HomePage_Banner
HomePage_Banner
HomePage_Banner
HomePage_Banner

ತಾಲೂಕು ಕಚೇರಿ ಆವರಣದಲ್ಲಿ ಗಿಡ ನೆಟ್ಟ ತಂದೆ-ಮಗ ಪರಿಸರ ಬೆಳೆಸಲು ಗಿಡ ನೆಡುವ ಯೋಜನೆ

ಆಧುನಿಕತೆಯ ಜಂಜಾಟದಲ್ಲಿ ತೊಡಗಿರುವ ನಾವೆಲ್ಲರೂ ಒಂದು ರಜೆ ಸಿಕ್ಕರೆ ಮೊಬೈಲ್, ಸಿನಿಮಾ, ಆಟ ಹೀಗೆ ಹೇಗೇಗೂ ಕಳೆಯುತ್ತಾರೆ. ಅದಕ್ಕೆ ಅಪವಾದ ಎಂಬಂತೆ ಕೇರ್ಪಳ ದ ತಂದೆ-ಮಗ ತಾಲೂಕು ಕಚೇರಿ ಸೇರಿದಂತೆ ಆಯ್ದ ಸ್ಥಳದಲ್ಲಿ ಗಿಡ ನೆಡುವ ಮೂಲಕ ಪರಿಸರ ಬೆಳೆಸುವಲ್ಲಿ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.
ಸುಳ್ಯ ಕೇರ್ಪಳ ನಿವಾಸಿ, ಕೆವಿಜಿ ವಿದ್ಯಾಸಂಸ್ಥೆಯ ಉದ್ಯೋಗಿ ಚಂದ್ರಪ್ರಕಾಶ್ ಹಾಗೂ ಅವರ ಪುತ್ರ ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಯ ವಿದ್ಯಾರ್ಥಿ ತನಿಷ್ ಕೇರ್ಪಳ ರಜೆಯ ದಿನದಲ್ಲಿ ಗಿಡ ನೆಡುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ‌
ಇಂದು ಸುಳ್ಯ ತಾಲೂಕು ಕಚೇರಿ ಗೆ ಬಂದು ತಮ್ಮ ಆಶಯವನ್ನು ತಹಶೀಲ್ದಾರ್ ರ ಜತೆ ತಿಳಿಸಿ ಅವರ ಒಪ್ಪಿಗೆ ಪಡೆದ ತಂದೆ-ಮಗ ತಾಲೂಕು ಕಚೇರಿ ಆವರಣದಲ್ಲಿ ತಾವೇ ಗುಂಡಿ ತೆಗೆದು 8 ಮಲ್ಲಿಕಾ ಮಾವಿನ ಹಣ್ಣಿನ ಗಿಡ ನೆಟ್ಟಿದ್ದಾರೆ. ಹೀಗೆ ತಮ್ಮ ಮನೆಯ ಪರಿಸರ, ಶಾಲೆ, ಹಾಗೂ ಊರಿನಲ್ಲಿ ಇದೇ ಕಾರ್ಯವನ್ನು ಇವರಿಬ್ಬರು ಮಾಡಿದ್ದಾರೆ.
“ಇಂದಿನ ದಿನದಲ್ಲಿ ಪರಿಸರ ರಕ್ಷಣೆ ಯ ನಿಟ್ಟಿನಲ್ಲಿ ಅಲ್ಲಲ್ಲಿ ಗಿಡ ನೆಡಲಾಗುತ್ತಿದೆ. ನಾವೂ ಪರಿಸರ ಉಳಿಸಲು ಈ ರೀತಿಯ ಲ್ಲಿ ತೊಡಗಿಸಿಕೊಂಡಿದ್ದೇವೆ. ಎಲ್ಲರ ಪ್ರೋತ್ಸಾಹ ವು ಇದೆ” ಎನ್ನುತ್ತಾರೆ ಚಂದ್ರಪ್ರಕಾಶ್ ರವರು.
ಇವರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಲಿ. ನಾವು ಗಿಡಗಳನ್ನು ನೆಟ್ಟು ನಮ್ಮಿಂದ ಸಾಧ್ಯ ವಾದಷ್ಟು ಪರಿಸರ ಉಳಿಸಲು ಸಹಕರಿಸೋಣ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.