Breaking News

ಇಂದು ಸೆ.5 ಶಿಕ್ಷಕರ ದಿನಾಚರಣೆ

Advt_Headding_Middle
Advt_Headding_Middle
Advt_Headding_Middle

 

ಆದರ್ಶ ಶಿಕ್ಷಕ, ಭಾರತ ರತ್ನ ಡಾ| ಎಸ್.ರಾಧಕೃಷ್ಣನ್ ಜನ್ಮದಿನಾಚರಣೆ

ಭಾರತದ ಪುರಾತನ ಪರಂಪರೆಯ ಹಿರಿಮೆ ಗರಿಮೆಗಳನ್ನು ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಜಗತ್ತಿಗೆ ವಿಶ್ಲೇಷಿಸಿ, ನಮ್ಮ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳಲು ಮಾರ್ಗದರ್ಶನ ನೀಡಿದ ಮಹಾನ್ ನಾಯಕರಲ್ಲಿ ಶಿಕ್ಷಣ ಪ್ರೇಮಿ, ಆದರ್ಶ ಶಿಕ್ಷಕ, ಶಿಕ್ಷಣ ತಜ್ಞ, ತತ್ವಜ್ಞಾನಿ, ಉಪರಾಷ್ಟ್ರಪತಿ, ರಾಷ್ಟ್ರಪತಿಯಾಗಿ ಮಾದರಿಯಾಗಿದ್ದಾರೆ. ಸರ್ವೇಪಳ್ಳಿ ಡಾ| ರಾಧಕೃಷ್ಣನ್. ಇವರು ಉತ್ತಮ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಧೀಮಂತ ವ್ಯಕ್ತಿ.


