್ಲಿಸಿ, ಎಲ್ಲ ನೀರನ್ನು ಒರೆಸಿ ತೆಗೆದರೆ ವಾಹನಕ್ಕೆ ಒಳ್ಳೆಯದು. ಜೋರಾಗಿ ಸಿಡಿಲು, ಮಿಂಚು ಬರುವಾಗ ವಾಹನ ಚಲಾಯಿಸದೆ ಇರುವುದು ಉತ್ತಮ. ಸಿಡಿಲು ಬರುವಾಗ ವಾಹನದ ಲೋಹ ಭಾಗಗಳನ್ನು ಮುಟ್ಟಲು ಹೋಗಬೇಡಿ. ವಾಹನವನ್ನು ನಿಲ್ಲಿಸಿ ಸುರಕ್ಷಿತ ಜಾಗದಲ್ಲಿ ನಿಲ್ಲುವುದು ಉತ್ತಮ. ವಾಹನವನ್ನು ಮಿಂಚು ಹೊಡೆಯಬಹುದಾದ ಲೋಹ ನಿರ್ಮಾಣಗಳ ಪಕ್ಕದಲ್ಲೂ ಇಡಬೇಡಿ.
ಇನ್ನೂ ಅತೀ ಮುಖ್ಯವಾಗಿ ಬೇಕಾದ ವಸ್ತು ಅಂದ್ರೆ ಅದು ಹೆಲ್ಮೆಟ್, ರೈನ್ ಕೋಟ್ ಹೇಗಿಇರಬೇಕು ಅಂದರೆ ಮಳೆಗಾಲದಲ್ಲಿ ಹೆಲ್ಮೆಟ್ ಹಾಕುವುದು ಸೇಫ್. ಜೋರಾಗಿ ನೀರು ಬಡಿಯುವುದರಿಂದ ಮತ್ತು ಅಪಘಾತದಿಂದ ರಕ್ಷಣೆ ಪಡೆಯಲು ಇದು ಅನುಕೂಲಕಾರಿ. ಪ್ಲಾಸ್ಟಿಕ್ ಹೆಲ್ಮೆಟ್ ಬೇಡವೇ ಬೇಡ. ತಲೆ ಪೂರ್ತಿ ಕವರ್ ಮಾಡುವ ಹೆಲ್ಮೆಟ್ ಮಳೆಗಾಲಕ್ಕೆ ಸೂಕ್ತ. ಒಂದೊಮ್ಮೆ ಜಾರಿ ಬಿದ್ದರೂ ತಲೆಗೆ ರಕ್ಷಣೆ ನೀಡುತ್ತದೆ ಹೆಲ್ಮೆಟ್. ಹೆಲ್ಮೆಟ್ ಗಾಜನ್ನು ಕ್ಲೀನ್ ಮತ್ತು ಸ್ಕ್ರೆಚ್ ಫ್ರೀಯಾಗಿ ಇಟ್ಟುಕೊಳ್ಳುವುದು ಅಗತ್ಯ. ದಿನಕ್ಕೊಮ್ಮೆ ಸೋಪ್ ಇಲ್ಲವೇ ಶ್ಯಾಂಪೂ ವಾಟರ್ ಹಾಕಿ ಕ್ಲೀನ್ ಮಾಡೋದು ಒಳ್ಳೆಯದು. ಅತಿಯಾಗಿ ಒದ್ದೆಯಾದಾಗ ಒರೆಸಲು ಬಟ್ಟೆ ಇರಲಿ. ಮೈಗೆ ಸರಿಯಾಗಿ ಹೊಂದಿಕೊಳ್ಳುವ ರೈನ್ ಕೋಟ್ ಬಳಸಿ. ನೀರು ಒಳಗೆ ಹೋಗದಂಥ ಒಳ್ಳೆಯ ಗುಣಮಟ್ಟದ ಕೋಟ್ ಇರಲಿ. ಉದ್ದನೆಯ ರೈನ್ ಕೋಟ್ ಚಕ್ರಕ್ಕೆ ಸಿಕ್ಕಿಹಾಕಿಕೊಳ್ಳುವ ಅಪಾಯವಿರುತ್ತದೆ.ಅದರಲ್ಲೂ ಹಿಂಬದಿ ಕುಳಿತುಕೊಳ್ಳುವ ಮಹಿಳೆಯರು ತುಂಬ ಜಾಗರೂಕವಾಗಿರಬೇಕು. ಯಾಕೆಂದರೆ ಮಹಿಳೆ ದುಪ್ಪಣ ಹಾಕಿರುವದರಿಂದ ಆದು ಗಾಳಿಗೆ ಹಾರುತ್ತ ಇರುತ್ತೆ, ಇದು ಗಾಡಿಯ ಚಕ್ರಕ್ಕೆ ಸಿಲುಕಿಕೊಳ್ಳುವ ಚಾನ್ಸ್ ಇರುತ್ತದೆ. ಇಂತಹ ಪ್ರಕರಣವನ್ನು ನಾನು ಕಣ್ಣಾರೆ ತುಂಬಾ ಸಲ ನೋಡಿದ್ದೇನೆ.
