ಕೃಷಿ ಇಲಾಖೆ ವತಿಯಿಂದ ಮುಂಗಾರು ಬೆಳೆ ಸಮೀಕ್ಷೆ

Advt_Headding_Middle
Advt_Headding_Middle

2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಸೆಪ್ಟೆಂಬರ್ ಮಾಹೆಯಲ್ಲಿ ಜಿಲ್ಲೆಯಾದ್ಯಂತ ಆರಂಭವಾಗುತ್ತಿದೆ. ಸಮೀಕ್ಷೆ ನಡೆಸುವವರಲ್ಲಿ ಕಂದಾಯ ಕೃಷಿ ತೋಟಗಾರಿಕೆ ರೇಷ್ಮೆ ಇಲಾಖೆ ಸಿಬ್ಬಂದಿಗಳು ಹಾಗೂ ನಿಮ್ಮ ಗ್ರಾಮದವರೇ ಆದ ಯುವಕರು ಬೆಳೆ ಸಮೀಕ್ಷೆಯನ್ನು ಮೊಬೈಲ್ ತಂತ್ರಾಂಶದ ಮೂಲಕ ಕೈಗೊಳ್ಳುತ್ತಾರೆ.

ಮೊಬೈಲ್ ತಂತ್ರಾಂಶದ ಮೂಲಕ ನಡೆಸುವ ಬೆಳೆ ಸಮೀಕ್ಷೆಯ ಆಧಾರದ ಮೇಲೆಯೇ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಇತ್ಯಾದಿಗಳು ನಿರ್ಧಾರವಾಗುವುದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಖುದ್ದು ಹಾಜರಿದ್ದು, ಸಮೀಕ್ಷೆಗಳಿಗೆ ತೋರಿಸಲು ವಿನಂತಿ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗುವ ನಿಮ್ಮ ಗ್ರಾಮದ ಯುವಕರಿಗೆ ನಿಮ್ಮ ಜಮೀನನ್ನು ಮತ್ತು ಬೆಳೆದಿರುವ ಬೆಳೆಯನ್ನು ತೋರಿಸುವುದರ ಮಾನವನ್ನು ಸಹಕರಿಸಿ ರೈತರು ತಮ್ಮ ಮೊಬೈಲ್ ನಂಬರನ್ನು ಬೆಳೆ ಸಮೀಕ್ಷೆ ಮಾಡುವ ಮೂಲಕ ಯುವಕರಿಗೆ ನೀಡಲು ಕೋರಿದೆ.

ಇದರಿಂದ ನಾವು ನಿಮಗೆ ನೀವು ಬೆಳೆದಿರುವ ಬೆಳೆ ಮಾಹಿತಿ ಬಗ್ಗೆ ಎಸ್‌ಎಂಎಸ್ ಕಳುಹಿಸಲು ಸಾಧ್ಯವಾಗುತ್ತದೆ ಎಂದು ಸುಳ್ಯ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.