HomePage_Banner
HomePage_Banner
Breaking News

ಕೊಡಗಿನವರಿಗೆ 9 ಲಕ್ಷ-ಬೆಳ್ತಂಗಡಿಯವರಿಗೆ 5 ಲಕ್ಷ-ಸುಳ್ಯದ ಸಂತ್ರಸ್ತರತ್ತ ಮಾತ್ರ ನಿರ್ಲಕ್ಷ್ಯ -ಸುಳ್ಯದವರಿಗೆ ಮನೆಯೂ ಇಲ್ಲ-ಬಾಡಿಗೆಯೂ ಇಲ್ಲ-ಪ್ರಾಕೃತಿಕ ದುರಂತ ಸಂತ್ರಸ್ತರಿಗೆ ಸರಕಾರದ ತಾರತಮ್ಯ

ಕಳೆದ ವರ್ಷ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಕಳೆದು ಒಂದು ದಿನ ವಾಗುತ್ತಿದ್ದಂತೆ ಕೊಡಗಿನಲ್ಲಿ ಆರಂಭ ಗೊಂಡ ಪ್ರಾಕೃತಿಕ ವಿಪ್ಲವ ಇಡೀ ರಾಜ್ಯದ ಜನರನ್ನು ತಲ್ಲಣ ಗೊಳಿಸಿತ್ತು. ಸತತ 4 ದಿನಗಳ ಕಾಲ ನಡೆದ ಈ ವಿಪ್ಲವ ನೂರರಷ್ಟು ಜನರ ಪ್ರಾಣ ಹಾನಿಗೆ ಕಾರಣವಾಯಿತು. ಸಾವಿರಾರು ಎಕರೆ ಕೃಷಿ ಭೂಮಿ ಬರಡು ಬೆಂಗಾಡಾಗಿ ಪರಿವರ್ತನೆಯಾಯಿತು. ಇಡೀ ಬೆಟ್ಟಕ್ಕೆ ಬೆಟ್ಟವೇ ಸಿಡಿದು, ಕುಸಿದು, ಕಲ್ಲು, ಮಣ್ಣು, ಮರಗಳೆಲ್ಲ ನೀರಾಗಿ ಹರಿದು ಎದುರಿಗೆ ಸಿಕ್ಕವರ ಮುಕ್ಕಿ ತಿಂದು ಅಟ್ಟ ಹಾಸ ಮೆರೆಯಿತು. ಸಾವಿರಾರು ಮನೆಗಳು ಕುರುಹೂ ಇಲ್ಲದಂತೆ ನಾಶವಾಗಿ ಹೋ ದವು. ರಸ್ತೆ ಗಳು ನಾಮಾವಶೇಷವಾದವು.
ಇಡೀ ಆಡಳಿತ ಕೊಡಗಿನತ್ತ ಗಮನ ಕೇಂದ್ರೀಕರಿ ಸಿತು. ಪ್ರಾಕೃ ತಿಕ ದುರಂತ ದಲ್ಲಿ ಜೀವ ಕಳೆದು ಕೊಂಡಂ ತಾಗಿದ್ದ ಕೊಡ ಗನ್ನು ಮತ್ತೆ ಕಟ್ಟ ಬೇಕಾ ಗಿತ್ತು. ರಾಜ್ಯಾ ದ್ಯಂತ- ದೇಶಾ ದ್ಯಂತದ ಜನ ತಮ್ಮ ಕೈಲಾದ ಸಹಾಯ ಮಾಡತೊಡಗಿದರು. ಇದೆಲ್ಲ ಕಳೆದು ಒಂದು ವರ್ಷ ವಾಯಿ ತು. ನಿ ಧಾ ನಕ್ಕೆ ತಲೆ ಎತ್ತ ತೊಡ ಗಿದ ಕೊಡಗಿಗೆ ಈ ಬಾರಿಯೂ ಪ್ರಕೃತಿಯ ಪ್ರಹಾರ ಮುಂದುವರಿದಿದೆ. ಹತ್ತಾರು ಜೀವಗಳು, ಆಸ್ತಿ ಪಾಸ್ತಿಗಳು, ರಸ್ತೆಗಳು ಆಹುತಿಯಾಗಿವೆ.
ಈ ವರ್ಷ ಬೆಳ್ತಂಗಡಿಯ ಚಾರ್ಮಾಡಿ ಗ್ರಾಮ, ಕಡಿರುದ್ಯಾವರ ಗ್ರಾಮ, ಮಿತ್ತಬಾಗಿಲು ಗ್ರಾಮಗಳು ಕಳೆದ ವರ್ಷದ ಜೋಡುಪಾಲ ಘಟನೆಯನ್ನು ನೆನಪಿಸುವ ರೀತಿಯಲ್ಲಿ ಪ್ರಾಕೃತಿಕ ದುರಂತಕ್ಕೆ ಒಳಗಾಗಿವೆ. ಮನೆಗಳು, ಸೇತುವೆಗಳು, ರಸ್ತೆಗಳು ಕೊಚ್ಚಿ ಹೋಗಿವೆ. ನೂರಾರು ಎಕರೆ ಕೃಷಿ ಭೂಮಿ ನಾಶವಾಗಿವೆ.
ಕಳೆದ ವಷ ದುರಂತದ ವೇಳೆ ಅಧಿಕಾರದಲ್ಲಿದ್ದ ಕುಮಾರಸ್ವಾಮಿ ಸರ ಕಾರ ಮನೆ ಬಿದ್ದು ಹೋದುದಕ್ಕೆ 95 ಸಾವಿರ ರೂ. ಕೊಟ್ಟದ್ದಲ್ಲದೆ 6 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆ ನಿರ್ಮಿಸಿ ಕೊಡುತ್ತಿದೆ. ಮನೆ ನಿರ್ಮಾಣ ವಾಗುವ ವರೆಗೆ ಒಂದು ಕುಟುಂಬಕ್ಕೆ ತಿಂಗಳಿಗೆ 10ಸಾವಿರದಂತೆ ಮನೆ ಬಾಡಿಗೆ ಸರಕಾರ ನೀಡುತ್ತಿದೆ.
