HomePage_Banner
HomePage_Banner
HomePage_Banner

ಸೆ.1 : ಯುವವಾಹಿನಿ ಸುಳ್ಯ ಘಟಕದಿಂದ ಕೆಸರ‍್ಡ್ ಬಿರುವೆರೆ ಗೊಬ್ಬುಲು

ಯುವವಾಹಿನಿ ಸುಳ್ಯ ಘಟಕ ಆಶ್ರಯದಲ್ಲಿ ಸೆ. ೦1 ರಂದು ನಡೆಯಲಿರುವ ಕೆಸರ್ಡ್ ಬಿರುವೆರೆ ಗೊಬ್ಬುಲು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ನೆಟ್ಟಾರಿನ ಪುಳಿಂಕೊಟೆಯ ಅಗ್ನಿಕಲ್ಲುರ್ಟಿ ದೈವಸಾನಿಧ್ಯದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಸ್ಥಳ ಯಜಮಾನರಾದ ಲೋಕೇಶ್ ಪೂಜಾರಿ ಕೆ ಎಸ್, ಯುವವಾಹಿನಿ ಸುಳ್ಯ ಘಟಕದ ಅಧ್ಯಕ್ಷ ಪ್ರವೀಣ್ ನೆಟ್ಟಾರು, ಪೂರ್ವಾಧ್ಯಕ್ಷ ಶಿವಪ್ರಸಾದ್ ಕೆ.ವಿ, ಕಾರ್ಯದರ್ಶಿ ಭರತ್ ಬೊಮ್ಮಾರ್, ಉಪಾದ್ಯಕ್ಷ ಸುನಿಲ್ ಪಟ್ಟೆ, ಪದಾಧಿಕಾರಿಗಳಾದ ಹರೀಶ್ ಬೆಳ್ಳಾರೆ, ಮಹೇಶ್ ಕಲ್ಪಣೆ, ಚಿದಂಬರ ಚೊಕ್ಕಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸೆ. ೧ರಂದು ಕೆಸರ‍್ಡ್ ಬಿರುವೆರೆ ಗೊಬ್ಬುಲು ಕ್ರೀಡಾಕೂಟವು ನೆಟ್ಟಾರು ಪುಳಿಂಕೊಟೆ ಗದ್ದೆಯಲ್ಲಿ ನಡೆಯಲಿದ್ದು, ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ ಹಾಗೂ ಮಹಿಳಾ ವಿಭಾಗದಲ್ಲಿ ಹಗ್ಗಜಗ್ಗಾಟ, ತ್ರೋಬಾಲ್, ಮತ್ತು ವೈಯಕ್ತಿಕ ಸ್ಪರ್ಧೆಗಳು ನಡೆಯಲಿದೆ. ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ಮತ್ತು ಸಂಜೆ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಬಿಲ್ಲವ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಯುವವಾಹಿನಿ ಸುಳ್ಯ ಘಟಕದ ಪದಾಧಿಕಾರಿಗಳು ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.