HomePage_Banner
HomePage_Banner
HomePage_Banner

ಎಣ್ಮೂರು ಗ್ರಾ.ಪಂ. ಸಿಬ್ಬಂದಿ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಮುಖಂಡರ ಆಗ್ರಹ


ಎಣ್ಮೂರು ಗ್ರಾಮ ಪಂಚಾಯತ್ ಸಿಬ್ಬಂದಿಯಾಗಿದ್ದು, ಇತ್ತೀಚೆಗೆ ಅಮಾನತುಗೊಂಡಿರುವ ಮೋಹನ್ ಅವರ ಆತ್ಮಹತ್ಯೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಅವರ ಮನೆಯವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರಾದ ಲಕ್ಷ್ಮೀ ಸುಬ್ರಹ್ಮಣ್ಯ ಹಾಗೂ ಭ್ರಷ್ಠಾಚಾರ ತಡೆ ಮತ್ತು ಅಪರಾಧ ಪತ್ತೆದಳದ ರಾಜ್ಯಾಧ್ಯಕ್ಷ ಪ್ರಶಾಂತ್ ರೈ ಮರುವಂಜ ಆಗ್ರಹಿಸಿದ್ದಾರೆ.

 

ಮೋಹನ್ ಅವರ ಮನೆಗೆ ತೆರಳಿ ಮೃತದೇಹದ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೋಹನ್‌ರವರನ್ನು ಹಣ ಅವ್ಯವಹಾರ ಪ್ರಕರಣದಲ್ಲಿ ವಿನಾ ಕಾರಣ ಬಲಿಪಶು ಮಾಡಲಾಗಿದೆ. ಪಂಚಾಯತ್‌ನ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಇವರ ಮೇಲೆ ಸುಳ್ಳು ಆರೋಪ ಹೊರಿಸಿದೆ. ಇದರಿಂದಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು. ಅವ್ಯವಹಾರದ ಹಣದ ಕುರಿತಂತೆ ಯಾವುದೇ ಕಾರಣಕ್ಕೆ ಈ ಕುಟುಂಬಕ್ಕೆ ತೊಂದರೆ ಕೊಡಬಾರದು ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರವೀಣಾ ರೈ ಮರುವಂಜ, ದಲಿತ ಸೇವಾ ಸಮಿತಿಯ ಮುಖಂಡರಾದ ಉಮೇಶ್ ನೂಜಾಡಿ, ಆನಂದ ನೂಜಾಡಿ ಮೊದಲಾದವರು ಈ ಸಂದರ್ಭದಲ್ಲಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.