ಮೊನ್ನೆ ಬೆಳ್ತಂಗಡಿಯ ಪ್ರಕೃತಿ ದುರಂತ ವೀಕ್ಷಿಸಲು ಬಂದ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಳ್ತಂಗಡಿಯಲ್ಲಿ ದುರಂತದಿಂದ ಹಾನಿಗೀಡಾದ ಮನೆಗಳ ದುರಸ್ತಿಗೆ ತಲಾ 1 ಲಕ್ಷ ರೂ, ಸಂಪೂರ್ಣ ಮನೆ ನಾಶವಾಗಿ ಹೋದವರಿಗೆ ತಲಾ 5 ಲಕ್ಷ ರೂ. ವೆಚ್ಚದ ಮನೆ ನಿರ್ಮಾಣ ಹಾಗೂ ಹೊಸ ಮನೆ ಆಗುವವರೆಗೆ ತಿಂಗಳಿಗೆ 5ಸಾವಿರ ರೂ. ಮನೆ ಬಾಡಿಗೆ ಸರಕಾರದಿಂದ ನೀಡುವುದಾಗಿ ಘೋಷಿಸಿದ್ದಾರೆ.
ಇದೆಲ್ಲ ಪ್ರಾಕೃತಿಕ ದುರಂತಗಳು ಘಟಿಸಿದಾಗ ಸಂವೇದನಾ ಶೀಲ ಸರಕಾರ ಸ್ಪಂದಿಸಬೇಕಾದ ರೀತಿ. ಸ್ಪಂದಿಸಿದ ಸರಕಾರಗಳಿಗೆ ಧನ್ಯವಾದ ಹೇಳಲೇಬೇಕು. ಆದರೆ ಕೊಡಗಿನ ದುರಂತ ನಡೆದ ದಿನವೇ ಕೊಡಗಿನ ಇನ್ನೊಂದು ಮಗ್ಗುಲಿನ ಬೆಟ್ಟ ಗಳ ತಪ್ಪಲಲ್ಲಿರುವ ಸುಳ್ಯ ತಾಲೂಕಿನ ಕಲ್ಮಕಾರು, ಮಡಪ್ಪಾಡಿ ಮರ್ಕಂಜ ಮತ್ತು ಅರಂತೋಡಿನ ಅಡ್ತಲೆಯಲ್ಲಿ ಗುಡ್ಡ ಬಾಯ್ತೆರೆದು ಜಾರಿ ಮನೆಗಳು ಒಡೆದು ಹೋಗಿ ಶಾಶ್ವತವಾಗಿ ಅಲ್ಲಿ ನೆಲೆಸಲಾರದ ಪರಿಸ್ಥಿತಿಗೆ ಒಳಗಾಗಿರುವ ಕುಟುಂಬಗಳಿಗೆ ೯ ಲಕ್ಷದ ಮನೆಯೂ ಇಲ್ಲ. ತಿಂಗಳ ಬಾಡಿಗೆಯೂ ಇಲ್ಲ. ಹಾಗಿದ್ದರೆ ಸುಳ್ಯ ತಾಲೂಕಿನ ಸಂತ್ರಸ್ತರು ಮಾಡಿದ ಪಾಪವಾದರೂ ಏನು?
ಕಲ್ಮಕಾರು ಗ್ರಾಮದ ಗುಳಿಕ್ಕಾನ ಎಂಬಲ್ಲಿ ಬೆಟ್ಟ ಬೃಹತ್ತಾಗಿ ಬಿರುಕು ಬಿಟ್ಟು ಗುಡ್ಡ ಜಾರಿದ ಪರಿಣಾಮ ಅಂತಿಬೆಟ್ಟು ಉಮೇಶ್ ಗೌಡ ಹಾಗೂ ಮಾಣಿಬೆಟ್ಟು ಲೋಕಯ್ಯ ಗೌಡ ಎಂಬವರ ಮನೆಗಳು ಬಿರುಕು ಬಿಟ್ಟವು. ಅಲ್ಲೆ ತಪ್ಪಲಲ್ಲಿರುವ ಚೆನ್ನ ಅಜಲ, ಕುಕ್ಕ ಅಜಲ, ಪ್ರಶಾಂತ ಅಜಲ, ದೆಯ್ಯು ಅಜಲ, ಅಂಗಾರ ಅಜಲ, ಬಾಬು ಅಜಲ, ಬಾಳಪ್ಪ ಅಜಲ, ಮತ್ತು ಪುಟ್ಟಣ್ಣ ಅಜಲ ಎಂಬವರ ಮನೆಗಳಿಗೆ ಗುಡ್ಡ ಇನ್ನಷ್ಟು ಜಾರಿದರೆ ಅಪಾಯವಾಗುತ್ತದೆ ಎಂದು ಅವರನ್ನು ಕೊಲ್ಲಮೊಗ್ರದ ನಿರಾಶ್ರಿತರ ಕೇಂದ್ರಗಳಲ್ಲಿ ಒಂದು ತಿಂಗಳು ಇರಿಸಲಾಯಿತು. ಮಳೆಗಾಲ ಕಳೆದ ಬಳಿಕ ಅವರು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರೂ, ಈ ಬಾರಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಪುನಃ ಕಲ್ಮಕಾರು ಸಂತೆಡ್ಕಕ್ಕೆ ಕರೆ ತಂದು ಶಾಲೆಯಲ್ಲಿ ಕುಳ್ಳಿರಿಸಲಾಗಿದೆ.
