HomePage_Banner
HomePage_Banner
HomePage_Banner
HomePage_Banner
Breaking News

ಎಣ್ಮೂರು ಗ್ರಾಮ ಎಣ್ಮೂರು ಗ್ರಾ.ಪಂ.ನಲ್ಲೇ ಉಳಿಯುವಂತೆ ಎಣ್ಮೂರು ನಾಗರಿಕರಿಂದ ಕಡಬ ತಹಶೀಲ್ದಾರರಿಗೆ ಮನವಿ

ಎಣ್ಮೂರು ಗ್ರಾಮ ಎಣ್ಮೂರು ಗ್ರಾ.ಪಂ.ನಲ್ಲೇ ಉಳಿಯುವಂತೆ ಎಣ್ಮೂರು ನಾಗರಿಕರಿಂದ ಕಡಬ ತಹಶೀಲ್ದಾರರಿಗೆ ಮನವಿ
ಇತ್ತೀಚೆಗೆ ಸುಳ್ಯ ತಾಲೂಕಿನಿಂದ ಬೇರ್ಪಟ್ಟು ನೂತನ ಕಡಬ ತಾಲೂಕಿಗೆ ಸೇರ್ಪಡೆಗೊಂಡ ಎಣ್ಮೂರು ಗ್ರಾಮವನ್ನು ಎಣ್ಮೂರು ಗ್ರಾ.ಪಂ.ನಲ್ಲೇ ಉಳಿಸಬೇಕೆಂದು ಎಣ್ಮೂರಿನ ನಾಗರಿಕರು ಕಡಬ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ದ.ಕ. ಜಿಲ್ಲೆಯ ಸುಳ್ಯ ತಾಲೂಕಿನಲ್ಲಿದ್ದ ಎಣ್ಮೂರು ಮತ್ತು ಮುರುಳ್ಯ ಗ್ರಾಮಗಳನ್ನೊಳಗೊಂಡ 2ಗ್ರಾಮಗಳಿಗೆ ಎಣ್ಮೂರು ಗ್ರಾ.ಪಂ. ಇದ್ದು ತದನಂತರ ಇತ್ತೀಚೆಗೆ ನೂತನವಾಗಿ ಅಸ್ತಿತ್ವಕ್ಕೆ ಬಂದ ಕಡಬ ತಾಲೂಕಿಗೆ ಎಣ್ಮೂರು ಗ್ರಾಮವು ಸೇರ್ಪಡೆಗೊಂಡಿದ್ದು ಮುರುಳ್ಯ ಗ್ರಾಮವು ಸುಳ್ಯ ತಾಲೂಕಿನಲ್ಲಿಯೇ ಉಳಿದುಕೊಂಡಿತ್ತು. ಈ 2ಗ್ರಾಮವು ಅನೇಕ ವರ್ಷಗಳಿಂದ ಐತಿಹಾಸಿಕ ಹಿನ್ನಲೆಯುಳ್ಳ ಗ್ರಾಮವಾಗಿದ್ದು ೨ ಗ್ರಾಮಗಳು ಬೇರೆ ಬೇರೆ ತಾಲೂಕು ಆಗಿರುವುದರಿಂದ ಮತ್ತು ಈಗಾಗಲೇ ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿ ಕೆಲಸ ನಿರ್ವಹಿಸುತ್ತಿರುವುದರಿಂದ ಎಣ್ಮೂರು ಗ್ರಾಮವನ್ನು ಎಣ್ಮೂರು ಗ್ರಾ.ಪಂ.ನಲ್ಲೇ ಉಳಿಸಬೇಕೆಂದು ರಮೇಶ್ ಕೋಟೆಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎನ್.ಜಿ. ಪ್ರಭಾಕರ ರೈ, ಎನ್.ಜಿ. ಲೋಕನಾಥ ರೈ, ಗ್ರಾ.ಪಂ. ಸದಸ್ಯ ರಘುಪ್ರಸಾದ್ ಶೆಟ್ಟಿ, ಸಾಧಿಕ್ ನರ್ಲಡ್ಕ, ಜನಾರ್ದನ, ಮಾಯಿಲಪ್ಪ ಗೌಡ, ಮಹಮ್ಮದ್ ಎಣ್ಮೂರು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.