ನಿಂತಿಕಲ್ಲಿನಲ್ಲಿ ವೃದ್ಧಿ ಕಾಂಪ್ಲೆಕ್ಸ್ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle

ಗುಣಮಟ್ಟ ಕಾಯ್ದುಕೊಳ್ಳುವಿಕೆಯಿಂದ ವ್ಯವಹಾರ ವೃದ್ಧಿ – ರಾಘವ ಗೌಡ ಪಲ್ಲತ್ತಡ್ಕ

ನಿಂತಿಕಲ್ಲು ಮುಖ್ಯ ರಸ್ತೆ ಸಮೀಪ ಶ್ರೀಮತಿ ಜಾನಕಿ ವೆಂಕಪ್ಪ ಗೌಡ ಆಲಾಜೆಯವರು ನೂತನವಾಗಿ ನಿರ್ಮಿಸಿದ ವೃದ್ಧಿ ಕಾಂಪ್ಲೆಕ್ಸ್ ನ ಉದ್ಘಾಟನಾ ಕಾರ್ಯಕ್ರಮವು ಆ.19 ರಂದು ನಡೆಯಿತು.

ಮುರುಳ್ಯದ ಮಿಲ್ಕ್ ಮಾಸ್ಟರ್ ರಾಘವ ಗೌಡ ಪಲ್ಲತ್ತಡ್ಕ ನೂತನ ಕಾಂಪ್ಲೆಕ್ಸ್ ನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ನಿಂತಿಕಲ್ಲಿನಲ್ಲಿ ಇತ್ತೀಚೆಗೆ ಹಲವು ಕಾಂಪ್ಲೆಕ್ಸ್ ಗಳು ಉದ್ಘಾಟನೆಗೊಂಡಿದ್ದು ಉತ್ತಮವಾಗಿ ವ್ಯವಹಾರ ನಡೆಸುತ್ತಿವೆ.ದೂರದೃಷ್ಟಿ ಇಟ್ಟುಕೊಂಡು ವೆಂಕಪ್ಪ ಗೌಡ ದಂಪತಿಗಳು ಸುಂದರವಾದ ಕಾಂಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ.

ಈ ಪರಿಸರದ ಜನರಿಗೆ ಉದ್ಯೋಗವಕಾಶವನ್ನು ಒದಗಿಸಿಕೊಡುವಲ್ಲಿಯು ಅನುಕೂಲಕರವಾಗಲಿದೆ.ಅಲ್ಲದೆ ವ್ಯಾಪಾರ ಮಾಡುವವರು ಒಳ್ಳೆಯ ಗುಣಮಟ್ಟವನ್ನು ಕಾಯ್ದುಕೊಂಡು ಜನರ ಮನಸ್ಸನ್ನು ಗೆಲ್ಲುವುದರ ಮುಖಾಂತರ ವ್ಯವಹಾರ ವೃದ್ಧಿಯಾಗಲಿ ಎಂದು ಹೇಳಿದರು.


ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶುಭದಾ ಎಸ್.ರೈ, ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ,ಎಣ್ಮೂರು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಜಾನಕಿ ಅಲೆಂಗಾರ,ಉಪಾಧ್ಯಕ್ಷ ಕರುಣಾಕರ ಹುದೇರಿ,ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಅಕ್ಷಯ ಆಳ್ವ,ಮುರುಳ್ಯ ಸಮಹಾದಿ ಶ್ರೀ ರಾಮಾಂಜನೇಯ ಭಜನಾ‌ ಮಂದಿರದ ಅಧ್ಯಕ್ಷ ವಸಂತ ನಡುಬೈಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಗೌರವ ಉಪಸ್ಥಿತರಾಗಿ ಅಲೆಕ್ಕಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ವಸಂತ ನಡುಬೈಲು,ಮುಖ್ಯಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ, ನಿಂತಿಕಲ್ಲು ವನದುರ್ಗಾದೇವಿ ಸಾನ್ನಿಧ್ಯದ ಅಧ್ಯಕ್ಷ ರೂಪರಾಜ ರೈ, ಧರ್ಮಶ್ರೀ ಆರ್ಕೇಡ್ ಮಾಲಕ ಮಾಧವ ಗೌಡ ಎಂ,ಮಾಜಿ ಜಿಲ್ಲಾ ಪಂ.ಸದಸ್ಯೆ ಶ್ರೀಮತಿ ಭಾಗೀರಥಿ ಮುರುಳ್ಯ ,ಕಾಂಪ್ಲೆಕ್ಸ್ ಮಾಲಕರಾದ ಶ್ರೀಮತಿ ಜಾನಕಿ ವೆಂಕಪ್ಪ ಗೌಡ ಆಲಾಜೆ ಉಪಸ್ಥಿತರಿದ್ದರು.


ಕಾಂಪ್ಲೆಕ್ಸ್ ಮಾಲಕ ವೆಂಕಪ್ಪ ಗೌಡ ಆಲಾಜೆ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು.
ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.