ಅವರಿಗೆ ಬೇರೆ ಕಡೆ ನಿವೇಶನ ನೀಡಿ, ಪಂಚಾಯತ್‌ನಿಂದ ಇಂದಿರಾ ಆವಾಸ್ ಮನೆ ಕೊಡುವ ಪ್ರಯತ್ನದ ಬಗ್ಗೆ ಒಂದು ವರ್ಷದಿಂದ ಹೇಳಲಾಗುತ್ತಿದೆಯೇ ಹೊರತು ಇದುವರೆಗೆ ಪ್ರಗತಿಯಾಗಿಲ್ಲ.
ಮಡಪ್ಪಾಡಿಯಲ್ಲಿ ೨ ಮನೆಗಳು : ಮಡಪ್ಪಾಡಿಯಲ್ಲಿ 2 ಮನೆಗಳು ಗುಡ್ಡ ಜಾರಿ ಬಂದುದರಿಂದ ವಾಸಕ್ಕೆ ಅಯೋಗ್ಯವಾಗಿದೆ. ಒಂದು ಯಶೋಧರ ಅಂಬೆಕಲ್ಲು ಎಂಬವರದ್ದು. ಇನ್ನೊಂದು ಚಿದ್ಗಲ್ ನಾರಾಯಣ ಗೌಡರದ್ದು. ಯಶೋಧರ ಗೌಡರ ಮನೆ ಇಳಿಜಾರಿನ ಬರೆಯಲ್ಲಿದ್ದು ಅವರ ಮನೆಯ ಗೋಡೆ ವರೆಗಿನ ತೋಟ ಜಾರಿ ಕೆಳಗಡೆ ಹೋಗಿದೆ. ತೋಡು ಮುಚ್ಚಿ ಹೋಗಿ ತೋಟವಿಡೀ ನೀರು ಹರಿಯುತ್ತಿದೆ. ಮನೆ ಇಂದೋ ನಾಳೆಯೋ ಜರಿದು ಬೀಳುವುದು ಖಚಿತವಾದುದರಿಂದ ಅಲ್ಲಿ ವಾಸಿಸಬಾರದು ಎಂದು ಕಂದಾಯ ಇಲಾಖೆಯವರು ಹೇಳಿದ್ದು, ಅವರು ರಸ್ತೆಯ ಮೇಲ್ಬದಿಯಲ್ಲಿ ಶೆಡ್ ನಿರ್ಮಿಸಿ ಅದರಲ್ಲಿ ವಾಸಿಸುತ್ತಿದ್ದಾರೆ. ಹೊಸದಾಗಿ ಮನೆ ಕಟ್ಟಿಸಲು ಅವರ ಜಾಗ ಸುರಕ್ಷಿತವಲ್ಲದ ಕಾರಣ ಸೂಕ್ತ ಸ್ಥಳ ಸರಕಾರದ ವತಿಯಿಂದ ಸಿಗುವ ನಿರೀಕ್ಷೆಯಲ್ಲಿ ಅವರಿದ್ದಾರೆ.
ಚಿದ್ಗಲ್ ನಾರಾಯಣ ಗೌಡರ ಮನೆ ಗುಡ್ಡ ಜಾರಿದ ಪರಿಣಾಮವಾಗಿ ಒಡೆದು ಹೋಗಿದ್ದು ಅಲ್ಲಿ ವಾಸಿಸುವುದು ಅಪಾಯಕಾರಿಯೆಂದು ಅಧಿಕಾರಿಗಳು ಹೇಳಿದ ಮೇರೆಗೆ ಅವರು ಮನೆ ಖಾಲಿ ಮಾಡಿ ಸುಳ್ಯದಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ.
ಇವರಿಬ್ಬರಿಗೂ ಮನೆ ನಾಶವಾದುದಕ್ಕಾಗಿ 95 ಸಾವಿರ ರೂ. ಸಿಕ್ಕಿದ್ದು ಹೊರತುಪಡಿಸಿದರೆ, ಮಡಿಕೇರಿಯಲ್ಲಿ ಕೊಡುತ್ತಿರುವಂತೆ ಮನೆ ಬಾಡಿಗೆಯಾಗಲೀ, ಹೊಸಮನೆಯಾಗಲೀ ಸಿಕ್ಕಿಲ್ಲ.
ಮರ್ಕಂಜದಲ್ಲಿ 2 ಮನೆ : ಮರ್ಕಂಜದ ಮಿನುಂಗೂರು ಸಮೀಪ ಮಾವಜಿ ಕೇಶವ ಗೌಡ ಹಾಗೂ ಉಬ್ರಾಳ ಮೇದಪ್ಪ ಗೌಡರ ಮನೆಗಳು ಪಕ್ಕದ ಗುಡ್ಡ ಬಾಯಿಬಿಟ್ಟು ಜಾರಿದ ಪರಿಣಾಮ ಬಿರುಕು ಬಿಟ್ಟು ಅಪಾಯದ ಪರಿಸ್ಥಿತಿಯಲ್ಲಿವೆ. ಅವರಿಬ್ಬರಿಗೂ ತಲಾ ೯೫ ಸಾವಿರ ರೂ. ಪರಿಹಾರ ಧನ ನೀಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಮಡಿಕೇರಿ ಮಾದರಿಯ ಪರಿಹಾರ ಇವರಿಗೆ ಕೊಟ್ಟಿಲ್ಲ. ಅರಂತೋಡು ಅಡ್ತಲೆಯ ದಿನೇಶ್ ಕಿರ್ಲಾಯರವರಿಗೂ ಇದೇ ಪರಿಸ್ಥಿತಿ.