ಮಾನವನ ಜೀವನದಲ್ಲಿ ಶಿಕ್ಷಣ ಬಹಳ ಪ್ರಮುಖ ಪಾತ್ರವಹಿಸುತ್ತದೆ ಮತ್ತು ಜೀವನ ಕ್ರಮವನ್ನು ಬದಲಾಯಿಸಿ, ಸಮಾಜದಲ್ಲಿ ಉತ್ತಮ ಆದರ್ಶ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಎಲ್ಲರಿಗೂ ಶಿಕ್ಷಣ ದೊರೆಯಬೇಕಾದರೆ ಅವರಿಗೆ ಉದಾತ್ತ ಗುಣಗಳನ್ನು ಹೊಂದಿರುವ ಶಿಕ್ಷಕರು ಬೇಕು. ಶಿಕ್ಷಕರು ತಮ್ಮ ಜ್ಞಾನದ ಜೊತೆಗೆ, ಉತ್ತಮ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದಾಗ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ. ಉತ್ತಮ ನಾಗರೀಕರಾಗಲು ಪ್ರೇರಕ ಶಕ್ತಿಯಾಗುತ್ತದೆ. ತಾವು ಪಡೆದ ವಿದ್ಯೆಯನ್ನು ಸರ್ವರಿಗೂ ಧಾರೆ ಎರೆದು ” ಶಿಕ್ಷಕ ವೃತ್ತಿ” ಪವಿತ್ರವೆಂದು ಭಾವಿಸಿ ಉತ್ತಮ ಶಿಕ್ಷಕರೆನಿಸಿಕೊಂಡವರು ಡಾ| ಎಸ್. ರಾಧಕೃಷ್ಣನ್. ತಮ್ಮ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಸೆ.೦೫ರಂದು ಆಚರಿಸುವಂತೆ ಸೂಚಿಸಿದ ಮಹಾನ್ ವ್ಯಕ್ತಿ ಎಸ್. ರಾಧಕೃಷ್ಣನ್.
ರಾಧಕೃಷ್ಣರವರು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿಯಲ್ಲಿರುವ `ತಿರುತ್ತಣಿ’ ಎಂಬ ಪುಟ್ಟ ಗ್ರಾಮದಲ್ಲಿ ಸೆ.೦೫ ೧೮೮೮ರಲ್ಲಿ ಜನಿಸಿದರು. ತಂದೆ ವೀರಸ್ವಾಮಿ, ತಾಯಿ ಸೀತಮ್ಮ.`ಸರ್ವೇಪಲ್ಲಿ’ ಎಂಬುವುದು ಅವರ ಮನೆತನದ ಹೆಸರು. ಪ್ರಾಥಮಿಕ ಶಿಕ್ಷಣವನ್ನು ತಿರುಪತಿಯ ಹರ್ಮನ್ಸ್ ಬರ್ಗ್ ಮಿಷನರಿ ಶಾಲೆ, ನಂತರ ಪ್ರೌಢ ಶಿಕ್ಷಣವನ್ನು ಪಡೆದು, ಕಾಲೇಜು ಶಿಕ್ಷಣವನ್ನು ವೆಲ್ಲೂರಿನ ವ್ಯೂರ್‍ಸ್ ಕಾಲೇಜಿಗೆ ಬಿ.ಎ ಪೂರ್ವದ ಎರಡು ವರ್ಷಗಳ ಕಲಾಪದವಿಗೆ ಸೇರಿದರು. ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎ ಪದವಿ, ತತ್ವ ಶಾಸ್ತ್ರದಲ್ಲಿ ಎಂ.ಎ ಪದವಿ, ನಂತರ ಮದ್ರಾಸಿನ ವಿ.ವಿಯಲ್ಲಿ ತತ್ವ ಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿಯನ್ನು ಗಳಿಸಿದರು. ರಾಧಕೃಷ್ಣನ್ ಶಿಕ್ಷಣ ಇಲಾಖೆಯ ಉಪಸಹಾಯಕ ಇನ್ಸ್‌ಪೆಕ್ಟರ್‌ರಾಗಿ ಮದ್ರಾಸಿನಲ್ಲಿ ಮೊದಲ ಸೇವೆ ಆರಂಭಿಸಿ, ನಂತರ ಮದ್ರಾಸ್ಸಿನ ಪ್ರೆಸಿಡೆನ್ಸಿ ಕಾಲೇಜು, ಸಯ್ಯದ್‌ಪೇಟೆಯ ಟೀಚರ್‍ಸ್ ಟ್ರೈನಿಂಗ್ ಕಾಲೇಜು, ಆಂಧ್ರದ ಅನಂತಪುರ ಹಾಗೂ ರಾಜಮಂಡ್ರಿಯ ಸರಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಿದರು. ನಂತರ ಅವರು ಕೋಲ್ಕತ್ತ ವಿ.ವಿಯಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡು ಮೈಸೂರುನಿಂದ ಹೊರಟ ದಿನ ವಿದ್ಯಾರ್ಥಿಗಳು ಕೊಟ್ಟಂತಹ ವೈಭವದ ಬೀಳ್ಕೋಡುಗೆ ಯಾವ ಚಕ್ರವರ್ತಿಗೂ ದೊರೆತಿಲಾರದು. ವಿದ್ಯಾರ್ಥಿಗಳ ಹೃದಯದಿಂದ ಹೊರಹೊಮ್ಮಿದ ಗುರುಪ್ರೇಮ, ಭಕ್ತಿ, ಪ್ರೀತಿಯ ಚಿಲುಮೆಯಾಗಿ ಉಕ್ಕಿ ಬಂತು. ಅವರನ್ನು ಮಹಾರಾಜ ಕಾಲೇಜಿನಿಂದ ರೈಲು ನಿಲ್ದಾಣದವರೆಗೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆಯನ್ನು ಕಟ್ಟಿರಲಿಲ್ಲ. ಸ್ವತಃ ವಿದ್ಯಾರ್ಥಿಗಳೇ ಎಳೆದೊಯ್ದರು. ಅವರಿಗೆ ಕಾದಿರಿಸಿದ್ದ ಕಂಪಾರ್ಟ್‌ಮೆಂಟ್‌ನ್ನು ಒರಗುದಿಂಬು ಹಾಗೂ ರತ್ನ ಕಂಬಳಿಯನ್ನು ಹಾಸಿ ಮಲಗುವ ಸೀಟನ್ನು, ನೆಲವನ್ನೂ ಹೂವಿನಿಂದ ಸುಪ್ಪತ್ತಿಗೆಯಂತೆ ಮಾಡಿ `ದೇವಮಂದಿರವನ್ನು ಭಕ್ತರು ಅಲಂಕರಿಸುವಂತೆ ಅಲಂಕರಿಸಲಾಗಿತ್ತು. ಆ ದಿನ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು, ಇಡೀ ಊರಿನ ಜನ ಅತ್ತರು. ವಿದ್ಯಾರ್ಥಿಗಳು ತೋರಿದ ವಿಶ್ವಾಸಕ್ಕೆ ಸ್ವತಃ ರಾಧಕೃಷ್ಣನ್‌ರವರ ಕಣ್ಣಿನಲ್ಲಿ ನೀರು ತುಂಬಿ ಬಂದಿತ್ತಂತೆ. ಎಂತಹ ಸನ್ನಿವೇಶ! ನೋಡಿ ಶಿಕ್ಷಕ – ವಿದ್ಯಾರ್ಥಿ ಸಂಬಂಧ ಯಾರೂ ಬಿಡಿಸಲಾರದ ಅನುಬಂಧ ಅಲ್ಲವೇ!.
೧೯೩೯ರಲ್ಲಿ ಕಾಶಿ ವಿದ್ಯಾಲಯದ ಉಪಕುಲಪತಿಯಾಗಿ, ೧೯೪೯ರಲ್ಲಿ ಯುನೆಸ್ಕೋದ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಹೆಗ್ಗಳಿಕೆ ಇವರದು. ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಭಾರತದ ಶಿಕ್ಷಕನೊಬ್ಬ ಮೊಟ್ಟ ಮೊದಲ ಉಪರಾಷ್ಟ್ರಪತಿಯಾಗಿ, ನಂತರ ಭಾರತದ ರಾಷ್ಟ್ರಪತಿಯಾಗಿ ಕೆಲಸ ನಿರ್ವಹಿಸಿದ್ದಾರೆ. ೧೯೫೪ರಲ್ಲಿ ಭಾರತದ ಸರಕಾರದ ಅತ್ಯುನ್ನತ ಪ್ರಶಸ್ತಿಯಾದ `ಭಾರತ ರತ’ ವನ್ನು ನೀಡಿ ಗೌರವಿಸಲಾಯಿತು.
ಭಾರತೀಯ ಶಿಕ್ಷಣಕ್ಕೆ ಇವರು ನೀಡಿದ ಕೊಡುಗೆ ಅಪಾರ. ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಇಡೀ ಜೀವನನ್ನೇ ಮುಡಿಪಾಗಿಟ್ಟವರು. ರಾಧಕೃಷ್ಣರವರು ಭಾರತೀಯರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇವರಿಗೆ ಹಲವಾರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇವರು ಧೀಮಂತ ವ್ಯಕ್ತಿ ಮಾತ್ರವಲ್ಲ ಆದರ್ಶ ಗುರುವೂ ಹೌದು. ಓರ್ವ ಶಿಕ್ಷಣದ ಹಿತ ಚಿಂತಕರಾಗಿ, ಬರಹಗಾರರಾಗಿ, ರಾಜಕೀಯ ಕ್ಷೇತ್ರದ ಪರಿಣಿತರಾಗಿ ಭಾರತದೇಶವನ್ನು ಸಮೃದ್ದಗೊಳಿಸಲು ಶೈಕ್ಷಣಿಕರಣಗೊಳಿಸಿದ ದಾರ್ಶನಿಕ ವ್ಯಕ್ತಿ. ರಾಷ್ಟ್ರದ ಶಿಕ್ಷಣದ ಚಿಲುಮೆಯಾದ ರಾಧಕೃಷ್ಣನ್ ೧೯೭೫ ಏಪ್ರಿಲ್ ೧೭ರಂದು ದಿಗಂತದಲ್ಲಿ ಲೀನರಾದರು. ವಿದ್ಯಾದಾನ ಮಾಡುವ ಗುರು ವೃಂದಕ್ಕೆ ಗೌರವ ನೀಡಿದಾಗ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ.
ರಾಧಕೃಷ್ಣನ್‌ರವರ ವೇದವಾಕ್ಯಗಳು:
* ಮನುಷ್ಯ, ಮನುಷ್ಯರ ನಡುವೆ ಬೇದ ಬಗೆಯದೆ ಆಧ್ಯಾತ್ಮಿಕ ದರ್ಶನವನ್ನು ನಾವು ಸಾಧಿಸಬೇಕು.
* ಜೀವನದಲ್ಲಿ ಉತ್ತಮ ಮೌಲ್ಯಗಳ್ಳನ್ನು ಬೆಳೆಸಿಕೊಳ್ಳಬೇಕು.
* ಮಾನವ ಎಂಬ ಹೆಸರು ಸಾರ್ಥಕವಾಗಲು ವ್ಯಕ್ತಿದ್ವೇಶ, ಅಸೂಯೆಯಿಂದ ಮುಕ್ತನಾಗಬೇಕು.
* ಮಾನವನಾತ್ಮದ ಗರಿಮೆಯನ್ನು ಬಿಂಬಿಸುವ ಸಾಹಿತ್ಯ ಕಲೆಗಳನ್ನು ಪೋಷಿಸಬೇಕಾದದ್ದು ಅತ್ಯಾವಶ್ಯಕ.
* ವ್ಯಕ್ತಿಗೆ ಹೃದಯ ಸಂಸ್ಕಾರ ಮುಖ್ಯ, ಪರಸ್ಪರ ದ್ವೇಷವನ್ನು ಬಿಟ್ಟು ಬದುಕಲು ಕಲಿಯಬೇಕು.
* ಪ್ರತಿ ಮನುಷ್ಯನ ಜೀವನವು ಬೆಲೆಯುಳ್ಳದ್ದು. ಮಾನವ ಚೇತನಕ್ಕೆ ಗೌರವ ತರುವಂತಹ ನಡತೆಯೆ ಧರ್ಮ. ಅದು ನಮ್ಮಲ್ಲಿ ಬೆಳೆಸಿಕೊಳ್ಳಬೇಕು.
ಭಾರತ ಸರ್ಕಾರ ಸೆಪ್ಟೆಂಬರ್ ೫ರಂದು ಡಾ|| ರಾಧಕೃಷ್ಣನ್‌ರವರ ಜನ್ಮದಿನವನ್ನು ೧೯೬೨ರಿಂದ ರಾಷ್ಟ್ರೀಯ ಶಿಕ್ಷಕರ ದಿನ ಎಂದು ಘೋಷಿಸಿ, ಪ್ರತಿವರ್ಷವು ಗೌರವಾರ್ಥವಾಗಿ ಅವರ ಜನ್ಮ ದಿನವನ್ನು ಸೆಪ್ಟೆಂಬರ್ ೫ರಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುವನ್ನು ನೆನೆಯುವ ದಿನ. ಈ ದಿನ ನಾವು ನಮಗೆ ವಿದ್ಯೆ, ಬುದ್ದಿ ಕಲಿಸಿದ, ನಮ್ಮನ್ನು ತಿದ್ದಿ ಉತ್ತಮ ಸ್ಥಾನಕ್ಕೆ ತಂದ ಗುರುವೃಂದಕ್ಕೆ ನಾವೆಲ್ಲರು ತಲೆತಗ್ಗಿಸಿ ನಮಿಸೋಣ, ವಂದಿಸೋಣ. ಅವರಿಗೆ ಸಾಷ್ಟಾಂಗ ಪ್ರಣಾಮಗಳು.
ಎಲ್ಲಾ ವಿದ್ಯಾರ್ಥಿ ವೃಂದಕ್ಕೂ, ಹಿರಿಯ ವಿದ್ಯಾರ್ಥಿಗಳಿಗೂ ನಿಮ್ಮ ಮುಂದಿನ ಜೀವನವು ಸುಗಮವಾಗಲೆಂದು ನಾವೆಲ್ಲರೂ ಶಿಕ್ಷಕವೃಂದದವರು ಹಾರೈಸುತ್ತೆವೆ.
“ಗುರುದೇವೋಭವ”
“ಗುರುವೇ ನಮಃ”

 

ಲೇಖನ: ಕೋಟಿಯಪ್ಪ ಪೂಜಾರಿ. ಸೇರ
ಎಂ.ಎ, ಬಿ.ಎಡ್.
ಮುಖ್ಯ ಶಿಕ್ಷಕರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.