HomePage_Banner
HomePage_Banner
HomePage_Banner

ಗಣೇಶೋತ್ಸವ ಹತ್ತರ ಹುತ್ತರಿ ಸಮಾರಂಭ- ಮನ ಮುದಗೊಳಿಸಿದ ಸಾಂಸ್ಕೃತಿಕ ವೈಭವ..!

ಮುಕ್ಕೂರು ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಮುಕ್ಕೂರು ಶಾಲಾ ವಠಾರದಲ್ಲಿ ಪ್ರದರ್ಶನಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ಮುದಗೊಳಿಸಿತು.
ಆರಂಭದಲ್ಲಿ ಮುಕ್ಕೂರು ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಪ್ರದರ್ಶನಗೊಂಡಿತ್ತು. ಅನಂತರ ಅವನಿ ಕೋಡಿಬೈಲು ಅವರಿಂದ ಶಿವನ ಕುರಿತಾದ ವರ್ಣನೆಯ ಭರತನಾಟ್ಯ ಮತ್ತು ತ್ರಿನಯನ ನಾಟ್ಯಾಲಯದ ವಿದುಷಿ ಆರಾಧಿತ ಕಾಯರ್‌ಮಾರ್ ಅವರ ಭರತನಾಟ್ಯ ಪ್ರೇಕ್ಷಕ ವರ್ಗದ ಕಣ್ಮನ ಸೆಳೆಯಿತು.    


ಅದಾದ ಬಳಿಕ ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು ಮತ್ತು ಅಪೇಕ್ಷಾ ಪೈ ಕಾಸರಗೋಡು ಅವರಿಂದ ಒಂದುವರೆ ಗಂಟೆಗಳ ಕಾಲ ನಡೆದ ಗಾನಯಾನ ಸಂಗೀತ ರಸಸಂಜೆ ಸಬಿಕರ ಮನ ತಣಿಸಿತು. ರಂಗದರಾಜೆ ಸುಂದರ ರೈ ಮಂದಾರ ಅವರ ನಿರ್ದೇಶನ ಮತ್ತು ಅಭಿನಯದ ಬಲೆ ತೆಲಿಪಾಲೆ ಕಾಮಿಡಿ ಎಕ್ಸ್‌ಪ್ರೆಸ್ ಕಾರ್ಯಕ್ರಮವು ನೋಡುಗರ ಪ್ರಶಂಸೆಗೆ ಪಾತ್ರವಾಯಿತು. ಸಾವಿರಕ್ಕೂ ಅಧಿಕ ಮಂದಿ ಪ್ರೇಕ್ಷಕರು ಸಾಂಸ್ಕೃತಿಕ ಸಂಭ್ರಮವನ್ನು ಕಣ್ತುಂಬಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಿಕ್ಷಕ ಶಶಿಕುಮಾರ್ ಬಿ.ಎನ್. ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.