ತಾರತಮ್ಯ ಏಕೆ?
ಮಡಿಕೇರಿಯ ದುರಂತ ಸಂಭವಿಸಿದ ಸಂದರ್ಭದಲ್ಲೇ, ಅದೇ ಮಾದರಿಯ ದುರಂತದಿಂದ ಸುಳ್ಯ ತಾಲೂಕಿನ ಈ ಮನೆಗಒ ಅಪಾಯಕ್ಕೀಡಾಗಿ ವಾಸಕ್ಕೆ ಅಯೋಗ್ಯ ವೆನಿಸಿದ್ದರೂ, ಮಡಿಕೇರಿಯಲ್ಲಿ ನೀಡಲಾಗುತ್ತಿರುವ ಪರಿಹಾರವನ್ನು ಇಲ್ಲಿಗೆ ಅನ್ವಯಿಸದೆ ಇರುವುದು ತಾರತಮ್ಯವಲ್ಲವೇ?
ಕಳೆದ ವರ್ಷವೇ ಈ ವಿಚಾರವನ್ನು ಶಾಸಕರು ಮತ್ತು ಉಸ್ತುವಾರಿ ಸಚಿವರ ಗಮನಕ್ಕೆ ಪತ್ರಕರ್ತರು ತಂದಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ಕೂಡಾ ನೀಡಿದ್ದರು. ಆದರೆ ಅದು ಕಾರ್ಯಗತಗೊಂಡಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಸರಕಾರದ ಆದೇಶವಿಲ್ಲದೆ ನಮಗೆ ಕೊಡಲಾಗುವುದಿಲ್ಲ ಎನ್ನುತ್ತಿದ್ದು, ಸರಕಾರದಿಂದ ಆದೇಶವನ್ನು ಮಾಡಿಸಬೇಕಾದ ಜನಪ್ರತಿನಿಧಿಗಳು ಸ್ಪಂದನವೇ ಇಲ್ಲದೆ ಕುಳಿತಿರುವುದರಿಂದ ಮನೆ ಕಳೆದುಕೊಂಡ ಸುಳ್ಯ ತಾಲೂಕಿನವರಿಗೆ ನ್ಯಾಯ ದೊರಕದೆ ಉಳಿಯುವಂತಾಗಿದೆ.
ಕಾನೂನನ್ನು ಜನರಿಗೆ ನೆರವಾಗುವ ರೀತಿಯಲ್ಲಿ ರೂಪಿಸುವುದು ಜನ ಪ್ರತಿನಿಧಿಗಳ ಕೆಲಸ. ಅದನ್ನು ಮಾಡದೆ `ನಿಮಗೆ 95 ಸಾವಿರ ರೂ ಸಿಕ್ಕಿದೆಯಲ್ಲಾ? ಇನ್ನೂ ಏನು ಬೇಕು?“ ಎಂದು ಕೇಳಿದರೆ ಜನರ ಸಂಕಷ್ಟ-ಸಂಕಷ್ಟವಾಗಿಯೇ ಉಳಿಯುತ್ತದೆ.
…………….

