HomePage_Banner
HomePage_Banner
HomePage_Banner

ಸಂಪಾಜೆ : ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಸಭೆ

ಸಂಪಾಜೆ ಕನ್ನಡ ಸಾಹಿತ್ಯ ಪರಿಷತ್ತುನ ಹೋಬಳಿ ಘಟಕದ ಸಭೆಯನ್ನು ಆ. 24  ರಂದು ಸಂಪಾಜೆ ಪಯಶ್ವಿನಿ ಸಹಕಾರಿ ಸದನದಲ್ಲಿ ಕಸಾಪ ಜಿಲ್ಲಾಧ್ಯಕ್ಷರಾದ ಲೋಕೇಶ್ ಸಾಗರ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಹೋಬಳಿ ಮಟ್ಟದ ಅಧ್ಯಕ್ಷರು ಹಾಗೂ ಕಾರ್ಯದಶಿಗಳು ಮತ್ತು ಕೋಶಾಧಿಕಾರಿಯನ್ನು ಆಯ್ಕೆ ಮಾಡಲಾಯಿತು. ಸಂಪಾಜೆ ಹೋಬಳಿ ಘಟಕ ಕಸಾಪ ಸಮಿತಿಯ ಅಧ್ಯಕ್ಷರಾಗಿ ಸಂಪಾಜೆ ಪಯಶ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅನಂತ ಉರುಬೈಲು, ಕಾರ್ಯದರ್ಶಿಯಾಗಿ ಯಕ್ಷಗಾನ ಭಾಗವತ ಬಿ.ಜೆ.ಯಶೋಧರ, ಮತ್ತು ಸಾಹಿತಿ ಶ್ರೀಮತಿ ಸಹನಾ ಕಾಂತಬೈಲು ಹಾಗೂ ಕೋಶಾಧಿಕಾರಿಯಾಗಿ ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಕುಮಾರ್ ಚೆದ್ಕಾರ್, ಗೌರವ ಸಲಹೆಗಾರರಾಗಿ ನಿವೃತ ಶಿಕ್ಷಕರಾದ ವೆಂಕಪ್ಪ ಮಾಸ್ತರ್, ಮತ್ತು ಜಿಲ್ಲಾ ಸಮಿತಿ ಸದಸ್ಯರಾಗಿ ಲೋಕನಾಥ್ ಅಮೆಚೂರ್, ಮಾಜಿ ನಿರ್ದೇಶಕರು ಪಯಶ್ವಿನಿ ಸಂಘ ಹಾಗೂ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಂದರ ಬಿಸಿಲುಮನೆ, ನಿವೃತ ಶಿಕ್ಷಕರಾದ ಇಬ್ರಾಹಿಂ ಮಾಸ್ತರ್, ಜಾನಪದ ಕಲಾವಿದ ದೇವಪ್ಪ ಕೊಯನಾಡು, ಶ್ರೀಮತಿ ಲೋಕನಾಥ್ ಅಮೆಚೂರ್ ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.