HomePage_Banner
HomePage_Banner
HomePage_Banner
HomePage_Banner
Breaking News

ಎರಡನೇ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷತೆ


ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಮೂಲಕ ಎರಡನೇ ಬಾರಿ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿಯ ರಾಜ್ಯ ಸಾರಥಿಯ ಪಟ್ಟ ಒಲಿದಂತಾಗಿದೆ.
ಈ ಮೊದಲು ಡಿ.ವಿ ಸದಾನಂದ ಗೌಡರು ೨೦೦೬ ರಲ್ಲಿ ರಾಜ್ಯಾಧ್ಯಕ್ಷರಾಗಿದ್ದರು. ಈ ವೇಳೆ ಅವರು ಕೂಡಾ ಸಂಸದರಾಗಿದ್ದರು. ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದವರಾದ ಸದಾನಂದ ಗೌಡರು ಪುತ್ತೂರು ಶಾಸಕರಾಗಿ, ವಿಪಕ್ಷ ಉಪನಾಯಕರಾಗಿ, ಮಂಗಳೂರು ಸಂಸದರಾಗಿ, ರಾಜ್ಯದ ಮುಖ್ಯ ಮಂತ್ರಿಯಾಗಿ, ಉಡುಪಿ-ಚಿಕ್ಕಮಗಳೂರು ಸಂಸದರಾಗಿ, ಬೆಂಗಳೂರು ಸಂಸದರಾಗಿ ಸೇವೆಸಲ್ಲಿಸಿದ್ದು, ಪ್ರಸ್ತುತ ಕೇಂದ್ರಸಚಿವರೂ ಆಗಿದ್ದಾರೆ.


ನಳಿನ್ ಕುಮಾರ್ ಕಟೀಲ್ ಸುಳ್ಯ ವಿಧಾನಸಭಾ ಕ್ಷೇತ್ರದ ಪಾಲ್ತಾಡಿ ಗ್ರಾಮದ ಕುಂಜಾಡಿಯವರು. ಅವರ ತಾಯಿ ಈಗಲೂ ಅಲ್ಲೇ ಇದ್ದಾರೆ. ನಳಿನ್ ಕುಮಾರ್ ಕಟೀಲ್ ಪ್ರಾಥಮಿಕ ಶಿಕ್ಷಣವನ್ನು ಸುಳ್ಯ ತಾಲೂಕಿನ ಪೆರುವಾಜೆ ಮುಕ್ಕೂರು ಶಾಲೆಯಲ್ಲಿ ಪಡೆದಿದ್ದರು. ಇದೀಗ ಮೂರನೇಬಾರಿ ಜಿಲ್ಲೆಯ ಸಂಸದರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.