ಪತ್ರಕರ್ತರಿಂದ ಮನವರಿಕೆ ಯತ್ನ
ಮಡಿಕೇರಿ ಮಾದರಿಯ ಪರಿಹಾರವನ್ನು ಸುಳ್ಯ ತಾಲೂಕಿನವರಿಗೂ ಕೊಡಬೇಕೆಂದು ಪತ್ರಕರ್ತರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಯು.ಟಿ.ಖಾದರ್‌ರಿಗೆ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ರಿಗೆ, ಜನಪ್ರತಿನಿಧಿಗಳಿಗೆ ಮನವರಿಗೆ ಮಾಡಲು ಯತ್ನಿಸಿದ್ದರು. ಯು.ಟಿ.ಖಾದರ್ ಒಪ್ಪಿದ್ದರು. ಜಿಲ್ಲಾಧಿಕಾರಿ `10 ಮನೆಗಳ ಲೀಸ್ಟ್ ಸರಕಾರಕ್ಕೆ ಕಳುಹಿಸಿವೆ. ಮುಂದಕ್ಕೆ ಆದೀತು` ಎಂದಿದ್ದಾರೆ. ಇನ್ನು ನಮ್ಮ ಶಾಸಕರೇ ಸಚಿವ ರಾದರೆ ಇದು ಆದೀತು ಎಂಬ ಆಶಾ ಭಾವನೆ ಮೂಡಿದೆ.

