ಅನಾವಶ್ಯಕವಾಗಿ ಕಡತ ತಿರಸ್ಕರಿಸಬೇಡಿ, ಮಾಹಿತಿ ಹಕ್ಕನ್ನು ನಿರ್ಲಕ್ಷಿಸಬೇಡಿ, ಸಾರ್ವಜನಿಕರನ್ನು ಸತಾಯಿಸಬೇಡಿ

Advt_Headding_Middle

ಅಧಿಕಾರಿಗಳಿಗೆ ಲೋಕಾಯುಕ್ತ ಡಿವೈಎಸ್‌ಪಿ ವಿಜಯಪ್ರಸಾದ್ ಪಾಠ
ನಿಯಮದ ಚೌಕಟ್ಟಿನ ಪ್ರಕಾರವಾಗಿ ಕೆಲಸ ಮಾಡದಿರುವುದು ಮತ್ತು ನಿಯಮದ ಚೌಕಟ್ಟಿನ ಹೊರತಾದ ಕೆಲಸಗಳನ್ನು ಮಾಡುವುದು ಎರಡೂ ಸರಿಯಲ್ಲ. ಇಂತಹ ಅಪರಾಧಗಳನ್ನು ಅಧಿಕಾರಿಗಳನ್ನು ಮಾಡಬಾರದು ಎಂದು ಲೋಕಾಯುಕ್ತ ಡಿವೈಎಸ್‌ಪಿ ವಿಜಯಪ್ರಸಾದ್ ಹೇಳಿದ್ದಾರೆ.


ಸುಳ್ಯದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರದ ಬಳಿಕ ಅವರು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.
ಆಡಳಿತದಲ್ಲಿ ದುರಾಡಳಿತವನ್ನು ತಡೆದು ಪಾರದರ್ಶಕವಾಗಿ ಕೆಲಸ ಮಾಡುವ ಉದ್ಧೇಶಗಳಿಂದ ಇಂತಹ ಸಭೆಗಳನ್ನು ಏರ್ಪಡಿಸಲಾಗುತ್ತದೆ. ಅಧಿಕಾರಿಗಳ ಬಗ್ಗೆ, ಸಿಬ್ಬಂದಿಗಳ ಬಗ್ಗೆ ಬಹಳ ಬಾರಿ ದೂರುಗಳು ಬರುತ್ತವೆ, ವಿಚಾರಣೆಗಳು ನಡೆಯುತ್ತಿರುತ್ತದೆ ಈ ಎಲ್ಲಾ ಹಿನ್ನಲೆಯಲ್ಲಿ ತಮ್ಮ ಹುದ್ದೆಯ ಗೌರವಕ್ಕೆ ಅನುಗುಣವಾಗಿ ಬದ್ಧತೆಯಿಂದ ಕೆಲಸ ಮಾಡಬೇಕು. ನಮ್ಮ ಸಮಸ್ಯೆ ಏನೇ ನೂನಿನ ಚೌಕಟ್ಟಿನಲ್ಲಿ ಬಗೆಹರಿಸಬೇಕು ಎಂದು ಅವರು ಹೇಳಿದರು.
ಸಾರ್ವಜನಿಕರು ತಮ್ಮ ಅಗತ್ಯ ಕಾರಣಗಳಿಗಾಗಿ ಕಚೇರಿಗಳಿಗೆ ಬರುತ್ತಾರೆ. ಅಂತವರನ್ನು ಅಲೆದಾಡಿಸುವುದಾಗಲೀ, ಸತಾಯಿಸುವುದಾಗಲೀ ಮಾಡಬಾರದು ಎಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಸಕಾಲ ಪ್ರಕಾರ ಮಾಹಿತಿಯನ್ನು 9೦ ದಿನಗಳೊಳಗೆ ನೀಡಬೇಕೆಂದು ಕಾನೂನು ಇದೆ. ಆದರೆ ಅನೇಕ ಸಂದರ್ಭಗಳಲ್ಲಿ 89ನೇ ದಿನ ಇದನ್ನು ತಿರಸ್ಕರಿಸಲಾಗಿದೆ ಎಂದು ಹೇಳುತ್ತಾರೆ. ಕಾನೂನು ಪ್ರಕಾರ ಅದು ಸರಿ ಇರಬಹುದು. ಆದರೆ ಕಾನೂನಿನ ಎಲ್ಲಾ ನೆಲೆಗಳನ್ನು ನೋಡಿ ಇಂತಹ ನಿರ್ಧಾರ ತೆಗೆದುಕೊಳ್ಳಬೇಕು. ಅನಾವಶ್ಯಕವಾಗಿ ಕಡತಗಳನ್ನು ತಿರಸ್ಕರಿಸುವ ಕ್ರಮ ಸರಿಯಲ್ಲ ಎಂದು ಅವರು ಹೇಳಿದರು.
