HomePage_Banner
HomePage_Banner
Breaking News

ರೆಂಜಾಳ ಶಾಸ್ತಾವು ಯುವಕ ಮಂಡಲ ಪದಗ್ರಹಣ, ಸನ್ಮಾನ ಕಾರ್ಯಕ್ರಮ- ಶ್ರೀ ಕೃಷ್ಣ ಜನ್ಮಾಷ್ಟಮಿ

ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಇದರ ಪದಗ್ರಹಣ ಸಮಾರಂಭ , ಸನ್ಮಾನ ಕಾರ್ಯಕ್ರಮ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಆ. 25 ರಂದು ರೆಂಜಾಳ ವಿನಾಯಕ ಸಭಾಭವನದಲ್ಲಿ ನಡೆಯಿತು.

ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಯಕ್ಷಗಾನ ಕಲಾವಿದರಾದ ರೆಂಜಾಳ ರಾಮಕೃಷ್ಣ ರಾವ್ ಹಾಗೂ ಬೊಮ್ಮಾರು ಐತ್ತಪ್ಪ ಗೌಡ ಇವರನ್ನು ಮರ್ಕಂಜ ಪಂಚಸ್ಥಾಪನೆ ಮಾಜಿ ಮೊಕ್ತೇಸರರಾದ ಯುವರಾಜ ಜೈನ್ ಬಲ್ನಾಡುಪೇಟೆ ಸನ್ಮಾನಿಸಿದರು. ಗ್ರಾಮದ ಪವರ್ ಮೆನ್ ಗಳಾಗಿ ಪ್ರಾಮಾಣಿಕ ಸೇವೆ ನೀಡುತ್ತಿರುವ ಜಗದೀಶ ಜಡದಾರಿ ಹಾಗೂ ರಾಚಯ್ಯ ಮಠಪತಿ ಇವರನ್ನು ಗೌರವಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಮೋನಪ್ಪ ಪೂಜಾರಿ ಹೈದಂಗೂರು, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಂಕರ್ ಪೆರಾಜೆ, ಬೆನಕ ಕ್ರೀಡಾ ಮತ್ತು ಕಲಾ ಸಂಘದ ಸ್ಥಾಪಕಾಧ್ಯಕ್ಷ ಮುರಳಿ ಮಾವಂಜಿ, ನೆಹರು ಯುವಕೇಂದ್ರ ತಾಲೂಕು ಸಂಯೋಜಕ ವಿಖ್ಯಾತ್ ಬಾರ್ಪಣೆ, ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಬಲ ಕಟ್ಟಕೋಡಿ , ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಭಟ್ ಬೊಮ್ಮಾರು ಅತಿಥಿಗಳಾಗಿದ್ದರು.

ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಧಾನ ಭಾಷಣ ಮಾಡಿದರು.
ಬೊಳ್ಳಾಜೆ ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೃಷ್ಣ ಕೊರತ್ತೋಡಿ, ತೇರ್ಥಮಜಲು ಶ್ರೀ ವಿಷ್ಣು ಯುವಕ ಮಂಡಲ ಅಧ್ಯಕ್ಷ ಬಾಲಕೃಷ್ಣ ಕಂಜಿಪಿಲಿ , ಮರ್ಕಂಜ ಮಿತ್ರ ಬಳಗದ ಅಧ್ಯಕ್ಷ ಬಾಲಚಂದ್ರ ಗುರುಂಪು, ಮರ್ಕಂಜ ಯುವಕ ಮಂಡಲ ಕಾರ್ಯದರ್ಶಿ ಪ್ರಶಾಂತ್ ರೈ ಪಾರೆಪ್ಪಾಡಿ ವೇದಿಕೆಯಲ್ಲಿದ್ದರು.

ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಂಕರ್ ಪೆರಾಜೆ ಪದಗ್ರಹಣ ನೆರವೇರಿಸಿ ಪ್ರಮಾಣ ವಚನ ಬೋಧಿಸಿದರು. ಯುವಕ ಮಂಡಲ ಸದಸ್ಯ ಶಿವರಂಜನ್ ದಾಸರಬೈಲು ಸ್ವಾಗತಿಸಿದರು. ರಾಜೇಶ್ ರೆಂಜಾಳ ಪ್ರಾರ್ಥಿಸಿದರು. ಶಶಿಕಾಂತ್ ಗುಳಿಗಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೇವಪ್ಪ ಹೈದಂಗೂರು ಸನ್ಮಾನ ಪತ್ರ ವಾಚಿಸಿದರು. ಐತ್ತ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ಪದಗ್ರಹಣ ಸಮಾರಂಭದ ಬಳಿಕ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಯುವಕ ಮಂಡಲ ಅಧ್ಯಕ್ಷ ಮನೋಹರ ರೈ ರೆಂಜಾಳ , ಕಾರ್ಯದರ್ಶಿ ರಾಜೇಶ್ ಬೇರಿಕೆ ಮಂಜುನಾಥ ರೈ ರೆಂಜಾಳ, ಸವಿನ್ ಕೊಡಪಾಲ ಹಾಗೂ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.