HomePage_Banner
HomePage_Banner
HomePage_Banner

ಆ.24: ಬೆಳ್ಳಾರೆಯಲ್ಲಿ ಪಿರಮಿಡ್ ಮೊಸರು ಕುಡಿಕೆ, ಆ.25: ಕ್ರೀಡಾಕೂಟ

ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾ ಷ್ಟಮಿಯ ಅಂಗವಾಗಿ ಆ.24ರಂದು 3ನೇ ವರ್ಷದ ಪಿರಮಿಡ್ ಮೊಸರು ಕುಡಿಕೆ 2019 ಮತ್ತು 21ನೇ ವರ್ಷದ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಭಾ ಮತ್ತು ಸನ್ಮಾನ ಕಾರ್ಯಕ್ರಮ ಆ. 25ರಂದು ಬೆಳ್ಳಾರೆಯ ಸ.ಮಾ.ಹಿ.ಪ್ರಾ.ಶಾಲಾ ಮೈದಾನದಲ್ಲಿ ನಡೆಯಲಿದೆ.
ಆ. 24ರಂದು ಅ.2.30ಕ್ಕೆ ಬೆಳ್ಳಾರೆ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಬಳಿಯಿಂದ ಮೊಸರುಕುಡಿಕೆ ಮೆರವಣಿಗೆ ಆರಂಭವಾಗಲಿದ್ದು, ಯುವ ಉದ್ಯಮಿ ಮಿಥುನ್ ಶೆಣೈ ಬೆಳ್ಳಾರೆ ಚಾಲನೆ ನೀಡಲಿದ್ದಾರೆ. ಸಂಜೆ5 ಗಂಟೆಗೆ ಸಂಘದ ಅಧ್ಯಕ್ಷ ಕೊರಗಪ್ಪ ನಾಯ್ಕ ಕುರುಂಬುಡೇಲುರವರ ಅಧ್ಯಕ್ಷತೆಯಲ್ಲಿ ಅಚಲಾಪುರ ಕಟ್ಟೆ ಬಳಿ ಸಮಾರೋಪ ಸಮಾರಂಭ ನಡೆಯಲಿದೆ. ಪಿರಮಿಡ್ ಮೊಸರು ಕುಡಿಕೆ ವಿಜೇತರಿಗೆ ಪ್ರ.ಬಹುಮಾನ ರೂ. 6020, ದ್ವಿ. ಬಹುಮಾನ ರೂ. 5020ಹಾಗೂ ತೃತೀಯ ಬಹುಮಾನವಾಗಿ ರೂ. 3020 ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ನಗದು ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.
ಆ.25ರಂದು ಬೆಳಿಗ್ಗೆ 10 ಗಂಟೆ ಯಿಂದ ನಡೆಯಲಿರುವ ವಿವಿಧ ಕ್ರೀಡಾಸ್ಪರ್ಧೆಗಳಿಗೆ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಬೆಳ್ಳಾರೆ ಇದರ ಗೌರವಾಧ್ಯಕ್ಷ ಆನಂದ ರೈ ಪುಡ್ಕಜೆ ದೀಪ ಪ್ರಜ್ವಲಿಸಲಿದ್ದಾರೆ. ಮಹಿಳೆಯರಿಗೆ ತ್ರೋಬಾಲ್, ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ಲಕ್ಕಿಗೇಮ್ ಸೇರಿದಂತೆ ವಿವಿಧ ಸ್ಪರ್ಧೆಗಳು, ೫೫ ಕೆ.ಜಿ. ವಿಭಾಗದ ಪುರುಷರಿಗೆ ಕಬಡ್ಡಿ ಪಂದ್ಯಾಟ ಸೇರಿದಂತೆ ಪುರುಷರಿಗೆ ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ಲಕ್ಕಿಗೇಮ್ ಮತ್ತಿತರ ಸ್ಪರ್ಧೆಗಳು, ಬಾಲಕಿಯರಿಗೆ, ಬಾಲಕರಿಗೆ, ಮಕ್ಕಳಿಗೆ, ವಿವಿಧ ಸ್ಪರ್ಧೆಗಳು ನಡೆಯಲಿದೆ. ಆ. ೨೫ರಂದು ಅ.2.00ರಿಂದ ಸಂಘದ ಅಧ್ಯಕ್ಷ ಕೊರಗಪ್ಪ ನಾಯ್ಕ ಕುರುಂಬುಡೇಲುರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಶ್ರೀಮತಿ ಮೋಹಿನಿ ಬೆಳ್ಳಾರೆಯವರಿಗೆ ಗುರುರತ್ನ ಪ್ರಶಸ್ತಿ ನೀಡಿ ಗೌರವಿಸಲಾ ಗುವುದು. ಭಾರತೀಯ ಭೂಸೇನಾ ನಿವೃತ್ತ ಯೋಧ ಪದ್ಮನಾಭ ಗೌಡ ಬಾಳಿಲ ಮತ್ತು ನಿವೃತ್ತ ಯೋಧ ಹಾಗೂ ರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಪಿ.ಟಿ. ಮಹಾದೇವಿ ಪದ್ಮನಾಭರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಪೂ. 11.30 ರಿಂದ 1. ರಿಂದ 8ವರ್ಷದವರೆಗಿನ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ಕೃಷ್ಣವೇಷ ಸ್ಪರ್ಧೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.