ಅನೇಕ ಕಚೇರಿಗಳಲ್ಲಿ ಕಡತಗಳ ನಿರ್ವಹಣೆಯೇ ಸಮಸ್ಯೆ. ಕಡತಗಳು ಲಭ್ಯವಿಲ್ಲ ಎಂಬ ಒಂದು ಮಾತಿನ ಷರಾ ಬರೆಯುತ್ತಾರೆ. ಇಂತಹ ಕಾರಣಗಳನ್ನು ಹೇಳಿದರೆ ಇದಕ್ಕೆ ಇಲಾಖಾಧಿಕಾರಿಗಳೇ ಹೊಣೆಯಾಗುತ್ತಾರೆ. ಕೆಲವು ಸಮಯದ ಹಿಂದೆ ನಾನು ಇದೇ ಕಚೇರಿಯಲ್ಲಿ ಇಂತಹ ಒಂದು ಸಮಸ್ಯೆ ಕಂಡಿದ್ದೆ. ಕಡತ ಲಭ್ಯವಿಲ್ಲ ಎಂದು ಅಂದು ಆಧಿಕಾರಿಗಳು ಬರೆದಿದ್ದರು. ಫಲಾನುವಿ 6 ತಿಂಗಳು ಕಚೇರಿಗೆ ಅಲೆದಾಡಬೇಕಾಯಿತು. ಹಾಗಾದರೆ ನಮ್ಮವರೇ ಕಡತಗಳನ್ನು ಹುಡುಕಿಕೊಳ್ಳುತ್ತಾರೆ ಎಂದು ಆಗಿನ ತಹಶೀಲ್ದಾರರಿಗೆ ಹೇಳಿದ್ದೆ. ಆದರೆ ಅವರು ಅವಕಾಶ ನೀಡಲಿಲ್ಲ. 6 ತಿಂಗಳಲ್ಲಿ ಸಿಗದ ಕಡತ ಮೂರೇ ದಿನದಲ್ಲಿ ದೊರೆಯಿತು ಎಂದವರು ಹೇಳಿದರು.
ಮಾಹಿತಿ ಹಕ್ಕು ಕಾನೂನಿನ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಾರದು. ಕಚೇರಿಗಳಿಗೆ ಬರುವ ಮತ್ತು ಹೋಗುವ ವಿಚಾರದಲ್ಲಿ ಸರಿಯಾದ ಸಮಯ ಪಾಲನೆ ಮಾಡಬೇಕು. ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಬದಲಾಗುವ ಸಂದರ್ಭ ಚಾರ್ಜ್ ಟೇಕ್ ಓವರ್ ಮತ್ತು ಹ್ಯಾಂಡ್ ಓವರ್ ಸಮರ್ಪಕವಾಗಿ ನಡೆಯಬೇಕು. ಮೇಲಾಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗಳ ಕೆಲಸಗಳ ಬಗ್ಗೆ ಸದಾ ನಿಗವಹಿಸಬೇಕು. ಸಮಸ್ಯಾತ್ಮಕ ಕಡತಗಳನ್ನು ಸುರಕ್ಷಿತವಾಗಿ ಇರಿಸಬೇಕು. ಕಚೇರಿಗಳಲ್ಲಿ ಕ್ಯಾಶ್ ಡಿಕ್ಲರೇಶನ್ ಪುಸ್ತಕ ಇಡಬೇಕು. ಕಡತಗಳನ್ನು ಶಿಷ್ಠಾಚಾರ ಪ್ರಕಾರ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದ ಡಿವೈಎಸ್‌ಪಿಯವರು ಅಧಿಕಾರಿಗಳ ಮೇಲೆ ಲೋಕಾಯುಕ್ತದ ಕಣ್ಣು ಯಾವಾಗಲೂ ಇರುತ್ತದೆ. ಎಸಿಬಿ ಬಂದು ಲೋಕಾಯುಕ್ತ ದುರ್ಬಲಗೊಂಡಿತೆಂದು ಯಾರೂ ಭಾವಿಸುವುದು ಬೇಡ. ಲೋಕಾಯುಕ್ತ ಹಿಂದಿನಂತೆಯೇ ಕರ್ತವ್ಯ ನಿರ್ವಹಿಸುತ್ತದೆ. ಮಾಧ್ಯಮಗಳ ಮೂಲಕ, ಸಾರ್ವಜನಿಕರ ಮೂಲಕ ಮತ್ತು ಗುಪ್ತ ವರದಿಯ ಮೂಲಕ ನಾವು ಮಾಹಿತಿಗಳನ್ನು ಸಂಗ್ರಹಿಸುತ್ತಿರುತ್ತೇವೆ. ತನಿಖೆಯ ಹಂತಗಳಲ್ಲಿ ಎಲ್ಲಾ ಹಂತಗಳಲ್ಲೂ ನಾವು ತನಿಖೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ಇಲಾಖೆಯ ಫೋನ್‌ನಂಬರ್‌ಗಳನ್ನು ಬಳಸುವವರು ಯಾವುದೇ ಸಂದರ್ಭಗಳಲ್ಲಿ ಸಾರ್ವಜನಿಕರು ಕರೆ ಮಾಡಿದರೆ ಅದಕ್ಕೆ ಉತ್ತರಿಸಬೇಕಾಗುತ್ತದೆ ಎಂದ ಅವರು ಲೋಕಾಯುಕ್ತ ಸಿಬ್ಬಂದಿಗಳು ಈಗ ಅಂಗನವಾಡಿ, ಆಸ್ಪತ್ರೆ ಹಾಗೂ ಹಾಸ್ಟೆಲ್‌ಗಳಿಗೆ ಬೇಟಿ ನೀಡುವ ಕ್ರಮ ಜಾರಿಗೊಳಿಸಿದೆ ಎಂದರು.
ದಾಖಲೆ ಮನೆಗೆ ಕೊಂಡೊಯ್ಯಬೇಡಿ
ಇಲಾಖಾಧಿಕಾರಿಗಳು ದಾಖಲೆಗಳನ್ನು ಮನೆಗೆ ಕೊಂಡೊಯ್ಯುವಾಗ ನೂರು ಬಾರಿ ಆಲೋಚನೆ ಮಾಡಬೇಕಾಗುತ್ತದೆ. ಡಿಸಿ, ಎಸ್ಪಿಯಂತಹ ಅಧಿಕಾರಿಗಳಿಗೆ ಅದರ ಅನಿವಾರ್ಯತೆ ಇರಬಹುದು. ಆದರೆ ತಾಲೂಕು ಮಟ್ಟದ ಅಧಿಕಾರಿಗಳು ಹೀಗೇ ಮಾಡಬಾರದು ಎಂದ ಅವರು ಹಿಂದೊಮ್ಮೆ ನಮ್ಮ ಲೋಕಾಯುಕ್ತ ಉಗ್ರಾಣಿಯೊಬ್ಬರ ಮನೆಗೆ ಧಾಳಿ ಮಾಡಿತ್ತು. ಅವರ ಮನೆಯಲ್ಲಿ ತಹಶೀಲ್ದಾರ್ ಛೇಂಬರ್‌ಗಿಂತಲೂ ದೊಡ್ಡ ವ್ಯವಸ್ಥೆ ಇತ್ತು. 8೦ಕ್ಕಿಂತಲೂ ಅಧಿಕ ಕಡತಗಳು ಅವರ ಮನೆಯಲ್ಲಿತ್ತು ಎಂದು ಪ್ರಸ್ತಾಪಿಸಿದರು.
ತಹಶೀಲ್ದಾರ್‌ಗೆ ಶ್ಲಾಘನೆ
ಸುಳ್ಯ ತಹಶೀಲ್ದಾರ್ ಜನಪರವಾಗಿ ಮತ್ತು ಸಾರ್ವಜನಿಕ ಸ್ಪಂದನೆಯ ಮೂಲಕ ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿ ಮಾಧ್ಯಮ ಮಿತ್ರರ ಮೂಲಕ ನಮಗೆ ಲಭಿಸಿದೆ. ನಮ್ಮ ಎಸೆಸ್‌ಮೆಂಟ್‌ನಲ್ಲೂ ಇದು ಗೊತ್ತಾಗಿದೆ ಎಂದ ಅವರು ಸಮಸ್ಯೆಗಳಿದ್ದರೆ ಮೊದಲು ಅವರ ಗಮನಕ್ಕೆ ತನ್ನಿ ಎಂದೂ ಹೇಳಿದರು.
ಡಿವೈ ಎಸ್‌ಪಿ ಕಲಾವತಿ ಸರ್ಕಲ್ ಇನ್ಸ್‌ಪೆಕ್ಟರ್ ಭಾರತಿ, ತಹಶೀಲ್ದಾರ್ ಕುಂಞಿ ಅಹ್ಮದ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.