HomePage_Banner
HomePage_Banner
HomePage_Banner
HomePage_Banner
Breaking News

ಅಂಗಾರರಿಗೆ ಮಂತ್ರಿ ಸ್ಥಾನ ತಪ್ಪಿದ ಹಿನ್ನೆಲೆ – ಬಿಜೆಪಿಯ ತುರ್ತು ಸಭೆ ಆರಂಭ – ಜನಪ್ರತಿನಿಧಿಗಳು‌, ಶಕ್ತಿ ಕೇಂದ್ರ ಮುಖ್ಯಸ್ಥರು ಭಾಗಿ – ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ನಿರಾಕರಣೆ

ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಸುಳ್ಯ ಮಂಡಲ ಬಿ.ಜೆ.ಪಿ. ಕರೆದ ತುರ್ತು ಸಭೆಯು ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿದೆ.

ಜನಪ್ರತಿನಿಧಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರಗಳ ಮುಖ್ಯಸ್ಥರು, ವಿವಿಧ ಮೋರ್ಚಾಗಳ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದು, ಮುಂದಿನ ನಿರ್ಧಾರಗಳ ಅಭಿಪ್ರಾಯ ಕ್ರೋಢೀಕರಣ ನಡೆಯುತ್ತಿದೆ. ಸಭೆಗೆ ಮಾಧ್ಯಮದವರಿಗೆ ಪ್ರವೇಶ ಕಲ್ಪಿಸಲಾಗುತ್ತಿಲ್ಲ. ಹೀಗಾಗಿ ಸಭೆಯಲ್ಲಿ ನಡೆದ ಚರ್ಚೆಗಳು ಸಾರ್ವಜನಿಕರನ್ನು ತಲುಪಬಾರದೆಂಬ ಉದ್ದೇಶಕ್ಕೆ ಈ ನಿರ್ಧಾರವೇ ಎಂದು ಪ್ರಶ್ನಿಸುವಂತಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.