 

ನನಗೆ ಮನೆ ಕಟ್ಟಲು ಐದು ಸೆಂಟ್ಸ್ ಸರಕಾರಿ ಸ್ಥಳ ಕಂದಾಯ ಇಲಾಖೆಯವರು ತೋರಿಸಿದ್ದಾರೆ. ಆದರೆ ಅದರ ಹಕ್ಕುಪತ್ರ ಕೊಟ್ಟಿಲ್ಲ. ಅದು ಸಿಗದೆ ಮನೆ ಸಿಗುವುದಿಲ್ಲ.
-ಉಬ್ರಾಳ ಮೇದಪ್ಪ ಗೌಡ, ಮರ್ಕಂಜ
……………….

“ನನಗೆ ಪಂಚಾಯತ್‌ನಿಂದ ಮನೆ ಕೊಡುವುದಾಗಿ ಹೇಳಿದ್ದರು. ಆದರೆ ಈಗ ನಿಮಗೆ ಎಪಿಎಲ್ ಕಾರ್ಡ್ ಇರುವುದರಿಂದ ಆಸ್ತಿ ಮಗನ ಹೆಸರಿಗೆ ಪಾಲು ಮಾಡಿಕೊಟ್ಟು ಬಿಪಿಎಲ್ ಕಾರ್ಡ್ ಮಾಡಿಸಿಕೊಂಡು ಬನ್ನಿ ಎಂದು ಹೇಳಿದ್ದಾರೆ. ನಾನೇ ಆಚೆ ಬದಿಯಲ್ಲಿ ಕಟ್ಟಿಸುತ್ತಿರುವ ಶೆಡ್‌ಗೆ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಿ ಎಂದರೆ ಅದನ್ನೂ ನೀಡುತ್ತಿಲ್ಲ. ಏನು ಮಾಡುವುದು?
-ಮಾವಜಿ ಕೇಶವ ಗೌಡ, ಮರ್ಕಂಜ
………………..

ನಮ್ಮ ಮನೆ ಒಡೆದು ಹೋದಾಗ ಬಂದು ಹೋದ ಜನಪ್ರತಿನಿಧಿಗಳು ಮತ್ತೆ ಆ ಕಡೆ ಬಂದಿಲ್ಲ. ನಾವು ಈಗ ಮನೆ ಬಿಟ್ಟು ಸುಳ್ಯದಲ್ಲಿzವೆ. ನಮಗೆ ಮಡಿಕೇರಿ ಮಾದರಿಯ ಪರಿಹಾರ ಸರಕಾರ ಕೊಡಬೇಕು. -ಶಶಿಕಲ ನಾರಾಯಣ ಗೌಡ ಚಿದ್ಗಲ್ ಮಡಪ್ಪಾಡಿ
…………..

ನನಗೆ ಮನೆ ಕಟ್ಟಲು ಸರಿಯಾದ ಜಾಗ ಇಲ್ಲ. ಈಗ ಮಳೆಗಾಲದಲ್ಲಿ ನಾವು ಈ ತಾತ್ಕಾಲಿಕ ಶೆಡ್‌ನಲ್ಲಿ ಕೂಡಾ ಇರಲಾಗುತ್ತಿಲ್ಲ. ಸಂಬಂಧಿಕರ ಮನೆಗಳಿಗೆ ಹೋಗಿ ಇರುತ್ತಿವೆ.
-ಯಶೋಧರ ಅಂಬೆಕಲ್ಲು, ಮಡಪ್ಪಾಡಿ

ಕೊಡಗಿನ ದುರಂತ ನಡೆದ ದಿನವೇ ಕೊಡಗಿನ ಇನ್ನೊಂದು ಮಗ್ಗುಲಿನ ಬೆಟ್ಟ ಗಳ ತಪ್ಪಲಲ್ಲಿರುವ ಸುಳ್ಯ ತಾಲೂಕಿನ ಕಲ್ಮಕಾರು, ಮಡಪ್ಪಾಡಿ ಮರ್ಕಂಜ ಮತ್ತು ಅರಂತೋಡಿನ ಅಡ್ತಲೆಯಲ್ಲಿ ಗುಡ್ಡ ಬಾಯ್ತೆರೆದು ಜಾರಿ ಮನೆಗಳು ಒಡೆದು ಹೋಗಿ ಶಾಶ್ವತವಾಗಿ ಅಲ್ಲಿ ನೆಲೆಸಲಾರದ ಪರಿಸ್ಥಿತಿಗೆ ಒಳಗಾಗಿರುವ ಕುಟುಂಬಗಳಿಗೆ 9 ಲಕ್ಷದ ಮನೆಯೂ ಇಲ್ಲ. ತಿಂಗಳ ಬಾಡಿಗೆಯೂ ಇಲ್ಲ. ಹಾಗಿದ್ದರೆ ಸುಳ್ಯ ತಾಲೂಕಿನ ಸಂತ್ರಸ್ತರು ಮಾಡಿದ ಪಾಪವಾದರೂ ಏನು?

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.