HomePage_Banner
HomePage_Banner
HomePage_Banner
HomePage_Banner
Breaking News

ಬೆಳ್ಳಾರೆ: ಪಿರಮಿಡ್ ಮೊಸರು ಕುಡಿಕೆ ಜನನಿ ಪ್ರೆಂಡ್ಸ್ ಆಲೆಟ್ಟಿ ಪ್ರಥಮ, ಮಿತ್ರಬಳಗ ಕಾರ್ಯತೋಡಿ ದ್ವಿತೀಯ

ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪಿರಮಿಡ್ ಮೊಸರು ಕುಡಿಕೆ ಆ. 24 ರಂದು ನಡೆಯಿತು. ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿ ಕಾರ್ಯಕ್ರಮವನ್ನು ಬೆಳ್ಳಾರೆಯ ಯುವ ಉದ್ಯಮಿ, ಅಚಲಾಪುರಕಟ್ಟೆ ಸಮಿತಿ ಅಧ್ಯಕ್ಷ ಮಿಥುನ್ ಶೆಣೈ ಉದ್ಘಾಟಿಸಿದರು. ಮೆರವಣಿಗೆಯ ಬಳಿಕ ಬೆಳ್ಳಾರೆ ಮೇಲಿನ ಪೇಟೆಯ ಕಾಮಧೇನು ಟವರ್ಸ್ ಬಳಿ ಸಮಾರೋಪ ಸಮಾರಂಭ ನಡೆಯಿತು. ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಕೊರಗಪ್ಪ ನಾಯ್ಕ ಕುರುಂಬುಡೇಲು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಿಥುನ್ ಶೆಣೈ, ವಿರಾಟ್ ಫ್ರೆಂಡ್ಸ್ ಅಧ್ಯಕ್ಷ ಅಶೋಕ್ ಪಾಟಾಳಿ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಅಧ್ಯಕ್ಷ ಬಿ. ನರಸಿಂಹ ಜೋಶಿ, ಜೆ.ಸಿ.ಐ. ಬೆಳ್ಳಾರೆ ಪೂರ್ವಾಧ್ಯಕ್ಷ ಪ್ರೀತಂ ರೈ ಬೆಳ್ಳಾರೆ, ಜೆ.ಸಿ.ಐ. ಬೆಳ್ಳಾರೆ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ, ಶ್ರೀದೇವಿ ಟೆಕ್ಸ್ ಟೈಲ್ಸ್ ನ ಮಾಲಕ ಅನಿಲ್ ಬರ್ಪಾ, ಪಿರಮಿಡ್ ಮೊಸರು ಕುಡಿಕೆ ಸಮಿತಿ ಸಂಚಾಲಕ ಪದ್ಮನಾಭ ಬೀಡು, ಸ್ನೇಹಿತರ ಕಲಾ ಸಂಘದ ನಿಕಟಪೂರ್ವಾಧ್ಯಕ್ಷ ಆನಂದ ಗೌಡ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ನೇಹಿತರ ಕಲಾ ಸಂಘದ ಸದಸ್ಯ ಚೇತನ್ ಪಡ್ಪು ಸ್ವಾಗತಿಸಿ, ಕಾರ್ಯದರ್ಶಿ ಸಂಜಯ್ ನೆಟ್ಟಾರು ವಂದಿಸಿದರು. ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು.
ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಿ ಜನನಿ ಫ್ರೆಂಡ್ಸ್ ಆಲೆಟ್ಟಿ ಪ್ರಥಮ, ಮಿತ್ರ ಬಳಗ ಕಾಯರ್ತೊಡಿ ದ್ವಿತೀಯ ಸ್ಥಾನ ಮತ್ತು ಶ್ರೀ ರಾಂ ಪ್ರೆಂಡ್ಸ್ ಪೇರಾಲ್ ತೃತೀಯ ಸ್ಥಾನ ಪಡೆದುಕೊಂಡರೆ ಭಾವೈಕ್ಯ ಯುವಕ ಮಂಡಲ ಪೆರುವಾಜೆ, ಸಂಕಲ್ಪ ಪ್ರೆಂಡ್ಸ್ ಕಳಂಜ ಮತ್ತು ಹಿಂದೂ ಜಾಗರಣಾ ವೇದಿಕೆ ಬೆಳ್ಳಾರೆ ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡವು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.