ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಯುವ ಘಟಕ ಹಾಗೂ ಸರಕಾರಿ ವೆನ್ಲಾಕ್ ಆಸ್ಪತ್ರೆ ಸಹಯೋಗದೊಂದಿಗೆ ಸಾರ್ವಜನಿಕ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆ.೨೫ಚರಂದು ಜರಗಿದ್ದು, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಯವರು ಕಾರ್ಯಕ್ರಮ ಉದ್ಘಾಟಿಸಿದರು. ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಭಾಧ್ಯಕ್ಷತೆಯನ್ನು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಡಾ. ದಾಮೊದರ ನಾರಾಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಉತ್ತರ ಸಹಾಯಕ ಪೋಲೀಸ್ ಆಯುಕ್ತ ಶ್ರಿನಿವಾಸ ಗೌಡ ಹಾಗೂ ಜ್ಞಾನ ರತ್ನ ಎಜ್ಯುಕೇಶನ್ & ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಭಾಸ್ಕರ್ ಗೌಡ ದೇವಸ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗೌರವ ಉಪಸ್ಥಿತಿಯಲ್ಲಿ ವೇದಿಕೆಯಲ್ಲಿದ್ದ ವೆನ್ಲಾಕ್ ಸರಕಾರಿ ಆಸ್ಫತ್ರೆಯ ಆರೋಗ್ಯಾಧಿಕಾರಿ ಡಾ. ಶರತ್ ಕುಮಾರ್ ಮತ್ತು ವಿಜಿಯಸ್ ಸೌಹಾರ್ದ ಸೊಸೈಟಿ ಯ ಅಧ್ಯಕ್ಷ ಲೋಕಯ್ಯ ಗೌಡ ಸೇರಿದಂತೆ ಎಲ್ಲರು ಶುಭ ಹಾರೈಸಿದರು. ಶಿವಪ್ರಸಾದ್ ಹಾಲೆಮಜಲು ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ರಾಘವೇಂದ್ರ ವಂದಿಸಿದರು. ಸುಮಾರು ೧೫೦ ಜನ ರಕ್ತ ದಾನ ಮಾಡಿದರು. ಮಂಗಳೂರು ಪೋಲೀಸ್ ಸಹಾಯಕ ಆಯುಕ್ತ ಶ್ರೀನಿವಾಸ್ ಗೌಡರು ಸಭಾ ಕಾರ್ಯಕ್ರಮಕ್ಕಿಂತ ಮೊದಲು ರಕ್ತ ದಾನ ಮಾಡಿ ರಕ್ತ ದಾನಿಗಳಿಗೆ ಸ್ಫೂರ್ತಿನೀಡಿದರು.