HomePage_Banner
HomePage_Banner
HomePage_Banner
HomePage_Banner
Breaking News

ಹೃದಯದ ಅರೋಗ್ಯ ವೃದ್ಧಿಸುವ,ಮೆದುಳಿನ ಅರೋಗ್ಯ ಹಾಗೂ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆಮಾಡುವ ಬಾದಾಮಿ!

ದೇಹಕ್ಕೆ ಉತ್ತಮ ಅರೋಗ್ಯ ಇದ್ರೆ ಅದಕ್ಕಿಂತ ಮತ್ತೊಂದು ಏನು ಇಲ್ಲ ಅನಿಸುತ್ತದೆ, ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಹಲವು ವಿಡಿ ವಿಧಾನಗಳನ್ನು ಅನುಸರಿಸುತ್ತೇವೆ ಆದ್ರೆ ಯಾವೆಲ್ಲ ರೀತಿಯಲ್ಲಿ ಆರೋಗ್ಯವನ್ನು ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿಯುವುದು ಕೂಡ ಅವಶ್ಯಕವಾಗಿದೆ.

ಬಾದಾಮಿ ಸೇವನೆಯಿಂದ ಹೃದಯದ ಅರೋಗ್ಯ, ಮೆದುಳಿನ ಅರೋಗ್ಯ ಮುಂತಾದವುಗಳನ್ನು ವೃದ್ಧಿಸಿಕೊಳ್ಳಬಹುದು, ಅಷ್ಟೇ ಅಲ್ಲದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಬೆಳೆಯದಂತೆ ನಿಯಂತ್ರಿಸಿಕೊಳ್ಳಬಹುದು. 

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಶೈಲಿಯಲ್ಲಿ ಅನಾರೋಗ್ಯದ ಸಮಸ್ಯೆಯನ್ನು ಹೆಚ್ಚು ಹೆದುರಿಸಲಾಗುತ್ತಿದೆ, ಹಾಗಾಗಿ ಆರೋಗ್ಯದ ಕಾಳಜಿ ವಹಿಸುವುದು ಹೆಚ್ಚು ಅವಶ್ಯಕವಾಗಿದೆ. ಪ್ರತಿದಿನ ಉತ್ತಮ ಆಹಾರಗಳನ್ನು ಸೇವಿಸುವುದರ ಜತೆಗೆ ವ್ಯಾಯಾಮಗಳನ್ನೂ ಮಾಡುವುದು ಕೂಡ ಅವಶ್ಯಕವಾಗಿದೆ.ಚಿಕನ್ ಮಟನ್ ಗಿಂತಲೂ ಡ್ರೈ ಫುಟ್ಸ್ ಗಳು ಹೆಚ್ಚು ಸಹಕಾರಿ ಹಾಗಾಗಿ ಪ್ರತಿದಿನ ಬಾದಾಮಿ ಗೋಡಂಬಿ ಪಿಸ್ತಾ ಇಂತಹ ಒಣ ಹಣ್ಣುಗಳನ್ನು ತಿನ್ನೋದ್ರಿಂದ ದೇಹ ಬಲಿಷ್ಠವಾಗಿ ಬೆಳೆಯುತ್ತವೆ, ನಿತ್ಯ ಬೆಳಗ್ಗೆ ಓಟ್ಸ್ ಸೇವನೆಯಿಂದ ಕೊಲೆಸ್ಟ್ರಾಲ್‌ನಿಂದ ದೂರವಾಗಬಹುದು. ನಿಗದಿತ ಪ್ರಮಾಣದಲ್ಲಿ ರೆಡ್ ವೈನ್ ಸೇವಿಸಿದರೂ ಕೂಡ ಕೊಲೆಸ್ಟ್ರಾಲ್‌ನಿಂದ ದೂರ ಇರಬಹುದು. ಓಮೇಗಾ ೩ ಆಮ್ಲ ಅಂಶ ಹೊಂದಿರುವ ಮೀನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಇರಬಹುದು.

 

ಅಡುಗೆಗಳಲ್ಲಿ ನಾರಿನಂಶ ಇರುವಂತ ತರಕಾರಿಗಳನ್ನು ಹೆಚ್ಚು ಬಳಸುವುದು ಕೂಡ ಅವಶ್ಯಕವಾಗಿದೆ.ಇದರಲ್ಲಿರುವ ನಾರಿನಂಶ ಹಾಗೂ ಇತರೇ ಪೋಷಕಾಂಶಗಳು ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ. ಬಾದಾಮಿ ಸೇವನೆ ಹೃದಯದ ಆರೋಗ್ಯಕ್ಕೆ ಅತ್ಯುತ್ತಮ. ನಿತ್ಯ ಕೆಲವು ಬಾದಾಮಿ ತಿನ್ನುವುದರಿಂದ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.