HomePage_Banner
HomePage_Banner
HomePage_Banner
HomePage_Banner

ಡಿ.ಕೆ.ಶಿವಕುಮಾರ್ ಇ.ಡಿ. ತನಿಖೆ-ಬಿಜೆಪಿಯಿಂದ ರಾಜಕೀಯ ವೈಷಮ್ಯ : ಕಾಂಗ್ರೆಸ್ ಖಂಡನೆ

ರಾಜ್ಯದ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಮೇಲೆ ಬಿಜೆಪಿ ರಾಜಕೀಯ ಸೇಡು ಇಟ್ಟುಕೊಂಡು ವಿನಾಕಾರಣ ತೊಂದರೆಗಳನ್ನು ನೀಡುತ್ತಿದೆ. ಇದನ್ನು ಯುವ ಸಮುದಾಯ ಹಾಗೂ ಕಾಂಗ್ರೆಸ್ ಖಂಡಿಸುತ್ತದೆ ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಸೆ.೩ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಡಿ.ಕೆ.ಶಿ.ಯವರಲ್ಲಿ ಹಣ ಇತ್ತೆಂಬ ಕಾರಣಕ್ಕೆ ಕೇಸು ದಾಖಲಿಸಿ ಇ.ಡಿ. ತನಿಖೆ ಮಾಡಿಸಿ ಅವರಿಗೆ ವಿನಾ ಕಾರಣ ತೊಂದರೆ ನಿಡುತ್ತಿದ್ದಾರೆ. ಬಿಜೆಪಿ ರಾಜಕೀಯ ವೈಷಮ್ಯದಿಂದ ಈ ರೀತಿಯಲ್ಲಿ ಸೇಡು ತೀರಿಸುತ್ತಿದ್ದು ಈ ಕ್ರಮ ಸರಿಯಲ್ಲ. ಈ ದೇಶದಲ್ಲಿ ಕಾಂಗ್ರೆಸ್ 70 ವರ್ಷ ಆಡಳಿತ ಮಾಡಿತ್ತು. ಆದರೆ ಈ ರೀತಿ ಯಾರಿಗೂ ತೊಂದರೆ ನೀಡಿಲ್ಲ. ಕಳೆದ 6-7 ವರ್ಷದಿಂದ ಆಡಳಿತ ನಡೆಸುವ ಬಿಜೆಪಿ ಸೇಡಿನ ರಾಜಕಾರಣಕ್ಕೆ ಮುಂದಾಗಿರುವುದು ದುರಾದೃಷ್ಟ ಎಂದ ಅವರು ಈ ದೇಶದಲ್ಲಿ ಚದಂಬರಂ ಮತ್ತು ಡಿ.ಕೆ.ಶಿ. ಇಬ್ಬರ ಜತೆ ಮಾತ್ರ ಹಣ ಇರುವುದೆ? ಬಿಜೆಪಿಯವರಲ್ಲಿಲ್ಲವೇ ಎಂದು ಹೇಳಿದ ಅವರು, ನೋಟ್ ಬ್ಯಾನ್ ಸಂದರ್ಭದಲ್ಲಿ ಅಮಿತ್ ಶಾ ಮಗನ ಬಿಸಿನೆಸ್ ವ್ಯವಹಾರ 15 ಲಕ್ಷ ಇತ್ತು. ಆದರೆ ಬಳಿಕದ ದಿನಗಳಲ್ಲಿ ಅದು ೮೦ ಕೋಟಿ ರೂ ಗೆ ವಿಸ್ತರಣೆಯಾಗಿದೆ. ಇದು ಹೇಗಾಯಿತು ? ಅದು ದುಡ್ಡಲ್ಲವೆ. ಇದೆಲ್ಲ ಇ.ಡಿ., ಐ.ಟಿ.ಯವರಿಗೆ ಕಾಣುವುದಿಲ್ಲವೇ“ ಎಂದು ಪ್ರಶ್ನಿಸಿದರು.
ಕೇಂದ್ರದ ಬಿಜೆಪಿಯವರು ಏನೇ ಆಟ ಆಡಿದರೂ ಡಿ.ಕೆ.ಶಿ.ಯವರನ್ನು ಏನು ಮಾಡಲು ಸಾಧ್ಯ ಇಲ್ಲ. ಅವರ ಪರ ಕಾಂಗ್ರೆಸ್ ಹಾಗೂ ಯುವ ಸಮುದಾಯ ನಿಲ್ಲುತ್ತದೆ ಎಂದು ಎಂ.ವೆಂಕಪ್ಪ ಗೌಡರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದೀಕ್ ಕೊಕ್ಕೊ, ಶರೀಫ್ ಕಂಠಿ, ಲಕ್ಷ್ಮಣ ಶೆಣೈ, ಕೆ.ಕೆ.ಹರಿಪ್ರಸಾದ್ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.