HomePage_Banner
HomePage_Banner
HomePage_Banner
HomePage_Banner

ಕೊಲ್ಲಮೊಗ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಸಿ. ವಸಂತ ನಿಧನ

ಕೊಲ್ಲಮೊಗ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ, ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಬಿ.ಸಿ. ವಸಂತರವರು ಇಂದು ಅಪರಾಹ್ನ ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ೬೩ ವರ್ಷ ವಯಸ್ಸಾಗಿತ್ತು.
ತೀವ್ರ ಸಕ್ಕರೆ ಖಾಯಿಲೆಯಿದ್ದ ಅವರಿಗೆ ಇತ್ತಿಚೆಗೆ ಪಾದದಲ್ಲಿ ಹುಣ್ಣು ಆಗಿ ಗಾಯ ಉಲ್ಬಣಗೊಂಡಿತ್ತು. ಕಾಲಿನ ಬೆರಳುಗಳನ್ನು ತುಂಡರಿಸಬೇಕೆಂದು ವೈದ್ಯರು ಸಲಹೆ ನೀಡಿದ್ದರು. ಸುಳ್ಯದಲ್ಲಿ ಆಸ್ಪತ್ರೆಗೆ ದಾಖಲಾಗಿ ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೆರಳುಗಳನ್ನು ತುಂಡರಿಸುವ ಉದ್ದೇಶಕ್ಕಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳೆದ ಶುಕ್ರವಾರ ಹೋಗಿ ದಾಖಲಾಗಿದ್ದರು. ಅಲ್ಲಿ ಇಂದು ಬೆಳಿಗ್ಗೆ ಬೆರಳುಗಳ ಬೇರ್ಪಡಿಕೆಗಾಗಿ ಆಪರೇಷನ್ ಥಿಯೇಟರಿಗೆ ಕರೆದೊಯ್ದು ಆಪರೇಷನ್ ನಡೆಸಲಾಗಿತ್ತು. ಆದರೆ ಆಪರೇಷನ್ ಥಿಯೇಟರ್‌ನಲ್ಲೇ ತೀವ್ರ ಹೃದಯಾಘಾತಕ್ಕೊಳಗಾಗಿ ಅಪರಾಹ್ನ ಬಿ.ಸಿ.ವಸಂತರು ಕೊನೆಯುಸಿರೆಳೆದರು.
ಅವಿವಾಹಿತರಾಗಿದ್ದ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಕೊಲ್ಲಮೊಗ್ರು ಗ್ರಾ.ಪಂ. ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ಮೂರನೇ ಬಾರಿ ಆಯ್ಕೆಯಾಗಿ ಗ್ರಾ.ಪಂ. ಸದಸ್ಯರಾಗಿದ್ದರು. ಕಾಂಗ್ರೆಸ್‌ನ ವಲಯ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಅರೆಭಾಷೆ ಅಕಾಡೆಮಿಯ ಸದಸ್ಯರಾಗಿ ೩ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
ಕಲ್ಮಕಾರು ಗ್ರಾಮದ ದಿ.ಬಾಕಿಲ ಚಿನ್ನಪ್ಪ ಗೌಡರ ಪುತ್ರರಾದ ಬಿ.ಸಿ. ವಸಂತರು  ಅಣ್ಣ ಸುರೇಶ್, ತಮ್ಮಂದಿರಾದ ಯಶೋಧರ ಮತ್ತು ದಿನೇಶ್, ತಂಗಿ ಶ್ರೀಮತಿ ಕುಸುಮಾರವರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.