HomePage_Banner
HomePage_Banner
Breaking News

ಸೆ. 28: ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದಲ್ಲಿ “ಅಮ್ಮನೆಡೆ ನಮ್ಮ ನಡೆ” ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮ

ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ. 28ರಂದು ಬೆಳಿಗ್ಗೆ “ಅಮ್ಮನೆಡೆ ನಮ್ಮ ನಡೆ” ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಎಣ್ಮೂರು ಸೀತಾರಾಮಾಂಜನೇಯ ಭಜನಾ ಮಂದಿರ ಕೋಟಿ ಚೆನ್ನಯ ನಗರದಲ್ಲಿ ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ದೇವಿಪ್ರಸಾದ್ ಕಾನತ್ತೂರು ಮತ್ತು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಯಸೂರ್ಯ ರೈಯವರು ಉದ್ಘಾಟನೆ ಮಾಡಲಿರುವರು. ಬಳಿಕ ಎಣ್ಮೂರು ಭಜನಾ ಮಂದಿರದಿಂದ ಜಾಥಾ ಸಾಗಿ ನಿಂತಿಕಲ್ಲು ಪೇಟೆ, ಅಲೆಕ್ಕಾಡಿ ಮಾರ್ಗವಾಗಿ ಕೇರ್ಪಡ ದೇವಸ್ಥಾನ ತಲುಪಿದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಸ್ವಾಮಿ ದೇವಸ್ಥಾನದ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ ಪಿ.ಡಿ. ಸಭಾಧ್ಯಕ್ಷ ತೆ ವಹಿಸಲಿರುವರು. ಕಡಬ ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣ ಭಟ್ ಧಾರ್ಮಿಕ ಉಪನ್ಯಾಸ ನೀಡಲಿರುವರು.

ನಿಂತಿಕಲ್ಲು ಕೆ ಎಸ್ ಜಿ ಸಮೂಹ ವಿದ್ಯಾಸಂಸ್ಥೆಯ ನಿರ್ದೇಶಕ ಕುಮಾರಸ್ವಾಮಿ ಕೆ.ಎಸ್., ದೇವಳದ ಸಮಿತಿ ಮಾಜಿ ಅಧ್ಯಕ್ಷ ವಸಂತ ನಡುಬೈಲು ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಭಾಗ್ಯ ಪ್ರಸನ್ನ, ಪ್ರಗತಿಪರ ಕೃಷಿಕ ಪದ್ಮನಾಭ ರೈ ಎಂಜೀರು, ವಿಶೇಷ ಪಾದಯಾತ್ರೆಯ ಸಂಚಾಲಕರಾದ ರಘುನಾಥ ರೈ ಅಲೆಂಗಾರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಪ್ರಗತಿ ಶಾಲೆಯವರಿಂದ ಆಕರ್ಷಕ ಕುಣಿತ ಭಜನೆ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದವರಿಂದ ಆಕರ್ಷಕ ಚೆಂಡೆ ಪ್ರದರ್ಶನ, ಹತ್ತಕ್ಕೂ ಅಧಿಕ ಹುಲಿವೇಷ ಕುಣಿತ ಜಾಥಾದ ವಿಶೇಷತೆ ಇರುತ್ತದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.