ವಾಹನ ಮತ್ತು ಸವಾರರಿಗೆ ಸಂಬಂಧಿಸಿದ ದಾಖಲೆ ಜತೆ ಮಳೆಗಾಲದಲ್ಲಿ ಹೆಚ್ಚುವರಿ ವಸ್ತುಗಳು ಬೇಕು. ರೈನ್ ಕೋಟ್ ಯಾವತ್ತೂ ಜತೆಗಿರಬೇಕು . ಒಂದು ಬೈರಾಸು ಗಾತ್ರದ ಬಟ್ಟೆ ಇದ್ದರೆ ಒದ್ದೆಯಾದರೂ ಮ್ಯಾನೇಜ್ ಮಾಡಬಹುದು. ಹೆಲ್ಮೆಟ್ ಒರೆಸಲು ಒಂದು ಸಣ್ಣ ಬಟ್ಟೆ ತುಂಡು. ಗ್ರಿಪ್ ಇರುವ ಟಯರ್ ಮತ್ತು ಅತ್ಯುತ್ತಮ ಕಂಡೀಷನ್ ಇರುವ ಬ್ರೇಕ್ ಹಾಕಿಸಿಕೊಳ್ಳಬೇಕು. ಸೈಡ್ ಮಿರರ್ ಕಡ್ಡಾಯವಾಗಿ ಅಳವಡಿಸಿಕೊಳ್ಳಿ ಮಳೆಗಾಲದ ಸಮಯದಲ್ಲಿ ಬ್ರೈಟ್ ಇರುವ ಲೈಟ್ ಬಳಸಿಕೊಳ್ಳಿ ಇಂಡಿಕೇಟರ್ ಹಾಕಲು ಮರೆಯದಿರಿ. ಜೋತು ಬೀಳುವ ರೈನ್ ಕೋಟ್ ಬಳಸಬೇಡಿ ಇಷ್ಟಂತೂ ವಾಹನ ಸವಾರರು ಮಳೆಗಾಲದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು.
ಒಟ್ಟಿನಲ್ಲಿ ಇನ್ನೂ ಈ ತಿಂಗಳ ಅಂತ್ಯಕ್ಕೆ ಮಳೆ ಶುರುವಾಗಲಿದೆ. ನನ್ನೆಲ್ಲಾ ಗೆಳೆಯರಲ್ಲಿ ಕೊನೆಯಲ್ಲಿ ಹೇಳುವುದೆನೆಂದರೆ ನಮ್ಮ ಜೀವದ ರಕ್ಷಣೆ ನಮ್ಮದೇ ಹೊಣೆ, ಮನೆಯಿಂದ ಹೊರಡುವ ಮುನ್ನ ನಿಧಾನವೇ ಪ್ರದಾನವೆಂಬ ಗಾಧೆಯನ್ನು ಮನದಲ್ಲಿ ನೆನೆದುಕೊಂಡು, ಗಾಡಿಯೇರುವುದು ಉತ್ತಮ.
ಪೂಜಾಶ್ರೀ ಕೆ ಪೈಚಾರ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.