ಅಧ್ಯಕ್ಷ ಗಂಗಾಧರ ಗೌಡ ಕೇರ್ಪಡ
ಕಾರ್ಯದರ್ಶಿ ವಸಂತ ಕುಕ್ಕಾಯಕೋಡಿ
ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಗಣೇಶೋತ್ಸವ ನಡೆಸುವ ಸಲುವಾಗಿ ಆ.16 ರಂದು ದೇವಳದ ವ್ಯ.ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ ಪಿ.ಡಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ನೂತನ ಸಮಿತಿ ರಚನೆಗೊಂಡಿತು.
ಅಧ್ಯಕ್ಷರಾಗಿ ಗಂಗಾಧರ ಗೌಡ ಕೇರ್ಪಡ, ಕಾರ್ಯದರ್ಶಿಯಾಗಿ ವಸಂತ ಕುಕ್ಕಾಯಕೋಡಿ, ಸೇವಾ ಸಮಿತಿಯ ಎಲ್ಲಾ ಪದಾಧಿಕಾರಿಗಳನ್ನು ಮತ್ತು ಸದಸ್ಯರನ್ನು ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸೇವಾಸಮಿತಿ ಅಧ್ಯಕ್ಷ ಶಿವಾನಂದ ನಾಗಮಜಲು, ಭಜನಾಮಂಡಳಿಯ ಅಧ್ಯಕ್ಷ ಸುಂದರ ಗೌಡ ಆರೆಂಬಿ ಹಾಗೂ ಸದಸ್ಯರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.